ಮಲಪ್ಪುರಂ(ಮಾ.27):  ಬೆಳಗ್ಗಿನಿಂದ ಸಂಜೆ ತನಕ ಕೆಲಸ, ಸಂಜೆ ಕನಿಷ್ಠ 90 ಹಾಕದಿದ್ದರೆ ಎಲ್ಲವನ್ನೂ ಕಳೆದುಕೊಂಡಂತೆ ಆಡುವವರ ಸಂಖ್ಯೆ ಹೆಚ್ಚೇ ಇದೆ.  ಆದರೆ ಈಗ ಕೊರೋನಾ ವೈರಸ್‌ನಿಂದಾಗಿ ಎಲ್ಲವೂ ಬಂದ್. ಭಾರತ 21 ದಿನಗಳ ಕಾಲ ಬಂದ್. ತುರ್ತು ಸೇವೆ, ಅಗತ್ಯ ವಸ್ತು ಹೊರತು ಪಡಿಸಿ ಇನ್ಯಾವುದು ಲಭ್ಯವಿಲ್ಲ. ಪ್ರಧಾನಿ ಮೋದಿ 2016ರ ನವೆಂಬರ್ 8ರ ರಾತ್ರಿ ನೋಟ್ ಬ್ಯಾನ್ ಮಾಡಿದಾಗ, ತಮ್ಮಲ್ಲಿರುವ 500, 1000 ನೋಟುಗಳನ್ನು ಹಿಡಿದು ರಾತ್ರೋ ರಾತ್ರಿ ಲಿಕ್ಕರ್ ಶಾಪ್, ಬಾರ್ ಮುಂದೆ ಕ್ಯೂ ನಿಂತವರು, ಮೊನ್ನೆ ಮೊನ್ನೆ ಮೋದಿ ಲಾಕ್ ಲಾಕ್‌ಡೌನ್ ಘೋಷಣೆ ಮಾಡುತ್ತಿದ್ದಂತೆ, ಎದ್ದು ಬಿದ್ದು ಓಡಿ ಸಾಲಲ್ಲಿ ನಿಂತು ಮದ್ಯ ಖರೀದಿಸಿದ್ದಾರೆ. ಆದರೆ ಮೋದಿ ಘೋಷಣೆಗೂ ಮೊದಲೇ 90 ಏರಿಸಿದ್ದ ವ್ಯಕ್ತಿ, ಬೆಳಗ್ಗೆ ಎದ್ದಾಗ ಎಲ್ಲವೂ ಬಂದ್ ಆಗಿತ್ತು. 

ಕೇರಳ ಜನರ ಮದ್ಯ ಖರೀದಿ ಶಿಸ್ತಿಗೆ ಮನಸೋತ ಲಂಕಾ ಕ್ರಿಕೆಟಿಗ ಜಯವರ್ದನೆ!.

ಗ್ರಾಮದಲ್ಲಿನ ಎಲ್ಲಾ ಶಾಪ್ ಓಡಾಡಿದ್ದಾನೆ, ಎಲ್ಲವೂ ಬಂದ್. ಪಣ್ಣಕ್ಕೆ ಹೋದರೆ ಸಿಗಬಹುದು ಎಂದು ತೆರಳಿದ್ದಾನೆ. ಅಲ್ಲೂ ಇಲ್ಲ. ಹುಚ್ಚು ಹಿಡಿದವನಂತೆ ವರ್ತಿಸಿದ್ದಾನೆ. ಮನಯವರಿಗೆ ಈತನ ವರ್ತನೆ ನೋಡಿ ಬೆಚ್ಚಿ ಬಿದ್ದಿದ್ದಾರೆ. ಮದ್ಯ ಸಿಗಿದ ಕುಡುಕ ಹಿಂದೂ ಮುಂದಿ ಯೋಚಿಸಲಿಲ್ಲ. ನೇರವಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ನಡೆದಿರುವುದು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ. 

COVID-19 ಅಂತರ ಕಾಯ್ದುಕೊಳ್ಳಲು ದಿನಸಿ ಮಾಲೀಕ ವಿನೂತನ ಐಡಿಯಾಗೆ ಶಶಿ ತರೂರ್ ಫಿದಾ !

38 ವರ್ಷದ ಕೆ ಸನೋಜ್ ಆತ್ಯಹತ್ಯೆಗೆ ಶರಣಾದ ವ್ಯಕ್ತಿ. ಪೈಂಟರ್ ಆಗಿದ್ದ ಸನೋಜ್, ಮದ್ಯದ ದಾಸನಾಗಿದ್ದ. ಲಾಕ್‌ಡೌನ್‌ನಿಂದ ಮದ್ಯ ಸಿಗದೆ ಮನೆಯಲ್ಲಿ ವಿಪರೀತ ಗಲಾಟೆ ಮಾಡಿದ್ದ, ಹುಚ್ಚನಂತೆ ವರ್ತಿಸಿದ್ದ ಎಂದು ಸನೋಜ್ ಸಹೋದರ ಹೇಳಿದ್ದಾನೆ. ಕುನ್ನಕುಳಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೊರೋನಾ ಸೋಂಕಿತನಿಗೆ ಏಡ್ಸ್ ಮದ್ದು ಬಳಸಿದ ಕೇರಳ; ಗುಣಮುಖರಾದ ಬ್ರಿಟಿಷ್ ಪ್ರಜೆ!

ಕೇರಳದಲ್ಲಿ ಎಪ್ರಿಲ್ 14ರ ವರೆಗೆ ಎಲ್ಲಾ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿದೆ. ಜನರನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಆನ್‌ಲೈನ್ ಮೂಲಕ ಮದ್ಯ ವಿತರಿಸಲು ಚಿಂತನೆ ನಡೆಸುತ್ತಿದೆ. ಅತೀ ಹೆಚ್ಚು ಮದ್ಯ ಮಾರಾಟವಾಗುವ ರಾಜ್ಯಗಳಲ್ಲಿ ಕೇರಳ ಮಂಚೂಣಿಯಲ್ಲಿದೆ. ಕಿಲೋಮೀಟರ್ ಗಟ್ಟಲೆ ಕ್ಯೂನಲ್ಲಿ ನಿಂತು ಮದ್ಯ ಖರೀದಿಸುತ್ತಾರೆ. 

ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಕೇರಳದ ಜನರು ಸಾಮಾಜ ಅಂತರ ಕಾಯ್ದುಕೊಂಡು ಮದ್ಯ ಖರೀದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.