Asianet Suvarna News Asianet Suvarna News

COVID19: ರಾಜ್ಯದ ಮೇಲೆ ಇಬ್ಬರು ಕೇಂದ್ರ ಸಚಿವರ ನಿಗಾ

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಹಾಗೂ ವೈರಾಣು ಹಬ್ಬುವುದನ್ನು ತಡೆಗಟ್ಟುವ ಕ್ರಮಗಳ ಮೇಲೆ ನಿಗಾ ವಹಿಸಿ ನಿರ್ವಹಿಸಲು ಸಂಪುಟ ಕಾರ್ಯಪಡೆಯೊಂದನ್ನು ಕೇಂದ್ರ ಸರ್ಕಾರ ರಚಿಸಿದೆ.

 

two central ministers given responsibility to monitor work against CoronaVirus in karnataka
Author
Bangalore, First Published Mar 27, 2020, 11:48 AM IST

ನವದೆಹಲಿ(ಮಾ.27): ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಹಾಗೂ ವೈರಾಣು ಹಬ್ಬುವುದನ್ನು ತಡೆಗಟ್ಟುವ ಕ್ರಮಗಳ ಮೇಲೆ ನಿಗಾ ವಹಿಸಿ ನಿರ್ವಹಿಸಲು ಸಂಪುಟ ಕಾರ್ಯಪಡೆಯೊಂದನ್ನು ಕೇಂದ್ರ ಸರ್ಕಾರ ರಚಿಸಿದೆ.

ಕರ್ನಾಟಕದ ಜಿಲ್ಲೆಗಳ ಜವಾಬ್ದಾರಿಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರಿಗೆ ವಹಿಸಲಾಗಿದೆ. ಇದೇ ವೇಳೆ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಕೇರಳ ಹಾಗೂ ಲಕ್ಷದ್ವೀಪದ ಉಸ್ತುವಾರಿ ವಹಿಸಲಾಗಿದೆ.

ಸೀಫುಡ್ ಪ್ರಿಯರಿಗೆ ಸ್ಯಾಡ್ ನ್ಯೂಸ್: ಮೂರ್ನಾಲ್ಕು ತಿಂಗಳು ಮೀನು ಸಿಗೋದು ಕಷ್ಟ

ಈ ಸಚಿವರು ತಮಗೆ ವಹಿಸಲಾದ ಜಿಲ್ಲೆಗಳಲ್ಲಿ ಕೊರೋನಾ ವೈರಸ್‌ ಸೋಂಕು ವ್ಯಾಪಿಸಿದ ಬಗ್ಗೆ, ಅದರ ನಿಯಂತ್ರಣಕ್ಕೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ, ಸೋಂಕಿತರು ಹಾಗೂ ಶಂಕಿತರಿಗೆ ನೀಡಲಾಗುತ್ತಿರುವ ವೈದ್ಯಕೀಯ ನೆರವಿನ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಿದೆ.

Follow Us:
Download App:
  • android
  • ios