ಮನೆಯೊಳಗಿದ್ದು ನೊಂದ ಮನಸ್ಸಿಗೆ, ಏಕತಾನತೆ ದೂರ ಮಾಡಲು ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 5ರಂದು ರಾತ್ರಿ 9 ಗಂಟೆ 9 ನಿಮಿಷಕ್ಕೆ 9 ದೀಪಗಳನ್ನು ಹಚ್ಚಲು ಕರೆ ನೀಡಿದ್ದರು. ಪ್ರತಿಯೊಬ್ಬ ಭಾರತೀಯನಲ್ಲಿಯೂ ಆಗ್ಗಟ್ಟಿನ ಮಂತ್ರ ಜಪಿಸಲು ಮೋದಿ ಇಂಥದ್ದೊಂದು ಆಂದೋಲನಕ್ಕೆ ಕರೆ ನೀಡಿದ್ದರೆಂಬುವುದು ಎಲ್ಲರಿಗೂ ಇದೀಗ ಅರಿವಾಗಿದೆ. ಮೋದಿ ನೀಡಿರುವ ಕರೆಗೆ ಉದ್ಯಮಿಗಳು, ಸಿನಿ ತಾರೆಯರು ಸೇರಿ ಹಲವು ಗಣ್ಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ದೀಪ ಬೆಳಗಿದ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ತಾತನಾದ RGV; ಚಾನ್ಸ್‌ ಸಿಕ್ಕಿದ್ರೆ ಅವರನ್ನ ವರಿಸುತ್ತೇನೆಂದ ನಟಿ!

ಆದರೆ, ಇಲ್ಲೊಬ್ಬ ನಿರ್ದೇಶಕ ವಿಭಿನ್ನವಾಗಿ ದೀಪ ಬೆಳಗಿದ್ದು, ಅದಕ್ಕೊಂದು (ಅಪಾ)ಅರ್ಥ ಹುಡುಕಿಕೊಂಡಿದ್ದಾರೆ. ರಾತ್ರಿ 9 ಗಂಟೆಗೆ ಟ್ಟೀಟ್‌ ಮಾಡಿದ ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಲೈಟರ್‌ ಹಿಡಿದು, ಸಿಗರೇಟ್‌ ಹಚ್ಚುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಕೆಲವೇ ನಿಮಿಷಗಳಲ್ಲಿ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಿಗರೇಟ್‌ ಜೊತೆ ಮತ್ತೊಂದು ಫೋಟೋ ಶೇರ್ ಮಾಡಿಕೊಂಡು, ಡಿಸ್ಕ್ಲೈಮರ್‌ ಹಾಕಿದ್ದಾರೆ. 

 

'ಕೊರೋನಾ ವೈರಸ್‌ ಬಗ್ಗೆ ಎಚ್ಚರಿಕೆಯನ್ನು ಪಾಲಿಸದಿರುವುದು, ಸಿಗರೇಟ್‌ ಸೇದುವ ವಿರುದ್ಧ ಸರ್ಕಾರದ ಎಚ್ಚರಿಕೆಯನ್ನು ಉಲ್ಲಂಘಿಸುವುದಕ್ಕಿಂತಲೂ ಅಪಾಯ...' ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಏಪ್ರಿಲ್‌ 1ರಂದು ನನಗೆ ಕೊರೋನಾ ಪಾಸಿಟಿವ್‌ ಎಂದು ತಿಳಿದು ಬಂದಿದೆ ಎಂದು ಅಭಿಮಾನಿಗಳಿಗೆ ಟ್ಟಿಟರ್‌ ಮೂಲಕ ತಿಳಿಸಿದ್ದಾರೆ. ಆದರೆ ಕೆಲವೇ ಹೊತ್ತಿನಲ್ಲಿ  'ನಿಮಗೆ ನಿರಾಸೆ ಮಾಡಿದ್ದಕ್ಕೆ ಕ್ಷಮೆ ಇರಲಿ. ಇದು ಏಪ್ರಿಲ್ ಫೂಲ್‌ ಎಫೆಕ್ಟ್...' ಎಂದು ಮತ್ತೆ ಟ್ಟೀಟ್‌ ಮಾಡಿದ್ದಾರೆ.  ಖ್ಯಾತ ನಿರ್ದೇಶಕ ಎಂದು ಗುರುತಿಸಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಕಾಂಟ್ರವರ್ಸಿ ನಿರ್ದೇಶಕ ಎಂದೇ ಗುರುತಿಸಿಕೊಳ್ಳುತ್ತಿರುವ ವರ್ಮಾ ವಿರುದ್ಧ ಅಭಿಮಾನಿಗಳು ಕಿಡಿ ಕಾಡಿದ್ದಾರೆ. ಮೋದಿ ಮಾಡುತ್ತಿರುವ ಕೆಲಸದಲ್ಲಿ ಏನಾದರೂ ಉದ್ದೇಶವಿರುತ್ತದೆ. ಆದರೆ ನೀವು ಹೀಗೆ ವರ್ತಿಸುವುದು ಸರಿಯಲ್ಲ ಎಂದು ಗರಂ ಆಗಿದ್ದಾರೆ.

 

ಮೋದಿ ಕರೆಗೆ ಓಗೊಡದಿದ್ದರೂ ಅಡ್ಡಿ ಇರಲಿಲ್ಲ. ಆದರೆ, ರಾಮ್ ಗೋಪಾಲ್ ಸಿಗರೇಟ್ ಹಚ್ಚುವ ಮೂಲಕ ಅಭಿಮಾನಿಗಳಿಗೆ ತಪ್ಪು ಸಂದೇಶ ಸಾರಿದ್ದಂತೂ ಸತ್ಯ. ವಿಶ್ವವೇ ಅನಾರೋಗ್ಯದಿಂದ ಬಳಲುತ್ತಿದ್ದು, ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಬೇಕಾದ ಪರಿಸ್ಥಿತಿ ಇದೆ. ಅಂಥದ್ರಲ್ಲಿ ಇಂಥ ಬೇಜವಾಬ್ದಾರಿ ವರ್ತನೆ ಎಲ್ಲರಿಗೂ ಸಿಟ್ಟು ಬರಿಸುವುದು ಸಹಜವೇ. ಅದಕ್ಕೆ ನೆಟ್ಟಿಗರು ವರ್ಮಾರನ್ನು ಸರಿಯಾಗಿಯೇ ಕ್ಲ್ಯಾಸ್ ತೆಗೆದುಕೊಂಡಿದ್ದಾರೆಂಬುವುದು ಹಲವರ ಅಭಿಪ್ರಾಯ.