Asianet Suvarna News Asianet Suvarna News

Fact Check: ಊಟದ ತಟ್ಟೆಗೆ ಎಂಜಲು ಹಚ್ಚಿದರಾ?

ಮುಸ್ಲಿಮರು ಮಸೀದಿಯಲ್ಲಿ ಊಟ ಮಾಡುವ ತಟ್ಟೆಗೆ ಎಂಜಲು ಹಚ್ಚುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋದೊಂದಿಗೆ, ಇದರ ಹಿಂದೆ ಕೊರೋನಾ ಸೋಂಕನ್ನು ಹರಡುವ ಉದ್ದೇಶವಿದೆ 'ಎಂದು ಬರೆಯಲಾಗಿದೆ. ನಿಜಾನಾ ಈ ಸುದ್ದಿ? 

fact check of video shows Muslims licking utensils to spread corona virus
Author
Bengaluru, First Published Apr 3, 2020, 8:44 AM IST

ಮುಸ್ಲಿಮರು ಮಸೀದಿಯಲ್ಲಿ ಊಟ ಮಾಡುವ ತಟ್ಟೆಗೆ ಎಂಜಲು ಹಚ್ಚುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋದೊಂದಿಗೆ, ಇದರ ಹಿಂದೆ ಕೊರೋನಾ ಸೋಂಕನ್ನು ಹರಡುವ ಉದ್ದೇಶವಿದೆ.

ವಿಡಿಯೋದಲ್ಲಿ ಇರುವ ಮುಸ್ಲಿಮರಿಗೆ ಈಗಾಗಲೇ ಕೊರೋನಾ ಸಾಂಕ್ರಾಮಿಕ ರೋಗ ಹರಡಿದೆ. ಕೊರೋನಾ ಭಾರತದಲ್ಲಿ ತಾನಾಗಿಯೇ ಹರಡುತ್ತಿಲ್ಲ, ಇಂಥವರು ಹರಡಿಸುತ್ತಿದ್ದಾರೆ’ ಎಂದು ಬರೆಯಲಾಗಿದೆ. ದೆಹಲಿಯ ನಿಜಾಮುದ್ದೀನ್‌ ಮರ್ಕಜ್‌ನಲ್ಲಿ ನಡೆದ ಧಾರ್ಮಿಕ ಸಮಾವೇಶ ಭಾರತದಲ್ಲಿ ಕೊರೋನಾ ಹರಡಲು ರಹದಾರಿಯಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಈ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

fact check of video shows Muslims licking utensils to spread corona virus

ಈ ವಿಡಿಯೋ ಹಿಂದಿನ ಸತ್ಯಾಸತ್ಯ ಏನೆಂದು ಬೂಮ್‌ಲೈವ್‌ ಸುದ್ದಿಸಂಸ್ಥೆ ಪರಿಶೀಲಿಸಿದೆ. ಆಗ ತಿಳಿದು ಬಂದಿದ್ದೇನೆಂದರೆ, ಮುಸ್ಲಿಮರಲ್ಲಿ ದಾವೂದ್‌ ಬೊಹ್ರಾ ಎಂಬ ಸಮುದಾಯವಿದೆ. ಅದು ವಿಚಿತ್ರ ಆಚರಣೆಗಳನ್ನು ಅನುಸರಿಸುತ್ತದೆ. ಆಹಾರ ಪೋಲು ಮಾಡಬಾರದು ಎಂಬ ತತ್ವದಲ್ಲಿ ಊಟ ಮಾಡಿದ ಪ್ಲೇಟು, ಚಮಚಗಳನ್ನು ನೆಕ್ಕುವ ಸಂಪ್ರದಾಯ ಆ ಸಮುದಾಯದಲ್ಲಿದೆ.

Fact Check| ಹಣ ಬೀದಿಗೆ ಎಸೆದ ಇಟಲಿ ಜನ!

ಈದ್‌ ಸಂದರ್ಭದಲ್ಲಿ ಬೊಹ್ರಾ ಸಮುದಾಯ ಈ ಸಂಪ್ರದಾಯವನ್ನು ಆಚರಿಸಿದ ಹಳೆಯ ವಿಡಿಯೋವನ್ನೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಈಗ ವೈರಲ್‌ ಆಗಿರುವ ವಿಡಿಯೋ 2018ರಲ್ಲೇ ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಆಗಿದೆ. ವಿಡಿಯೋದಲ್ಲಿ ಯುವಕ ಧರಿಸಿರುವ ಟೋಪಿ ಕೂಡ ಬೊಹ್ರಾ ಮುಸ್ಲಿಂ ಸಮುದಾಯ ಧರಿಸುವ ಟೋಪಿಯಾಗಿದೆ. ಹೀಗಾಗಿ ಕೊರೋನಾ ಹರಡಲು ಪ್ಲೇಟ್‌ ನೆಕ್ಕುತ್ತಿದ್ದಾರೆ ಎಂಬ ಸುದ್ದಿ ಸುಳ್ಳು.

- ವೈರಲ್ ಚೆಕ್ 

 

 

Follow Us:
Download App:
  • android
  • ios