Asianet Suvarna News Asianet Suvarna News

Fact Check: ಕೊರೋನಾ ವೈರಸ್‌ ಜೀವಿ​ತಾ​ವಧಿ 12 ಗಂಟೆ ನಿಜ​ವೇ?

‘ಕೊರೋನಾ ವೈರ​ಸ್‌ನ ಜೀವಿ​ತಾ​ವಧಿ 12 ಗಂಟೆ. ಆದರೆ 14 ಗಂಟೆ​ಗಳ ಕಾಲ ಜನತಾ ಕರ್ಫ್ಯೂಗೆ ಕರೆ​ ಕೊ​ಡ​ಲಾ​ಗಿದೆ. 14ಗಂಟೆ​ಗಳ ಬಳಿಕ ಇಡೀ ದೇಶ ಕರೋನಾ ಮುಕ್ತ​ವಾ​ಗು​ತ್ತದೆ. ಜನತಾ ಕರ್ಫ್ಯೂಗೆ ಹಿಂದಿನ ಉದ್ದೇಶ ಇಷ್ಟೇ’ ಎನ್ನುವ ಸಂದೇ​ಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಭಾರಿ ವೈರಲ್‌ ಆಗು​ತ್ತಿದೆ. ಇದು ನಿಜನಾ?

Fact check of Message claiming coronavirus lives on surface for 12 hours
Author
Bengaluru, First Published Mar 25, 2020, 9:25 AM IST

ಭಾರ​ತ​ದಲ್ಲಿ ಕೊರೋ​ನಾ​ ವೈರಸ್‌ ವ್ಯಾಪ​ಕ​ವಾ​ಗು​ತ್ತಿ​ದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದ ಜನ​ರಿಗೆ ಜನತಾ ಕಫä್ರ್ಯ ಆಚ​ರಿ​ಸಲು ಮನವಿ ಮಾಡಿ​ದ್ದರು. ಅದ​ರಂತೆ ಭಾನು​ವಾರ ದೇಶ ಇತಿ​ಹಾ​ಸ​ದಲ್ಲಿಯೇ ಇಂಥ​ದ್ದೊಂದು ವಾತಾ​ವ​ರಣ ನಿರ್ಮಾ​ಣ​ವಾ​ಗಿ​ರ​ಲಿಲ್ಲ ಎನ್ನು​ವಂತ ಬಂದ್‌ ಉಂಟಾ​ಗಿತ್ತು. ಆದರೆ ಇದರ ಜೊತೆಗೆ ‘ಕೊರೋನಾ ವೈರ​ಸ್‌ನ ಜೀವಿ​ತಾ​ವಧಿ 12 ಗಂಟೆ. ಆದರೆ 14 ಗಂಟೆ​ಗಳ ಕಾಲ ಜನತಾ ಕರ್ಫ್ಯೂಗೆ ಕರೆ​ಕೊ​ಡ​ಲಾ​ಗಿದೆ. 14ಗಂಟೆ​ಗಳ ಬಳಿಕ ಇಡೀ ದೇಶ ಕರೋನಾ ಮುಕ್ತ​ವಾ​ಗು​ತ್ತದೆ. ಜನತಾ ಕಫä್ರ್ಯ ಹಿಂದಿನ ಉದ್ದೇಶ ಇಷ್ಟೇ’ ಎನ್ನುವ ಸಂದೇ​ಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗಿ​ತ್ತು.

Fact check of Message claiming coronavirus lives on surface for 12 hours

ಈ ಸಂದೇಶ ಸೋಷಿ​ಯಲ್‌ ಮೀಡಿ​ಯಾ​ಗ​ಳಲ್ಲಿ ಭಾರಿ ವೈರಲ್‌ ಆಗು​ತ್ತಿದೆ. ಆದರೆ ಇದರ ಸತ್ಯಾ​ಸತ್ಯ ಪರಿ​ಶೀ​ಲಿ​ಸಿ​ದಾಗ ವೈರಲ್‌ ಸುದ್ದಿ ಸುಳ್ಳು ಎನ್ನುವ ವಾಸ್ತ​ವಾಂಶ ತಿಳಿ​ದು​ಬಂದಿದೆ. ಕೊರೋನಾ ವೈರಸ್‌ ಸ್ವಭಾ​ವದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

'ಚಹಾಕ್ಕೆ ಬೆಲ್ಲ, ಅರಿಶಿಣ ಹಾಕಿ ಕುಡಿದ್ರೆ ಕೊರೋನಾ ಬರಲ್ಲ'..!

ಆದರೆ ಇತ್ತೀ​ಚಿನ ಅಧ್ಯ​ಯನ ವರ​ದಿ​ಗಳ ಪ್ರಕಾರ ಕೊರೋನಾ ವೈರಸ್‌ ಗಾಳಿ​ಯಲ್ಲಿ ಕೆಲವು ಗಂಟೆ​ಗಳ ಕಾಲ ಮತ್ತು ಕೆಲ ವಸ್ತು​ಗಳ ಮೇಲೆ 2-3 ದಿನ​ಗಳ ವರೆಗೂ ಜೀವಂತ​ವಾ​ಗಿ​ರು​ತ್ತದೆ. ಆದಾಗ್ಯೂ ಅದು ಯಾವ ವಸ್ತು, ವಸ್ತು​ವಿನ ಆರ್ದತೆ ಹೇಗಿದೆ ಎನ್ನು​ವು​ದನ್ನು ಅದು ಅವ​ಲಂಬಿ​ಸಿ​ರು​ತ್ತದೆ. ವಿಶ್ವ ಆರೋಗ್ಯ ಸಂಘ​ಟನೆ ಪ್ರಕಾರವೂ ವೈರಸ್‌ ಜೀವಿ​ತಾ​ವಧಿ ಎಷ್ಟುಕಾಲ ಎಂಬುದು ಇನ್ನೂ ಸ್ಪಷ್ಟ​ವಾಗಿ ತಿಳಿ​ದು​ಬಂದಿಲ್ಲ. ಕೊರೋನಾ ಕುಟುಂಬದ ಇತರೆ ವೈರ​ಸ್‌​ ಗುಣ​ಗ​ಳನ್ನು ಪರಿ​ಶೀ​ಲಿಸಿ ಅಧ್ಯ​ಯನ ನಡೆ​ಸಿ​ದಾಗ ವಸ್ತು​ಗಳ ಮೇಲೆ ಕೆಲ​ ಗ​ಂ​ಟೆ​ಗ​ಳಿಂದ ಹಿಡಿದು ಕೆಲ ದಿನ​ಗಳ ವರೆಗೆ ಜೀವಂತ​ವಾ​ಗಿ​ರು​ತ್ತದೆ ಎಂದು ತಿಳಿ​ದು​ಬಂದಿದೆ. ಹಾಗಾಗಿ 2-3ದಿನ ಇಡೀ ನಗ​ರ​ವನ್ನು ಬಂದ್‌ ಮಾಡಿ​ದರೂ ಕೊರೋನಾ ಸಂಪೂರ್ಣ ನಿರ್ಮೂ​ಲ​ನೆ​ಯಾ​ಗು​ತ್ತದೆ ಎಂದು ಹೇಳ​ಲಾ​ಗದು.

- ವೈರಲ್ ಚೆಕ್ 

Follow Us:
Download App:
  • android
  • ios