ನನ್ನನ್ನು ರೇಪ್ ಮಾಡ್ದೆ, ಬಳಸಿ ಬಿಸಾಕಿದೆ ಎಂದು ಸಲ್ಮಾನ್ ವಿರುದ್ಧ ಗುಡುಗಿದ್ದ ನಟಿ ಸೋಮಿಗೆ ಇದೇನಾಗೋಯ್ತು?
ನನ್ನನ್ನು ರೇಪ್ ಮಾಡ್ದೆ, ಬಳಸಿ ಬಿಸಾಕಿದೆ ಎಂದು ನಟ ಸಲ್ಮಾನ್ ಖಾನ್ ವಿರುದ್ಧ ಗುಡುಗಿದ್ದರು ನಟಿ ಸೋಮಿ. ಆದರೆ ಇದೀಗ ಆಗಿದ್ದೇ ಬೇರೆ!

ನಿನ್ನ ಅಪ್ಪನಂತೆಯೇ ನೀನೂ ನೀಚ, ಕ್ರೂರಿ, ನನ್ನ ಲೈಫ್ ಹಾಳು ಮಾಡಿದೆ. ಅದೆಷ್ಟು ಮಂದಿ ನಟಿಯರ ಲೈಫ್ ಹಾಳು ಮಾಡಿದೆ. ಶಾಹೀನ್, ಸಂಗೀತಾ ಎಲ್ಲ ನಟಿಯರ ಬಗ್ಗೆಯೂ ನನಗೆ ಗೊತ್ತು. ನಾನೂ ಸೇರಿದಂತೆ ಹಲವು ನಟಿಯರು ನಿನ್ನಿಂದ ಬದುಕು ಕಳೆದುಕೊಂಡಿದ್ದಾರೆ. ಅವರ ಲೈಫ್ ನೀನು ಹಾಳು ಮಾಡಿದೆ. ಹಲವು ವರ್ಷಗಳ ಕಾಲ ನಿಮ್ಮ ತಾಯಿಗೆ ಕಾಟಕೊಟ್ಟು ಕೊಡಬಾರದ ಹಿಂಸೆ ಕೊಟ್ಟರು. ಅದನ್ನು ನೋಡಿಕೊಂಡು ನೀನೂ ಬಾಯಿಮುಚ್ಚಿಕೊಂಡಿದ್ದೆ. ನಿನ್ನ ತಂದೆಯಂತೆ ನೀನೂ ಅಸಹ್ಯ ವ್ಯಕ್ತಿ. ನಿನ್ನ ಅಪ್ಪ ತಾಯಿಯನ್ನು ನಿಂದಿಸುವುದನ್ನು ನೋಡುತ್ತ ಇರುವುದು ನಿನ್ನಿಂದ ಸಾಧ್ಯವಾಯಿತು. ಈಗಲೂ ಅಂಥ ನೀಚ ತಂದೆಯನ್ನೇ ಆರಾಧ್ಯ ದೈವದಂತೆ ನೋಡುತ್ತಿರುವಿ. ಅಂಥ ಅಪ್ಪನ ಮಗನಾಗಿ ನೀನೂ ಎಷ್ಟೋ ನಟಿಯರಿಗೆ ಹಿಂಸೆ ಕೊಟ್ಟಿರುವಿ. 17ನೇ ವಯಸ್ಸಿನಲ್ಲಿ ಇರುವಾಗಲೇ ನನ್ನ ಜೀವನಕ್ಕೆ ಎಂಟ್ರಿ ಕೊಟ್ಟು ಬದುಕು ಹಾಳು ಮಾಡಿದಿ ಎಂದೆಲ್ಲಾ ನಟ ಸಲ್ಮಾನ್ ಖಾನ್ ವಿರುದ್ಧ ಕೆಲ ತಿಂಗಳ ಹಿಂದೆ ಕಿಡಿ ಕಾರಿದ್ದರು ಬಾಲಿವುಡ್ ನಟಿ ಸೋಮಿ ಅಲಿ. ಸಲ್ಮಾನ್ ಖಾನ್ ತನ್ನನ್ನು ಬೇಕೆಂದ ಹಾಗೆಲ್ಲಾ ಬಳಸಿಕೊಂಡ, ಅತ್ಯಾಚಾರ ಮಾಡಿದ, ಸಿಗರೇಟ್‌ನಿಂದ ಸುಟ್ಟು ಖುಷಿಪಡುತ್ತಿದ್ದ, ನನ್ನ ಮೇಲೆ ಮದ್ಯವನ್ನು ಸುರಿದಿದ್ದ. ಹಲ್ಲೆ ನಡೆಸಿದ್ದ. ಆತನ ಹೊಡೆತದಿಂದ ಗಾಯಗಳಾಗಿದ್ದವು ಎಂದೂ ಅವರು ಹೇಳಿದ್ದರು. ಆದರೆ ಸಲ್ಮಾನ್ ಖಾನ್ ಅವರಿಗೆ ಇದುವರೆಗೆ ಶಿಕ್ಷೆ ಆಗಿಲ್ಲ ಎನ್ನುವುದು ಅವರ ನೋವಾಗಿತ್ತು.
