ನವದೆಹಲಿ(ಮಾ.30): ಸದ್ಯ ಭಾರತದಾದ್ಯಂತ 21 ದಿನಗಳ ಲಾಕ್‌ಡೌನ್ ಹೇರಲಾಗಿದೆ. ಜನರೆಲ್ಲಾ ಮನೆಯೊಳಗೇ ಉಳಿದಿದ್ದಾರೆ.  ಹೀಗಿದ್ದರೂ ಕೆಲವರು ರಸ್ತೆಗಿಳಿಯುವ ದುಸ್ಸಾಹಸ ಮಾಡಿದ್ದಾರೆ. ಈ ನಡುವೆ ಲಾಕ್‌ಡೌನ್ ಇನ್ನು ಕೆಲವು ದಿನ ಮುಂದುವರೆಯುತ್ತೆ ಎಂಬ ಸುದ್ದಿಯೂ ಸದ್ದು ಮಾಡಿದೆ. ಹೀಗಿರುವಾಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಂದ್ರ ಸಚಿವರು ಸ್ಪಷ್ಟನೆ ನೀಡಿದ್ದಾರೆ.

"

ಲಾಕ್‌ಡೌನ್‌ ಇನ್ನು ಕೆಲವು ದಿನ ಮುಂದುವರೆಯುವ ಸುದ್ದಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದ್ದು, ಇದು ಕೇವಲ ವದಂತಿ ಎಂದಿದೆ. ಈ ಸಂಬಂಧ ಟ್ವೀಟ್ ಮಾಡಿರುವ PIB ಕ್ಯಾಬಿನೆಟ್ ಸಚಿವ ರಾಜೀವ್ ಗೌಬಾ ಈ ವದಂತಿಯನ್ನು ತಳ್ಳಿ ಹಾಕಿದ್ದು, ಇದು ಆಧಾರಹೀನ ಸುದ್ದಿ ಎಂದಿದ್ದಾರೆ.

ಕೊರೋನಾ ಪೀಡಿತರ ಸಹಾಯಕ್ಕೆ ತಮ್ಮ ಪಿಗ್ಗಿ ಹಣವನ್ನು ನೀಡಿದ ಮಕ್ಕಳು!

ರಾಜೀವ್ ಗೌಬಾ ಹೇಳಿದ್ದೇನು?

ವದಂತಿ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳು ಸರ್ಕಾರ ಲಾಕ್‌ಡೌನ್ ಅವಧಿ ಅಂತ್ಯಗೊಂಡ ಬಳಿಕ ಮತ್ತೆ ವಿಸ್ತರಿಸುತ್ತದೆ ಎನ್ನುವ ಸುದ್ದಿಗಳು ಆಧಾರರಹಿತವಾಗಿವೆ ಎಂದಿದ್ದಾರೆ.

ಇದಕ್ಕೂ ಮುನ್ನ ಸುದ್ದಿ ಸಂಸ್ಥೆ ಎಎನ್‌ಐ ಗೆ ಪ್ರತಿಕ್ರಿಯಿಸಿದ್ದ ಸಚಿವ ರಾಜೀವ್ ಗೌಬಾ 'ನಾನು ಇಂತಹ ಸುದ್ದಿಗಳನ್ನು ನೋಡಿ ಅಚ್ಚರಿಗೀಡಾಗಿದ್ದೇನೆ. ಸರ್ಕಾರ ಲಾಕ್‌ಡೌನ್‌ ವಿಸ್ತರಿಸುವ ಯೋಜನೆ ಹೊಂದಿಲ್ಲ' ಎಂದಿದ್ದರು.

ಕೊರೋನಾ ಪ್ರಕೋಪ ತಡೆಯುವ ಸಲುವಾಗಿ ಪಿಎಂ ಮೋದಿ ಮಂಗಳವಾರದಂದು ದೆಶದಾದ್ಯಂತ 21 ದಿನಗಳ ಲಾಕ್‌ಡೌನ್ ಹೇರಿದ್ದರು. ಈ ನಡುವೆ ಸರ್ಕಾರ ಈ ಲಾಕ್‌ಡೌನ್‌ ಇನ್ನು ಕೆಲವು ದಿನ ವಿಸ್ತರಿಸುವ ಸಾಧ್ಯತೆ ಇದೆ ಎಂಬ ಸುದ್ದಿಗಳೂ ಹರಿದಾಡಿದ್ವು. ಹೀಗಿರುವಾಗ ಜನರ ಹಗೊಂದಲ ನಿವಾರಿಸಲು ಸರ್ಕಾರ ಈ ಕುರಿತಾಗಿ ಸ್ಪಷ್ಟನೆ ನೀಡಿದೆ.

"