ಬಿಹಾರ, (ಮಾ.31): ಮಹಾರಾಷ್ಟ್ರದಿಂದ ಕೊರೋನಾ ತಪಾಸಣೆ ಇಲ್ಲದೇ ಬಂದಿದ್ದ ಇಬ್ಬರು ವಲಸಿಗರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ ವ್ಯಕ್ತಿಯನ್ನು ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಿಹಾರದ ಸೀತಾಮಾರ್ಹಿ ಜಿಲ್ಲೆಯಲ್ಲಿ ನಡೆದಿದೆ. 

ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.  

ಜಿಲ್ಲೆಯ ಮಧೌಲ್ ಗ್ರಾಮದ ನಿವಾಸಿ ಬಾಬೂಲ್ ಕುಮಾರ್ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ ತಮ್ಮ ಊರಿಗೆ ಮಹಾರಾಷ್ಟ್ರದಿಂದ ಕೊರೋನಾ ತಪಾಸಣೆ ಇಲ್ಲದೇ ಬಂದಿದ್ದ ಮುನ್ನಾ ಮಹತೋ, ಸುಧೀರ್ ಕುಮಾರ್ ಬಗ್ಗೆ ಮಾಹಿತಿ ನೀಡಿದ್ದಾರೆ. 

ಕೊರೋನಾ ಹೋರಾಟಕ್ಕೆ 500 ಓಲಾ ಕ್ಯಾಬ್, ಜನಮೆಚ್ಚುವ ಕೆಲಸ

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ವೈದ್ಯರ ತಂಡ ತಪಾಸಣೆ ನಡೆಸಿದೆ. ಆದರೆ ಕೋವಿಡ್-19 ರ ಯಾವುದೇ ಲಕ್ಷಣಗಳೂ ಗೋಚರಿಸಿಲ್ಲ. 

ವೈದ್ಯಾಧಿಕಾರಿಗಳ ತಂಡ ವಾಪಸ್ ತೆರಳುತ್ತಿದ್ದಂತೆಯೇ ಮುನ್ನಾ ಮಹತೋ, ಸುಧೀರ್ ಕುಮಾರ್ ಅವರ ಕುಟುಂಬದವರು ಬಾಬೂಲ್ ಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

 ಹಲ್ಲೆಯಿಂದ ತೀವ್ರವಾದ ಗಾಯಕ್ಕೊಳಗಾದ ಬಾಬೂಲ್ ಕುಮಾರ್ ನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಸಾವನ್ನಪ್ಪಿದ್ದಾನೆ. ಮೃತ ಬಾಬೂಲ್ ಕುಮಾರ್ ತಂದೆ ಪೊಲೀಸರಿಗೆ ವಿರುದ್ಧ ನೀಡಿದ್ದು, ಕೂಡಲೇ  ಮುನ್ನಾ ಮಹತೋ, ಸುಧೀರ್ ಕುಮಾರ್ ಬಂಧಿಸಿದ್ದಾರೆ.