1990 ರ ದಶಕದಲ್ಲಿ ಬುಲಂದ್, ಅಂತಾ ಮತ್ತು ಯಾರ್ ಗದರ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸೋಮಿ ಅಲಿ, ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ. ಎಂಟು ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್ ಮಾಡಿ ನಂತರ ಸೋಮಿಯನ್ನು ದೂರವಿಟ್ಟಿದ್ದರು ಸಲ್ಮಾನ್. ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಕರೆಸಿಕೊಳ್ಳುವ ಸಲ್ಮಾನ್ ಖಾನ್ ಸುತ್ತಲೂ ಇಂಥ ಹಲವು ನಟಿಯರು ಆರೋಪ ಮಾಡಿದ್ದು ಇದೆ. ಸದಾ ಲವ್ ಅಫೇರ್ಸ್ (Love Affair)ಗಳಿಂದ ಇವರು ಸುದ್ದಿಯಾಗುತ್ತಲೇ ಇದ್ದಾರೆ. ಅವರ ಪೈಕಿ ನಟಿ ಸೋಮಿ ಅಲಿ ಒಬ್ಬರು. ಬಾಲಿವುಡ್ ಅಂಗಳದಲ್ಲಿ ಸೋಮಿ ಮತ್ತು ಸಲ್ಮಾನ್ ಸುದ್ದಿ ಹಾಟ್ ಟಾಪಿಕ್ (Hot Topic) ಆಗಿದೆ. ಸಲ್ಮಾನ್ ಖಾನ್ನ ಮಾಜಿ ಗೆಳತಿಯೂ ಆಗಿರುವ ಸೋಮಿ, ಸಲ್ಮಾನ್ ವಿರುದ್ಧ ಕೆಲ ವರ್ಷಗಳಿಂದ ಇದೇ ರೀತಿ ಆರೋಪ ಮಾಡುತ್ತಲೇ ಬಂದಿದ್ದಾರೆ.
ಸಲಿಂಗಕಾಮದ ಹಲ್ಚಲ್ ಸೃಷ್ಟಿಸಿದ್ದ ಸ್ಯಾಂಡಲ್ವುಡ್ ಬೆಡಗಿ ಓವಿಯಾ ವೇಶ್ಯಾವಾಟಿಕೆಯ ಓಪನ್ ಮಾತು
ತಮಗೆ ಚಿತ್ರಹಿಂಸೆ ಕೊಟ್ಟು ಬದುಕನ್ನು ನರಕ ಮಾಡಿರುವ ಸಲ್ಮಾನ್ ಖಾನ್ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಒಂದು ವೇಳೆ ಹೀಗೆ ಮಾಡದಿದ್ದರೆ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದೂ ಬೆದರಿಕೆ ಹಾಕಿದ್ದರು. 'ಸಲ್ಮಾನ್ ಖಾನ್ ಎಂದಿಗೂ ಪರ್ಸನಲ್ ಆಗಿ ಕ್ಷಮೆ ಕೇಳಲಿಲ್ಲ. ಈಗ ಆತನ ಕರಾಳ ಮುಖ ಜಗಜ್ಜಾಹೀರವಾಗಿದೆ. ಹೆಣ್ಣುಮಕ್ಕಳನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ ಸಲ್ಮಾನ್, ಈಗ ಎಲ್ಲರೆದುರೂ ಕ್ಷಮೆ ಕೇಳಬೇಕು, ನನಗೆ ಆಗಿರುವ ಅನ್ಯಾಯ ಜಗಜ್ಜಾಹೀರ ಆಗಬೇಕು' ಎಂದಿದ್ದರು ನಟಿ ಸೋಮಿ. 