Asianet Suvarna News Asianet Suvarna News

6 ದಿನದಲ್ಲಿ ತುಸು ಕಡಿವಾಣ, ಇನ್ನು 15 ದಿನ ಮನೆಯಲ್ಲೇ ಇದ್ದು ಕೊರೋನಾ ಮಣಿಸೋಣ!

ಲಾಕ್‌ಡೌನ್‌ ಎಫೆಕ್ಟ್: 6 ದಿನದಲ್ಲಿ ಸೋಂಕಿಗೆ ತುಸು ಕಡಿವಾಣ| ಇನ್ನು 15 ದಿನ ಮನೆಯಲ್ಲೇ ಇದ್ದು ಕೊರೋನಾ ಮಣಿಸೋಣ!| ಭಾರತದಲ್ಲಿ ಕೊರೋನಾವೈರಸ್‌ ಸೋಂಕು/ಸಾವು ಬೇರೆ ದೇಶಗಳಷ್ಟುತೀವ್ರ ಪ್ರಮಾಣದಲ್ಲಿ ಏರಿಲ್ಲ| ಲಾಕ್‌ಡೌನ್‌ನಿಂದಾಗಿಯೇ ಭಾರತ ಇನ್ನೂ ಸುರಕ್ಷಿತ ಜೋನ್‌ನಲ್ಲಿ

Lockdown Effect Partial Control on infection stay 15 more days at home to defeat coronavirus
Author
Bangalore, First Published Mar 31, 2020, 7:06 AM IST

ನವದೆಹಲಿ(ಮಾ.31): 21 ದಿನಗಳ ಲಾಕ್‌ಡೌನ್‌ನಲ್ಲಿ 6 ದಿನ ಕಳೆದಿದೆ. ಭಾರತದಲ್ಲಿ ಕೊರೋನಾವೈರಸ್‌ ಸೋಂಕು/ಸಾವು ಬೇರೆ ದೇಶಗಳಷ್ಟು ತೀವ್ರ ಪ್ರಮಾಣದಲ್ಲಿ ಏರಿಲ್ಲವಾದರೂ ಜನರಿಗೆ ಕಷ್ಟಕೊಟ್ಟು ಇಷ್ಟುಕಠಿಣವಾದ ಲಾಕ್‌ಡೌನ್‌ ಜಾರಿಗೊಳಿಸುವ ಅಗತ್ಯವೇನಿತ್ತು ಎಂದು ಕೆಲವರು ಕೇಳುತ್ತಿದ್ದಾರೆ. ಆದರೆ, ಈ ಲಾಕ್‌ಡೌನ್‌ನಿಂದಾಗಿಯೇ ಭಾರತ ಇನ್ನೂ ಸುರಕ್ಷಿತ ಜೋನ್‌ನಲ್ಲಿರುವ ಲಕ್ಷಣಗಳು ಗೋಚರಿಸುತ್ತಿವೆ.

ಕೊರೋನಾವೈರಸ್‌ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಲು ಇರುವ ಏಕೈಕ ಮಾರ್ಗವೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಅದು ಕಟ್ಟುನಿಟ್ಟಾಗಿ ಪಾಲನೆಯಾಗಬೇಕೆಂದರೆ ಇರುವ ಒಂದೇ ಮಾರ್ಗ ಲಾಕ್‌ಡೌನ್‌. ಹೀಗಾಗಿ ಇನ್ನೆರಡು ವಾರ ಜನರು ಕಡ್ಡಾಯವಾಗಿ ಮನೆಯೊಳಗೇ ಇದ್ದು ಕೊರೋನಾವೈರಸ್‌ ಹರಡುವುದನ್ನು ತಡೆದರೆ ದೇಶ ಈ ಸಮಸ್ಯೆಯನ್ನು ದಿಟ್ಟವಾಗಿ ಎದುರಿಸಿ ಗೆಲ್ಲಬಹುದು. ಇದು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಇಲ್ಲಿರುವ ಗ್ರಾಫ್‌ ಹಾಗೂ ಪಟ್ಟಿ ನೋಡಿ.

