Asianet Suvarna News Asianet Suvarna News

ಕೊರೋನಾ ಎಫೆಕ್ಟ್: ಆದಾಯ ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್

ಕೊರೋನಾ ವೈರಸ್ ಭೀತಿಯಿಮದ ಜನರಿಗೆ ಆಗುವ ತೊಂದರೆಗಳನ್ನ ಅರಿತಿರುವ ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ. ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಹಾಗಾದ್ರೆ ಅವರು ಏನೆಲ್ಲಾ ಘೋಷಿಸಿದರು ಎನ್ನುವ ವಿವರ ಈ ಕೆಳಗಿನಂತಿದೆ.

Nirmala Sitharaman announces extension of statutory deadlines  it return
Author
Bengaluru, First Published Mar 24, 2020, 3:11 PM IST

ನವದೆಹಲಿ, (ಮಾ.24): ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸೇರಿದಂತೆ, ದೇಶದ ರಾಜ್ಯ ಸರ್ಕಾರಗಳು ಸಹ ಇನ್ನಿಲ್ಲದ ಕಸರತ್ತು ನಡೆಸಿದೆ. ಇದಕ್ಕಾಗಿ ಕೆಲ ದಿಟ್ಟ ಕ್ರಮಗಳನ್ನ ಕೈಗೊಳ್ಳುತ್ತಿವೆ.

ಕೊರೋನಾ ವೈರಸ್‌ಗೆ ಸಂಬಂಧಿಸಿದಂತೆ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತೊಂದೆಡೆ ಕೊರೋನಾ ಭೀತಿಯಿಂದ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳನ್ನ ಲಾಕ್‌ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಎದುರಗಬಹುದಾದ ತೊಂದರೆಗಳನ್ನ ನಿವಾರಿಸಲು ತೆರಿಗೆಯಲ್ಲಿ ಕೆಲವು ವಿನಾಯಿತಿ ನೀಡಲಾಗಿದೆ.

ಈ ಬಗ್ಗೆ ಕೇಂದ್ರ ವಿತ್ತ (ಹಣಕಾಸು) ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಮಂಗಳವಾರ) ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿ ಘೋಷಣೆ ಮಾಡಿದರು.

ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿರುವ ಹೈಲೆಟ್ಸ್
*2018-19ರ ಐಟಿ ರಿಟರ್ನ್ಸ್ ಕೊನೆ ದಿನವನ್ನು ಜೂನ್ 31,2020ಗೆ ವಿಸ್ತರಣೆ ಮಾಡಲಾಗಿದೆ.
* ತೆರಿಗೆ ಪಾವತಿ ವಿಳಂಬಕ್ಕೆ ಬಡ್ಡಿ ದರವನ್ನ ಶೇ.12ರಿಂದ 9ಕ್ಕೆ ಇಳಿಕೆ.
* TDSಗೆ ಅವಧಿ ವಿಸ್ತರಣೆ ಇಲ್ಲ.( ವಿಳಂಬವಾದ ಹೂಡಿಕೆಗೆ ಶೇ.18ರ ಬದಲು ಶೇ.9ಕ್ಕೆ ಇಳಿಕೆ.
*ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31ಕ್ಕೆ ನೀಡಲಾಗಿದ್ದ ಕೊನೆ ದಿನಾಂಕವನ್ನ ಜೂನ್ 30,2020ರ ವರೆಗೆ ವಿಸ್ತರಣೆ.
* ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳ GSTರಿಟರ್ನ್ಸ್ ಸಲ್ಲಿಕೆಗೆ ಇದ್ದ ಕೊನೆ ದಿನಾಂಕವನ್ನ ಜೂನ್ 30,2020ರ ವರೆಗೆ ಮುಂದೂಡಿಕೆ
*5 ಕೋಟಿ ರೂಗಿಂತ ಹೆಚ್ಚು ವಹಿವಾಟು ನಡೆಸುವ ಕಂಪನಿಗಳಿಗೆ ಲೇಟ್ ಫೀಸ್‌ಗೆ ದಂಡವಿಲ್ಲ.
*GST ಪರಿಹಾರ ಯೋಜನೆ ಅಡಿ ಲಾಭ ಪಡೆಯುವವರಿಗೆ ಜೂನ್ 30ರವರೆಗೆ ಗಡುವು.
* ಯಾವುದೇ ATMನಿಂದ ಎಷ್ಟು ಸಲ ಹಣ ಡ್ರಾ ಮಾಡಿದರೂ ಚಾರ್ಜ್ ಇಲ್ಲ (ಮುಂದಿನ ಮೂರು ತಿಂಗಳು ವರೆಗೆ ಮಾತ್ರ)
* ಆಮದು / ರಫ್ತುದಾರರಿಗೆ ಪರಿಹಾರ: ಕಸ್ಟಮ್ಸ್ ಇಲಾಖೆ ತನ್ನ ಕರ್ತವ್ಯ ಪಾಲನೆಯಲ್ಲಿದೆ.  ಜೂನ್ 30, 2020 ರವರೆಗೆ  ಈ ವಿಭಾಗವು 24x7 ಅತ್ಯಗತ್ಯ ಸೇವೆಯಾಗಿ ಮುಂದುವರಿಯಲಿದೆ.

 

Follow Us:
Download App:
  • android
  • ios