'ಈ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ನನಗೆ ಒತ್ತಡ ಬರುವುದನ್ನು ನಾನು ಬಲ್ಲೆ. ಹಾಗೆ ಮಾಡದಿದ್ದರೆ ನನ್ನ ವಿವೇಕವನ್ನೂ ಪ್ರಶ್ನೆ ಮಾಡಲಾಗುತ್ತದೆ ಎನ್ನುವುದೂ ನನಗೆ ಗೊತ್ತು. ನಾನು ಕುಡಿದು ಮನಸ್ಥಿತಿ ಕಳೆದುಕೊಂಡು ಈ ರೀತಿ ಬರೆಯುತ್ತಿದ್ದೇನೆ ಎಂಬ ಗಂಭೀರ ಆರೋಪ ನನ್ನ ಮೇಲೆ ಬಂದರೂ ಅಚ್ಚರಿಯೇನಿಲ್ಲ. ಯಾರು ಏನೇ ಹೇಳಿದರೂ ನಾನು ಈ ವಿಷಯವನ್ನು ಬರೆಯಲೇ ಬೇಕು. ಯಾರು ಏನೇ ವ್ಯಂಗ್ಯ ಮಾಡಿದರೂ ನಾನು ಅನುಭವಿಸುತ್ತಿರುವ ನೋವು ಅವರಿಗೆ ಕಾಣುವುದಿಲ್ಲ. ಏಕೆಂದರೆ ನೀವು ಆ ಅವಮಾನವನ್ನು ಅವರು ಅನುಭವಿಸಿಲ್ಲ. ಎಲ್ಲ ರೀತಿಯ ಚಿತ್ರಹಿಂಸೆ ತಡೆದುಕೊಳ್ಳುತ್ತಿದ್ದೇನೆ' ಎಂದು ನಟಿ ಸೋಮಿ ಹೇಳಿದ್ದರು.
ಆದರೆ ಇದೀಗ ನಟಿ ಉಲ್ಟಾ ಹೊಡೆದಿದ್ದಾರೆ. ಆ ಎಲ್ಲಾ ಹಳೆಯ ಪೋಸ್ಟ್ಗಳು ಡಿಲೀಟ್ ಆಗಿವೆ. ಮೊದಲು ಹೇಳಿದ್ದು ನಾನಲ್ಲ. ನನ್ನ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ. ಅದು ಈಗ ನನ್ನ ಗಮನಕ್ಕೆ ಬಂದಿದೆ ಎಂದು ನಟಿ ಹೇಳಿದ್ದಾರೆ! ಸಲ್ಮಾನ್ ಖಾನ್ ಕುರಿತು ಆರೋಪಿಸಿರುವುದನ್ನು ನಿರಾಕರಿಸಿದ್ದಾರೆ. ನಾನು ಕೆಟ್ಟದ್ದು ಏನೂ ಪೋಸ್ಟ್ ಮಾಡಿಲ್ಲ. ನನ್ನ ಇತ್ತೀಚಿನ ಪೋಸ್ಟ್ ಗಣಪತಿ ಹಬ್ಬದ ಕುರಿತಾಗಿದೆ. ಅದು ನನ್ನ ಪ್ರೀತಿಯ ಹಬ್ಬ. ಆದರೆ, ಇದೀಗ ನನ್ನ ಇನ್‌ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದೆ. ನನ್ನ ಖಾತೆಯನ್ನು ಸುರಕ್ಷಿತಗೊಳಿಸಲು ಪಾಸ್‌ವರ್ಡ್ ಬದಲಾಯಿಸಿದ್ದೇನೆ. ಈ ಮೂಲಕ ಆನ್‌ಲೈನ್ ಸುರಕ್ಷತೆಗೆ ಕ್ರಮ ಕೈಗೊಂಡಿದ್ದೇನೆ. ಸಲ್ಮಾನ್ ಖಾನ್ ವಿರುದ್ಧ ಏನೂ ಆರೋಪ ಇಲ್ಲ ಎಂದಿದ್ದಾರೆ. ಇದನ್ನು ಕೇಳಿ ನೆಟ್ಟಿಗರು ನಟಿಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಕ್ಯಾಮೆರಾಕ್ಕೆ ಅಡ್ಡ ಬಂದ ವ್ಯಕ್ತಿಯನ್ನು ನಟಿ ಲಕ್ಷ್ಮಿ ಹೀಗೆ ಹೊಡೆಯೋದಾ? ನೆಟ್ಟಿಗರ ಆಕ್ರೋಶ