Asianet Suvarna News Asianet Suvarna News

ವಲಸೆ ಬಂದ ಹಕ್ಕಿಗಳಿಗೆ ತುತ್ತಿನ ವ್ಯವಸ್ಥೆ

ಕುಶಾಲನಗರ ಬಸ್‌ ನಿಲ್ದಾಣದ ಆವರಣದಲ್ಲಿರುವ ಮರಗಿಡಗಳಲ್ಲಿ ಪ್ರತಿ ವರ್ಷದಂತೆ ಈ ಬಾರಿ ಕೂಡ ಪಕ್ಷಿಗಳ ಗುಂಪೊಂದು ವಲಸೆ ಬಂದು ವಂಶಾಭಿವೃದ್ಧಿ ಮಾಡುವ ಕಾಯಕದಲ್ಲಿ ತೊಡಗಿದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರು ಒದಗಿಸಲು ಸ್ಥಳೀಯ ಪರಿಸರ ಪ್ರೇಮಿಗಳು ಮುಂದಾಗಿದ್ದಾರೆ.

 

Madikeri people gives water and food to migratory birds
Author
Bangalore, First Published Apr 2, 2020, 9:00 AM IST

ಕುಶಾಲನಗರ(ಎ.02): ಕುಶಾಲನಗರ ಬಸ್‌ ನಿಲ್ದಾಣದ ಆವರಣದಲ್ಲಿರುವ ಮರಗಿಡಗಳಲ್ಲಿ ಪ್ರತಿ ವರ್ಷದಂತೆ ಈ ಬಾರಿ ಕೂಡ ಪಕ್ಷಿಗಳ ಗುಂಪೊಂದು ವಲಸೆ ಬಂದು ವಂಶಾಭಿವೃದ್ಧಿ ಮಾಡುವ ಕಾಯಕದಲ್ಲಿ ತೊಡಗಿದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರು ಒದಗಿಸಲು ಸ್ಥಳೀಯ ಪರಿಸರ ಪ್ರೇಮಿಗಳು ಮುಂದಾಗಿದ್ದಾರೆ.

ಕಳೆದ 3 ತಿಂಗಳಿನಿಂದ ಸುಮಾರು 50ಕ್ಕೂ ಅಧಿಕ ಹಕ್ಕಿಗಳ ಕುಟುಂಬಗಳು ಗೂಡುಗಳನ್ನು ಕಟ್ಟಿಕೊಂಡು ತಮ್ಮ ನೂರಾರು ಮರಿಗಳೊಂದಿಗೆ ವಾಸವಾಗಿವೆ. ಸ್ವಲ್ಪ ದಿನಗಳ ನಂತರ ತಮ್ಮ ಮೂಲಸ್ಥಾನಕ್ಕೆ ಹಾರಿಹೋಗುವುದು ವಾಡಿಕೆಯಾಗಿದೆ.

1ರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್: ಕೊರೋನಾದಿಂದ ಸಿಕ್ತು ಗ್ರೇಸ್

ಕಳೆದ ಕೆಲವು ದಿನಗಳಿಂದ ಪಟ್ಟಣ ಸಂಪೂರ್ಣ ಸ್ತಬ್ಧಗೊಂಡ ಹಿನ್ನೆಲೆಯಲ್ಲಿ ಈ ಪಕ್ಷಿಗಳಿಗೆ ಆಹಾರ ಸಂಗ್ರಹಕ್ಕೆ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಸ್ಥಳೀಯ ಕಾವೇರಿ ಪರಿಸರ ರಕ್ಷಣಾ ಬಳಗದ ಪ್ರಮುಖರು ಸೇರಿ ಪಕ್ಷಿಗಳ ಗೂಡಿನ ಬಳಿ ಮರದ ಮೇಲೆ ಸಣ್ಣಪುಟ್ಟಬಕೆಟ್‌ಗಳಲ್ಲಿ ನೀರು ತುಂಬಿಸಿ ಅಕ್ಕಿ ಕಾಳುಗಳನ್ನು ಇಟ್ಟು ಪಕ್ಷಿಗಳ ಆಹಾರ ಕೊರತೆಯನ್ನು ನೀಗಿಸುವ ಯತ್ನಕ್ಕೆ ಮುಂದಾಗಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ.

Follow Us:
Download App:
  • android
  • ios