ನವದೆಹಲಿ(ಮಾ.26): ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತ ಲಾಕ್‌ಡೌನ್ ಮಾಡಿದ್ದರೂ ಜನರ ಓಡಾಟ ನಿಂತಿಲ್ಲ. ಹೀಗಾಗಿ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹೀಗಾಗಿ ಆನ್‌ಲೈನ್ ಡೆಲಿವರಿ ಬಾಯ್‌ಗಳು ಕರ್ತವ್ಯವನ್ನು ಸ್ಥಗಿತಗೊಳಿಸಿದ್ದರು. ಇದೀಗ ದೆಹಲಿ ಸರ್ಕಾರ ಆನ್‌ಲೈನ್ ಫುಡ್ ಡೆಲಿವರಿ ಹಾಗೂ ಆನ್‌ಲೈನ್ ಶಾಪಿಂಗ್ ಮೇಲಿನ ನಿರ್ಬಂಧ ತೆರವು ಮಾಡಿದ್ದಾರೆ. 

ಕೊರೋನಾ ಗದ್ದಲದಲ್ಲಿ ಪೊಲೀಸ್ ಕಮೀಷನರ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಡಿಸಿಎಂ

ದೆಹಲಿ ವ್ಯಾಪ್ತಿಯಲ್ಲಿ ಆಮೇಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಆನ್‌ಲೈನ್ ಶಾಪಿಂಗ್‌ ಹಾಗೂ ಫುಡ್ ಡೆಲಿವರಿಗಳಾದ ಸ್ವಿಗ್ಗಿ ಸೇರಿದಂತೆ ಇತರ ಡೆಲಿವರಿಗೆ ಅವಕಾಶ ಮಾಡಿಕೊಟ್ಟಿದೆ. ದೆಹಲಿ ಪೊಲೀಸರು ಹೊಸ ಪ್ರಕಟಣೆ ಹೊರಡಿಸಿದ್ದು, ಆನ್‌ಲೈನ್ ಡೆಲಿವರಿಗೆ ಅವಕಾಶ ಮಾಡಿರುವುದಾಗಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಸ್ವಿಗ್ಗಿ, ಜೋಮ್ಯಾಟೋ, ಫ್ಲಿಪ್‌ಕಾರ್ಟ್ ಅಮೇಜಾನ್, ಡನ್ಜೋ, ಬಿಗ್‌ಬಾಸ್ಕೆಟ್ , ಗ್ರೋಫರ್ಸ್, ಅರ್ಬನ್ ಕ್ಲಾಪ್, ಮಿಲ್ಕ್ ಬಾಸ್ಕೆಟ್, ಬಿಗ್ ಬಝಾರ್, ಸ್ನಾಪ್‌ಡೀಲ್, ಫಾಸೋಸ್, ಫಿಝಾ ಹಟ್, ಫಾರ್ಮಸಿ ಸೇರಿದಂತೆ ಇತರ ಕೆಲ ಆನ್‌ಲೈನ್ ಡೆಲಿವರಿಗೆ ಅನು ಮಾಡಲಾಗಿದೆ. 

ನೂತನ ಪ್ರಕಟಣೆ ಕುರಿತು ಡೆಲ್ಲಿ ಪೊಲೀಸರು ಟ್ರಾಫಿಕ್ ಹಾಗೂ ನಿಯಮ ಪಾಲನೆಗೆ ಯೋಜನೆಯಾಗಿರುವ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇದು ದೆಹಲಿ ವ್ಯಾಪ್ತಿಗೆ ಮಾತ್ರ. ಇತರ ನಗರ ಹಾಗೂ ರಾಜ್ಯಗಳಲ್ಲಿ ಆನ್‌ಲೈನ್ ಡೆಲಿವರಿ ಮೇಲಿನಿ ನಿರ್ಬಂಧ ತೆರವು ಮಾಡಿಲ್ಲ. 

 

ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್‌ಡಾನ್ ಮಾಡಿವೆ. ಆದರೆ ಜನರ ನಿರ್ಲಕ್ಷ್ಯದಿಂದ ಕೊರೋನಾ ವೈರಸ್ ಹರಡುತ್ತಲೇ ಇದೆ. ಇದೀಗ ವಿಶ್ವದಲ್ಲಿ ಕೋರೋನಾ ಸೋಂಕಿತರ ಸಂಖ್ಯೆ 4.80 ಲಕ್ಷ ದಾಟಿದೆ. ಭಾರತದಲ್ಲಿ 700ರ ಗಡಿ ದಾಟಿದೆ. ಇನ್ನು ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.