Asianet Suvarna News Asianet Suvarna News

ಗುಡ್‌ ನ್ಯೂಸ್: ಹೇಳಿದಂತೆ ಕೇಂದ್ರದಿಂದ ಜನ್​ಧನ್​ ಅಕೌಂಟ್‌ಗೆ ಹಣ..!

ಇಡೀ ದೇಶವೇ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಗರೀಬ್ ಕಲ್ಯಾಣ್ ಯೋಜನೆ ಜಾರಿಗೆ ತಂದಿರುವುದು ಗೊತ್ತಿರುವ ವಿಚಾರ. ಇದೀಗ ಪ್ರಧಾನ ಮಂತ್ರಿ ಜನ್​ಧನ್ ಅಡಿಯಲ್ಲಿ ಮಹಿಳೆಯರ​ ಖಾತೆಗಳಿಗೆ ಹಣ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ. ಯಾವಾ..? ಈ ಕೆಳಗಿನಂತಿದೆ ನೋಡಿ.
IBA directs banks to remit Rs 500 per month in women Jan Dhan ac from April 3
Author
Bengaluru, First Published Apr 2, 2020, 6:59 PM IST
ನವದೆಹಲಿ, (ಏ.02): ಪ್ರಧಾನ ಮಂತ್ರಿ ಜನ್​ಧನ್​ ಯೋಜನೆಯಡಿಯಲ್ಲಿ ಮಹಿಳೆಯರು ತೆರೆದಿರುವ ಜನ್​ಧನ್​ ಖಾತೆಗಳಿಗೆ ನಾಳೆಯಿಂದ ಅಂದ್ರೆ ಏಪ್ರಿಲ್ 03ರಿಂದ ಹಣ ಪಾವತಿ ಪ್ರಕ್ರಿಯೆ ನಡೆಯಲಿದೆ.

ಈ ಮೊದಲೇ ಕೇಂದ್ರ ಸರ್ಕಾರ ಘೋಷಿಸಿರುವ ಮಹಿಳಾ ಜನ್​ಧನ್​ ಖಾತೆಗಳಿಗೆ ತಲಾ 500 ರೂ.ಗಳನ್ನು ಪಾವತಿ ಪ್ರಕ್ರಿಯೆ ಆರಂಭಿಸುವಂತೆ ಎಲ್ಲ ಬ್ಯಾಂಕ್​ಗಳಿಗೆ ಇಂಡಿಯನ್​ ಬ್ಯಾಂಕ್ಸ್​ ಅಸೋಸಿಯೇಷನ್ (ಐಬಿಎ)​ ಸೂಚಿಸಿದೆ.

ಕೊರೋನಾ ಪರಿಹಾರ: 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಕೇಂದ್ರ!

ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಯೋಜನೆಯಡಿಯಲ್ಲಿ ಘೋಷಿಸಲಾಗಿರುವಂತೆ ಜನಧನ್​ ಖಾತೆಗಳಿಗೆ ಮಾಸಿಕ 500 ರೂ.ಗಳನ್ನು ಪಾವತಿಸುವ ಪ್ರಕ್ರಿಯೆ ಏಪ್ರಿಲ್​ 3ರಿಂದ 9ರವರೆಗೆ ನಡೆಯಲಿದೆ ಎಂದು ಐಬಿಎ ತಿಳಿಸಿದೆ. 

ಜನ್​​ಧನ್​ ಖಾತೆಗಳಿಗೆ ಮುಂದಿನ ಮೂರು ತಿಂಗಳ ಅವಧಿಗೆ ಅಂದರೆ ಏಪ್ರಿಲ್​, ಮೇ, ಜೂನ್​ವರೆಗೆ ನಗದು ವರ್ಗಾವಣೆ ಮಾಡಲಾಗುತ್ತದೆ.

ದೇಶಾದ್ಯಂತ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ಬಡಜನರಿಗೆ ನೆರವಾಗಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಈ ಘೋಷಣೆ ಮಾಡಿದ್ದರು.

ಮಹಿಳೆಯರ ಖಾತೆಗಳ ಕೊನೆಯ ಅಂಕಿ ಸಮ- ಬೆಸ ಸಂಖ್ಯೆಗಳ ಆಧಾರದಲ್ಲಿ ಹಣ ವರ್ಗಾವಣೆ ಮಾಡಲಾಗುತ್ತದೆ. ಫಲಾನುಭವಿಗಳು ಏಪ್ರಿಲ್​ 3ರಿಂದಲೇ ಖಾತೆಯಲ್ಲಿರುವ ಹಣ ಪಡೆಯಬಹುದು. ಆದ್ರೆ, ಎಲ್ಲರೂ ಅಲ್ಲ.

ಖಾತೆಯ ಕೊನೆಯ ಸಂಖ್ಯೆ 0-1 ಆಗಿದ್ದರೆ ಏಪ್ರಿಲ್​ 3ರಂದು ಹಣ ಪಡೆಯಬಹುದು. ಖಾತೆಯ ಕೊನೆಯ ಸಂಖ್ಯೆ 2-3 ಆಗಿದ್ದರೆ ಏಪ್ರಿಲ್​ 4, 4-5 ಆಗಿದ್ದರೆ ಏಪ್ರಿಲ್​ ಏಪ್ರಿಲ್​ 7ರಂದು ಹಾಗೂ ಖಾತೆಯ ಕೊನೆಯ ಸಂಖ್ಯೆ 6-7 ಆಗಿದ್ದರೆ ಏಪ್ರಿಲ್​ 8 ಮತ್ತು ಖಾತೆಯ ಕೊನೆಯ ಸಂಖ್ಯೆ 8-9 ಆಗಿದ್ದರೆ ಏಪ್ರಿಲ್​ 9ರಂದು ಹಣ ಕ್ರೆಡಿಟ್ ಆಗಲಿದೆ. 

ಸಾಮಾಜಿಕ ಅಂತರವನ್ನು ಕಾಯ್ದುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದ್ದು, ಏಪ್ರಿಲ್​ 9ರ ನಂತರ ಅವರಿಗೆ ಅನುಕೂಲವಾದ ದಿನದಿಂದ ಬ್ಯಾಂಕ್‌ನಿಂದ ಹಣ ಪಡೆಯಬಹುದು ಎಂದು ಎಬಿಎ ತಿಳಿಸಿದೆ.

ಈ ಕೊರೋನಾ ಮಾಹಾಮಾರಿಯಿಂದ ಮೊದಲೇ ಕೆಲಸವಿಲ್ಲದೇ, ಕೈಯಲ್ಲಿ ಹಣವಿಲ್ಲದೇ ಕೆಲವರಿಗೆ ಅದೆಷ್ಟೋ ಜನರು ಊಟಕ್ಕೆ ಸಂಕಷ್ಟ ಎದುರಿಸುತ್ತಿದ್ದಾರೆ.ಈ 500 ರೂ.ನಿಂದಾದರೂ ಊಟಕ್ಕೆ ಏನು ಬೇಕು ಅದನ್ನು ಖರೀದಿಸಲು ಅನುಕೂಲವಾಗಲಿದೆ.
Follow Us:
Download App:
  • android
  • ios