Asianet Suvarna News Asianet Suvarna News

ಆರೋಗ್ಯ ಸಿಬ್ಬಂದಿಯನ್ನೇ ಅಟ್ಟಾಡಿಸಿ ಹೊಡೆದ 'ಮೂರ್ಖರು': ಇಬ್ಬರು ವೈದ್ಯರಿಗೆ ಗಾಯ

ಕೊರೋನಾ ಅಟ್ಟಹಾಸ| ತಪಾಸಣೆಗೆ ಆಗಮಿಸಿದ್ದ ವೈದ್ಯಾಧಿಕಾರಿಗಳನ್ನೇ ಹೊಡೆದೋಡಿಸಿದ ಗ್ರಾಮಸ್ಥರು| ವೈದ್ಯರ ಮೇಲೆ ಹಲ್ಲೆ ನಡೆಸಿದ್ರೆ ಜೈಲು ಗ್ಯಾರಂಟಿ ಅಂದ್ರು ಜಿಲ್ಲಾ ಕಲೆಕ್ಟರ್

Coronavirus Outbreak Health Workers Attacked In Madhya Pradesh Indore 2 Doctors Injured
Author
Bangalore, First Published Apr 2, 2020, 11:25 AM IST

ಇಂದೋರ್(ಏ.02): ಮಧ್ಯಪ್ರದೇಶದ ಇಂದೋರ್‌ನಲ್ಲಿ ಆರೋಗ್ಯ ಸಿಬ್ಬಂದಿಗಳ ಮೇಲೆ ಕಲ್ಲೆಸೆದಿರುವ ಆಗೂ ಹಲ್ಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಟಾಟ್‌ಪಟ್ಟೀ ಬಾಖಲ್‌ನಲ್ಲಿ ಈ ಘಟನೆ ನಡೆದಿದ್ದು, ಸದ್ಯ ವಿಡಡಿಯೋ ವೈರಲ್ ಅಗಿದೆ

ಕೊರೋನಾ ವೈರಸ್ ಸ್ಕ್ರೀನಿಂಗ್‌ಗೆಂದು ಆರೋಗ್ಯ ಅಧಿಕಾರಿಗಳು ತೆರಳಿದ್ದು, ಈ ಮಾಹಿತಿ ಪಡೆದ ಗ್ರಾಮಸ್ಥರು ಆಕ್ರೋಶಿತರಾಗಿದ್ದಾರೆ. ಅಲ್ಲದೇ ಪೊಲೀಸ್ ಬ್ಯಾರಿಕೇಡ್ ಮುರಿದು ವೈದ್ಯ ಸಿಬ್ಬಂದಿ ಮೇಲೆ ಕಲ್ಲೆಸೆತ ಆರಂಭಿಸಿ ಓಡಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. 

ಇದಕಕ್ಕೂ ಮುನ್ನ ಸೋಮವಾರದಂದು ರಾಣಿಪುರದಲ್ಲಿ ತಪಾಸಣೆಗೆಂದು ತೆರಳಿದ್ದ ವೈದ್ಯರಿಗೆ ಅಲ್ಲಿನ ಸ್ಥಳೀಯರು ಕೆಟ್ಟ ಪದಗಳಿಂದ ನಿಂದಿಸಿ ಓಡಿಸಿದ್ದರು. 

ಇನ್ನು ಕಲ್ಲೆಸೆತದ ಮಾಹಿತಿ ಪಡೆದ ಕಲೆಕ್ಟರ್ ಮನೀಷ್ ಸಿಂಗ್ ಜನರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಯಾರಾದರೂ ತಪಾಸಣೆಗೆ ಆಗಮಿಸಿದ ವೈದ್ಯರ ಮೇಲೆ ಹಲ್ಲೆ ಅಥವಾ ದಾಳಿ ನಡೆಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ವಾರ್ನಿಂಗ್ ನೀಡಿದ್ದಾರೆ. ಅಲ್ಲದೇ ಎಫ್‌ಐಆರ್‌ ದಾಖಲಿಸಿ ಜೈಲಿಗಟ್ಟುವುದಾಗಿಯೂ ತಿಳಿಸಿದ್ದಾರೆ. 

ಪ್ರಕರಣದಲ್ಲಿ ಭಾಗಿಯಾದ ಓರ್ವನ ಗುರುತು ಪತ್ತೆಯಾಗಿದ್ದು, ಆತನನ್ನು ಅತಿ ಶೀಘ್ರದಲ್ಲೇ ವಿಚಾರಣೆ ನಡೆಸುವುದಾಗಿ ಕಲೆಕ್ಟರ್ ತಿಳಿಸಿದ್ದಾರೆ. 

ಏಪ್ರಿಲ್ 02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios