ಲಕ್ನೋ(ಮಾ.30): ಕೊರೋನಾ ತಾಂಡವದ ನಡುವೆಯೂ ಮಾನವೀಯತೆ ಮೆರೆಯುವ ಘಟನೆಯಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಬುಲಂದರ್‌ ಶಾನಲ್ಲಿ ಮುಸ್ಲಿಂ ಬಾಂಧವರು ಹಿಂದೂ ಸಹೋದರನ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಹೌದು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರವಿ ಶಂಕರ್‌ ಎಂಬವರು ಶುಕ್ರವಾರದಂದು ಮೃತಪಟ್ಟಿದ್ದಾರೆ. ಹೀಗಿರುವಾಗ ಲಾಕ್‌ಡೌನ್‌ನಿಂದಾಗಿ ತಮಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಮೃತರ ಕುಟುಂಬ ಸದಸ್ಯರು ಹಳ್ಳಿಯ ಮುಖ್ಯಸ್ಥರಿಗೆ ಕರೆ ಮಾಡಿ ತಿಳಿಸಿದ್ದಾರೆ. 

 ಈ ಕುರಿತಾಗಿ ಪ್ರತಿಕ್ರಿಯಿಸಿದ ಹಳ್ಳಿ ಮುಖ್ಯಸ್ಥೆ ಅಫ್ರೋಜಿ ಬೇಗಂ ಮಗ ಜಾಹಿದ್ ಅಲಿ 'ರವಿ ಶಂಕರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶುಕ್ರವಾರ ಮೃತಪಟ್ಟಿದ್ದಾರೆ. ಹೀಗಿರುವಾಗ ಅವರ ಕುಟುಂಬ ಸದಸ್ಯರಿಗೆ ನಾವು ಕರೆ ಮಾಡಿ ಮಾಹಿತಿ ನೀಡಿದೆವು. ಆದರೆ ಸರ್ಕಾರ ಹೇರಿರುವ ಲಾಕ್‌ಡೌನ್‌ನಿಂದಾಗಿ ಬರಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದರು' ಎಂದಿದ್ದಾರೆ.

ಕೊರೋನಾ ಪೀಡಿತರ ಸಹಾಯಕ್ಕೆ ತಮ್ಮ ಪಿಗ್ಗಿ ಹಣವನ್ನು ನೀಡಿದ ಮಕ್ಕಳು!

'ಹೀಗಿರುವಾಗ ಅವರ ಅಸಹಾಯಕತೆ ಅರ್ಥೈಸಿಕೊಂಡು ಹಳ್ಳಿಯ ಮುಸಲ್ಮಾನರೆಲ್ಲಾ ಮೃತನ ಮನೆಗೆ ತೆರಳಿದೆವು ಹಾಗೂ ಅರ್ಚಕರನ್ನು ಕರೆಸಿದೆವು. ಹಿಂದೂ ಸಂಪ್ರದಾಯದಂತೆ ಚಟ್ಟ ಕಟ್ಟಿ, ಮಂತ್ರ ಪಠಿಸಿ ಕಾಳೀ ನದಿ ತೀರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದೇವೆ' ಎಂದೂ ಅಲಿ ತಿಳಿಸಿದ್ದಾರೆ.