ದಕ್ಷಿಣ ಭಾರತೀಯ ಚಿತ್ರರಂಗದ ಹಾಟ್ ಆ್ಯಂಡ್ ಟ್ಯಾಲೆಂಡೆಟ್‌ ನಟಿ ನಮಿತಾ ಈಗ ಶಾಸಕಿಯಾಗಲು ಹೊರಟಿದ್ದಾರೆ. ಇದೇನಪ್ಪಾ ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿ ಇರುವ ನಮಿತಾ ಈ ರಾಜಕೀಯಕ್ಕೆ ಹೋಗೋ ನಿರ್ಧಾರ ಯಾಕೆ ಮಾಡಿದ್ರು ಅಂತಾನಾ? ಇರು ರಿಯಲ್‌ ಲೈಫ್ ಅಲ್ಲ, ರೀಲ್‌ ಲೈಫ್‌ ಕಥೆ.

ತೆಳ್ಳಗಾದ್ಲು ತೆಲಗು ನಟಿ, ಅಪ್‌ಸೆಟ್‌ ಆಗೋದ್ರು ಫ್ಯಾನ್ಸ್! 

ಹೌದು! ಟಾಲಿವುಡ್‌ನಲ್ಲಿ ನಮಿತಾ ಹೊಸ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ. ಚಿತ್ರದಲ್ಲಿ ನಮಿತಾ ಶಾಸಕಿ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ನಂದಮೂರಿ ಹಾಗೂ ಬೊಯಪಟಿ ಶ್ರೀನು ಕಾಂಬಿನೇಷನ್‌ ಕಾಣಬಹುದು.

ಈ ಹಿಂದೆ 'ಸಿಂಹ' ಚಿತ್ರದಲ್ಲಿ ನಮಿತಾ ಹಾಗೂ ನಂದಮೂರಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಸಿನಿಮಾ ಸೂಪರ್ ಹಿಟ್ ಆದರೂ ನಮಿತಾಗೆ ಹೆಚ್ಚಿನ ಜನಪ್ರಿಯತೆ ತಂದುಕೊಡಲಿಲ್ಲ. ನಮಿತಾ ಈವರೆಗೂ ಗ್ಲಾಮರ್ ಗೊಂಬೆಯಾಗಿ ಕಾಣಿಸಿಕೊಂಡವರು, ಈಗ  ತುಂಬಾನೇ ಡಿಫರೆಂಟ್ ಆಗಿರುವ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಇದು ತಮ್ಮ ವೃತ್ತಿ ಜೀವನದಲ್ಲಿ ಬ್ರೇಕ್ ನೀಡಲಿದೆ ಎಂಬುದು ಅವರ ನಂಬಿಕೆ. 

ನಿಮ್ಮ ಆ ವಿಡಿಯೋ ಇದೆ ಎಂದವನ ಚಳಿ ಬಿಡಿಸಿದ ನಮಿತಾ! 

ಬೊಯಪಟಿ ಶ್ರೀನು ಅವರು ಈ ಚಿತ್ರಕ್ಕೆ ನಟಿ ಪ್ರಗ್ಯಾ ಜೈಸ್ವಾಲ್‌ರನ್ನೂ ಕರೆತರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.  ಥಮನ್‌ ಸಂಗೀತ ಈ ಚಿತ್ರಕ್ಕಿದ್ದು ಮಿರ್ಯಲ ರವೀಂದರ್‌ ಬಂಡವಾಳ ಹಾಕಲಿದ್ದಾರೆ.