ಬೆಂಗಳೂರು(ಮಾ.26): ಭಾರತದ ಅತಿದೊಡ್ಡ ಬಿಸ್ಕೆಟ್ ತಯಾರಕ ಕಂಪೆನಿ ಪಾರ್ಲೆ ಪ್ರಾಡಕ್ಸ್ಟ್ ಪ್ರೈವೇಟ್ ಲಿಮಿಟೆಡ್ ಘೋಷಣೆಯೊಂದು ಮಾಡಿದ್ದು, ತಾವು ಮೂರು ವಾರಗಳ ಲಾಕ್‌ಡೌನ್ ಅವಧಿಯಲ್ಲಿ ೩ ಕೋಟಿ ಬಿಸ್ಕೆಟ್ ಪ್ಯಾಕ್‌ಗಳನ್ನು ಉಚಿತವಾಗಿ ವಿತರಿಸುವುದಾಗಿ ತಿಳಿಸಿದೆ. ಕೊರೋನಾ ವೈರಸ್ ಮಹಾಮಾರಿ ನಿಯಂತ್ರಿಸಲು ಭಾರತದಲ್ಲಿ ಹೇರಲಾಗಿರುವ 21 ದದಿನಗಳ ಲಾಕ್‌ಡೌನ್ ಗಮನಿಸಿ ಸರ್ಕಾರಿ ಏಜೆನ್ಸಿ ಮೂಲಕ ಬಡವರು ಹಾಗೂ ಅಗತ್ಯವಿರುವವರಿಗೆ ಬಿಸ್ಕೆಟ್ ಪ್ಯಾಕೇಟ್ ವಿತರಿಸುವುದಾಗಿ ತಿಳಿಸಿದೆ.

ಕೊರೋನಾ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ತಮ್ಮ ಉತ್ಪಾದನ ಘಟಕಗಳಲ್ಲಿ ಶೇ. 50 ರಷ್ಟು ಕಾರ್ಮಿಕರೊಂದಿಗೆ ಕೆಲಸ ನಿರ್ವಹಿಸಲಿದ್ದು, ಮಾರುಕಟ್ಟೆಯಲ್ಲಿ ಬಿಸ್ಕೆಟ್‌ಗಳಿಗೆ ಕೊರತೆಯಾಗದಂತೆ ನಿಗಾ ವಹಿಸುವುದಾಗಿ ತಿಳಿಸಿದೆ.

ಕೊರೋನಾ ಕೇಂದ್ರ ವುಹಾನ್‌ ಸಂಪೂರ್ಣ ಗುಣಮುಖ, ಏ.8ಕ್ಕೆ ಲಾಕ್‌ಡೌನ್‌ ಅಂತ್ಯ!

ಪಾರ್ಲೆ ಪ್ರಾಡಕ್ಟ್ಸ್‌ನ ಸೀನಿಯರ್ ಕ್ಯಾಟಗರಿ ಹೆಡ್ ಮಯಾಂಕ್ ಶಾ ಈ ಸಂಬಂಧ ಪ್ರತಿಕ್ರಿಯಿಸಿದ್ದು, ನಾವು ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ನಿರ್ವಹಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ. ಸರ್ಕಾರಿ ಏಜೆನ್ಸಿಗಳ ಮೂಲಕ ನಾವು ಮೂರು ಕೋಟಿ ಬಿಸ್ಕೆಟ್ ಪ್ಯಾಕೇಟ್ ವಿತರಿಸುತ್ತೇವೆ. ಮುಂದಿನ ಮೂರು ವಾರಗಳಲ್ಲಿ, ಪ್ರತಿ ವಾರ ಅಗತ್ಯವಿರುವವರಿಗೆ ಹಾಗೂ ಬಡವರಿಗೆ ಒಂದು ಕೋಟಿ ಬಿಸ್ಕೆಟ್ ಪ್ಯಾಕೇಟ್ ವಿತರಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಅಲ್ಲದೇ ಲಾಕ್‌ಡೌನ್‌ನಿಂದ ಭಯಭೀತರಾಗಿರುವ ಜನ ಆತುರದಲ್ಲಿ ಎಲ್ಲವನ್ನೂ ಖರೀದಿಸಿ ಸ್ಟಾಕ್ ಇಟ್ಟುಕೊಳ್ಳುತ್ತಿದ್ದಾರೆ. ಹೀಗಿರುವಾಗ ಅನೇಕ ಮಂದಿ ಮನೆಯಿಂದ ಹೊರ ಬಂದು ಬಿಸ್ಕೆಟ್ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿಸುವ ಯತ್ನ ನಡೆಸುತ್ತಿದ್ದಾರೆ. ಬಿಸ್ಕೆಟ್ ದೀರ್ಘ ಕಾಲ ಉಪಯೋಗಿಸಬಹುದು ಎಂದಿದ್ದಾರೆ.