ನವದೆಹಲಿ(ಏ.04): ಜಗತ್ತಿನಾದ್ಯಂತ ಅಬ್ಬರಿಸುತ್ತಿರುವ ಕೊರೋನಾ ವೈರಸ್ ಜಾತಿ, ಧರ್ಮ, ಮೇಲು, ಕಿಳು ಎಂದು ಲೆಕ್ಕಿಸದೆ ಪ್ರತಿಯೊಬ್ಬರನ್ನು ಬಾಧಿಸುತ್ತಿದೆ. ಹೀಗಿರುವಾಗ ತುಂಬು ಗರ್ಭಿನಿಗೂ ಈ ಸೋಂಕು ತಗುಲಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಏಮ್ಸ್‌ನ್ಲಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಮಹಿಳೆ ಇದೀಗ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಸದ್ಯ ತಾಯಿ ಹಾಘೂ ಮಗುವನ್ನು ಐಸಿಯುನಲ್ಲಿ ಇಡಲಾಗಿದೆ.

ಮೊದಲು 3 ಆಸ್ಪತ್ರೆ, ಈಗ ವೈದ್ಯರ ಸೇನೆ: ಕೊರೋನಾ ಸಮರದಲ್ಲಿ ಚೀನಾ ಹಿಂದಿಕ್ಕಿದೆ ಈ ರಾಜ್ಯ!

ದೆಹಲಿ ಏಮ್ಸ್  ಆಸ್ಪತ್ರೆಗ ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗದ ಪ್ರಾಧ್ಯಾಪಕಿ ಡಾ. ನೀರಜ್ ಭಾಟಿಯಾ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಸಿ-ಸೆಕ್ಷನ್ ಮೂಲಕ ನಿನ್ನೆ ಮಧ್ಯಾಹ್ನ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಒಂದು ವಾರ ಮುಂಚಿತವಾಗಿ ಈ ಹೆರಿಗೆ ನಡೆದಿದೆ ಎಂದಿದ್ದಾರೆ. ಇನ್ನು ದೆಹಲಿಯಲ್ಲಿ ಕೊರೋನ ವೈರಸ್ ಸೋಂಕಿತ ಮಹಿಳೆಗೆ ಜನಿಸಿದ ಮೊದಲ ಮಗು ಇದಾಗಿದೆ.

ಇನ್ನು ಮಗುವಿನ ಆರೋಗ್ಯದ ಕುರೊತು ಮಾಹಿತಿ ನೀಡಿರುವ ವೈದ್ಯೆ ಸದ್ಯ ಮಗು ಆರೋಗ್ಯವಾಗಿದೆ. ಆದರೆ ಮಗುವಿನ ಸ್ಥಿತಿಗತಿ ಬಗ್ಗೆ ಹೆಚ್ಚಿನ ಗಮನ ಇಟ್ಟಿದ್ದು, ಕೊರೋನಾ ಸೋಂಕು ಇದೆಯೋ ಇಲ್ಲವೋ ಎಂಬುದನ್ನು ನೋಡುತ್ತಿದ್ದೇವೆ ಎಂದಿದ್ದಾರೆ. ಆದರೆ ಮಗುವಿಗೆ ತಾಯಿಯ ಎದೆಹಾಲು ಅಗತ್ಯವಿರುವುದರಿಂದ ಮಗು ತನ್ನ ತಾಯಿಯೊಂದಿಗೆ ಇರುತ್ತದೆ. ಇಲ್ಲಿಯವರೆಗೆ, ಎದೆಹಾಲಿನ ಮೂಲಕ ವೈರಸ್ ಹರಡಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದೂ ಈ ಸಂದರ್ಭದಲ್ಲಿ ವೈದ್ಯರು ತಿಳಿಸಿದ್ದಾರೆ