Lockdown Effect Partial Control on infection stay 15 more days at home to defeat coronavirus

ನಮ್ಮ ದೇಶದಲ್ಲಿ ಮಾಚ್‌ರ್‍ 21ರ ನಂತರ ವಿದೇಶಿಗರಿಗೆ ಪ್ರವೇಶ ನಿಷೇಧ, ಶಾಲೆ, ಕಾಲೇಜುಗಳನ್ನು ಮುಚ್ಚುವುದೂ ಸೇರಿದಂತೆ ಕಠಿಣ ಕ್ರಮ ಕೈಗೊಂಡ ಮೇಲೆ ಕೊರೋನಾ ಸೋಂಕಿತರ ಪ್ರಮಾಣ ಬೇರೆ ದೇಶಗಳಲ್ಲಿ ಆದಂತೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಈ ಕ್ರಮಗಳನ್ನು ಜಾರಿಗೊಳಿಸದೆ ಇದ್ದಿದ್ದರೆ ಈ ವೇಳೆಗೆ ದೇಶದಲ್ಲಿ 1663 ಕೊರೋನಾ ಸೋಂಕು ಪತ್ತೆಯಾಗಬೇಕಿತ್ತು. ಕಠಿಣ ಕ್ರಮ ಕೈಗೊಂಡಿರುವುದರಿಂದ ಅದು 1000ದ ಆಸುಪಾಸಿನಲ್ಲೇ ಇದೆ.

ಭಾರತದಲ್ಲಿ ಮೊದಲ ಕೊರೋನಾವೈರಸ್‌ ಪ್ರಕರಣ ಪತ್ತೆಯಾದ ದಿನವೇ ಇಟಲಿಯಲ್ಲಿ ಮೊದಲ ಕೇಸು ಪತ್ತೆಯಾಗಿತ್ತು. ಆದರೆ ಇಟಲಿಯಲ್ಲಿ ಈವರೆಗೆ 10000ಕ್ಕೂ ಹೆಚ್ಚು ಸಾವು ಸಂಭವಿಸಿದೆ. ನಮ್ಮ ದೇಶದಲ್ಲಿ ಸಾವಿನ ಸಂಖ್ಯೆ ಇನ್ನೂ 30ರ ಆಸುಪಾಸಿನಲ್ಲಿದೆ. ಭಾರತದಲ್ಲಿ ಮೊದಲ ಕೊರೋನಾ ಸೋಂಕು ಪತ್ತೆಯಾದ ನಂತರ ಮೊದಲ ಸೋಂಕು ಪತ್ತೆಯಾದ ದೇಶಗಳಲ್ಲಿ ಕಠಿಣ ನಿಯಂತ್ರಣಾತ್ಮಕ ಕ್ರಮ ಕೈಗೊಳ್ಳದೆ ಹೇಗೆ ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬುದರ ವಿವರ ಇಲ್ಲಿದೆ.

ದೇಶ- ಮೊದಲ ಸೋಂಕು- ಸಾವು

ಭಾರತ - ಜ.29 - 33

ಇಟಲಿ - ಜ.29 - 10,779

ಸ್ಪೇನ್‌ - ಜ.30 - 7,340

ಬ್ರಿಟನ್‌ - ಜ.30 - 1,415

ಬೆಲ್ಜಿಯಂ - ಫೆ.03 - 513

ಇರಾನ್‌ - ಫೆ.18 - 2,757

ನೆದರ್‌ಲೆಂಡ್‌ - ಫೆ.26 - 864

* ಚೀನಾ, ಅಮೆರಿಕದಲ್ಲಿ ಭಾರತಕ್ಕಿಂತ ಮೊದಲೇ ಸೋಂಕು ಪತ್ತೆಯಾಗಿದೆ

Follow Us:
Download App:
  • android
  • ios