Asianet Suvarna News Asianet Suvarna News

ಬರ್ಲಾಂಪುರ್ ಗ್ಯಾಂಗ್ ರೇಪ್, ಈ ಕ್ರೂರ ಕೃತ್ಯಗಳೊಂದಿಗೆ ನಾವು ಬದುಕಬೇಕು: ಪ್ರಿಯಾಂಕ ಕಿಡಿ

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿ ಕ್ರೂರವಾಗಿ ಮರ್ದಿಸಲಾಗಿತ್ತು. ಈ ಕ್ರೂರ ಘಟನೆಗಳ ಬಗ್ಗೆ ಪ್ರಿಯಾಂಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Priyanka Chopra expresses anger over Balrampur gangrape dpl
Author
Bangalore, First Published Oct 2, 2020, 3:03 PM IST

ಉತ್ತರ ಪ್ರದೇಶದ ಬರ್ಲಾಂಪುರದ ದಲಿತ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಂದ ಘಟನೆಯನ್ನು ನಟಿ ಪ್ರಿಯಾಂಕ ಚೋಪ್ರಾ ಖಂಡಿಸಿದ್ದಾರೆ. ಹತ್ರಾಸ್ ಘಟನೆಯ ಬಗ್ಗೆ ನಿನ್ನೆಯಷ್ಟೇ ಪ್ರಿಯಾಂಕಾ ಚೋಪ್ರಾ ಖಂಡನೆ ವ್ಯಕ್ತಪಡಿಸಿದ್ದರು.

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿ ಕ್ರೂರವಾಗಿ ಮರ್ದಿಸಲಾಗಿತ್ತು. ಈ ಕ್ರೂರ ಘಟನೆಗಳ ಬಗ್ಗೆ ಪ್ರಿಯಾಂಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

11 ರೇಪುಗಳು ; ಹತ್ತಾರು ಅನುಮಾನಗಳು... ಬೆಚ್ಚಿ ಬೀಳಿಸುವ ಯುಪಿ ರಿಪೋರ್ಟ್ ಕಾರ್ಡ್!

ಬರ್ಲಾಂಪುರದಿಂದ ಭೀಕರ ಸುದ್ದಿ, ಪ್ರತಿ ಅತ್ಯಾಚಾರ ಬರೀ ಇನ್ನೊಂದು ಸಂಖ್ಯೆಯಲ್ಲ, ಆ ಕುಟುಂಬ ಈ ಭೀಕರ ಸತ್ಯದೊಂದಿಗೇ ಇನ್ನೆಂದೂ ಬದುಕಬೇಕು. ನಾವು ಪ್ರತಿಯೊಬ್ಬರೂ ಈ ನಿರ್ದಯವಾದ ಕ್ರೂರ ಕೃತ್ಯಗಳೊಂದಿಗೆ ಬದುಕಬೇಕು.

ಹತ್ರಾಸ್ ಬೆನ್ನಲ್ಲೇ ಉತ್ತರ ಪ್ರದೇಶ ಮತ್ತೊಂದು ಗ್ಯಾಂಗ್ ರೇಪ್!

ಮಹಿಳೆಯರಿಗೆ ಸೋಲಾಗಿದೆ ಎಂದು ನಾಚಿಗೆಯಿಂದ ತಲೆ ತಗ್ಗಿಸಬೇಕಾಗಿದೆ ಎಂದಿದ್ದಾರೆ. ಆಲಿಯಾ ಭಟ್, ಅನುಷ್ಕಾ ಶರ್ಮಾ, ರಿತೇಶ್ ದೇಶ್‌ಮುಖ್ ಸೇರಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.   

Follow Us:
Download App:
  • android
  • ios