Asianet Suvarna News Asianet Suvarna News

ಮನೆ ಬಾಗಿಲಿಗೆ ಎಣ್ಣೆ ಏಕೆ;  ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಸರಿಯಾದ ಕೊಕ್ಕೆ

ಸರ್ಕಾರದ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್/ ಮದ್ಯ ವ್ಯಸನದಿಂದ ಬಳಲುತ್ತಿರುವವರ ಮನೆ ಬಾಗಿಲಿಗೆ ಎಣ್ಣೆ ಸರಬರಾಜು ವಿಚಾರ/ ಪಿಣರಾಯಿ ವಿಜಿಯನ್ ಸರ್ಕಾರಕ್ಕೆ ಹಿನ್ನಡೆ

Kerala high court stays government order allowing door delivery of liquor
Author
Bengaluru, First Published Apr 2, 2020, 4:32 PM IST

ತಿರುವನಂತಪುರಂ(ಏ. 02)  ಕೇರಳದ ಪಿಣರಾಯಿ ವಿಜಯನ್ ಸರ್ಕಾರಕ್ಕೆ ಒಂದು ಹಿನ್ನಡೆಯಾಗಿದೆ. ಕೊರೋನಾದ ಈ ಆತಂಕದ ನಡುವೆಯೂ ಕೇರಳ ಹೈಕೋರ್ಟ್ ಆದೇಶವೊಂದನ್ನು ನೀಡಿದೆ.

ಮನೆ ಬಾಗಿಲಿಗೆ ಮದ್ಯ ವಿತರಣೆ ಮಾಡಬೇಕು ಎನ್ನುವ ಪಿಣರಾಯಿ ವಿಜಯನ್ ಸರ್ಕಾರದ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ಎಕೆ ಜಯಶಂಕರನ್ ನಂಬಿಯಾರ್ ಮತ್ತು ಶಾಜಿ ಪಿ ಚ್ಯಾಲಿ ಪೀಠ ಮೂರು ವಾರ ಕಾಲ ಅನ್ವಯವಾಗುವಂತೆ ತಡೆಯಾಜ್ಞೆ ನೀಡಿದೆ.

ಎಣ್ಣೆ ಬೇಕು ಅಣ್ಣ; ಲಾಕ್ ಡೌನ್ ಮಧ್ಯೆಯೂ ಬಾರಿಗೆ ಬಂದ ಮಹಿಳೆಯರು!

ಮಾರ್ಚ್ 30 ರಂದು ಆದೇಶ ಹೊರಡಿಸಿದ್ದ ಕೇರಳ ರಾಜ್ಯ ಸರ್ಕಾರ ಮದ್ಯ ವ್ಯಸನದಿಂದ ಬಳಲುತ್ತಿರುವವರು ವೈದ್ಯರ ಪ್ರಮಾಣ ಪತ್ರ ನೀಡಿದರೆ ಮನೆ ಬಾಗಿಲಿಗೆ ಸರಬರಾಜು ಮಾಡಬಹುದು ಎಂದು ಹೇಳಿತ್ತು. ಕೇರಳ ರಾಜ್ಯದ ಅಬಕಾರಿ ಇಲಾಖೆ ಇದರ ಜವಾಬ್ದಾರಿ ನಿರ್ವಹಿಸಬೇಕು ಎಂದು ತಿಳಿಸಲಾಗಿತ್ತು.

ಈ ರೀತಿ ಮದ್ಯ ವ್ಯಸನದಿಂದ ಬಳಲುತ್ತಿರುವವರಿಗೆ ವಾರಕ್ಕೆ ಮೂರು ಲೀಟರ್ ಮದ್ಯ ನೀಡಲಾಗುವುದು ಎಂದು ಹೇಳಲಾಗಿತ್ತು. ಇಲಾಖೆಯಲ್ಲಿ ಇರುವ ಸ್ಟಾಕ್ ಆಧಾರದ ಮೇಲೆ ಮದ್ಯದ ಬ್ರ್ಯಾಂಡ್ ನಿರ್ಧಾರ ಮಾಡಲಾಗುವುದು ಎಂದು ತಿಳಿಸಲಾಗಿತ್ತು.

ಮೂರು ದಿನದ ಅವಧಿಯಲ್ಲಿ ಮದ್ಯ ಸಿಗದೆ ಆರು ಜನ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರಲ್ಲಿ ಯುವಕರೇ ಹೆಚ್ಚಿದ್ದಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು.

ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಕೇರಳ ಟಾಪ್ ಪಟ್ಟಿಯಲ್ಲಿದೆ. ಕಾಸರಗೋಡು ಕೊರೋನಾ ಸೋಂಕಿತರ ಕೇಂದ್ರ ಎಂದೇ ಬೇಡದ ಖ್ಯಾತಿಗೆ ಗುರಿಯಾಗಿದೆ.

 

ಇಂಗ್ಲಿಷ್ ನಲ್ಲಿಯೂ ಓದಿ

Follow Us:
Download App:
  • android
  • ios