ಹೈದರಾಬಾದ್ ಅತ್ಯಾಚಾರ ಸಂತ್ರಸ್ತೆ ಪ್ರಕರಣದ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಬೇಕೆಂದು ದೇಶದಾದ್ಯಂತ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದೆ.  ಇಂತ ಹೇಯ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಪ್ರಕರಣದ ಬಗ್ಗೆ ಬಹುತೇಕ ಮಂದಿ ಒಂದು ರೀತಿ ಮಾತನಾಡಿದರೆ ನಟ, ರಾಜಕಾರಣಿ ಪವನ್ ಕಲ್ಯಾಣ್ ಹೇಳಿಕೆ ಟೀಕೆಗೆ ಗುರಿಯಾಗಿದೆ. 

ವೈದ್ಯೆ ಕಿರುಚದಂತೆ ವಿಸ್ಕಿ ಸುರಿದಿದ್ದ ರೇಪಿಸ್ಟ್‌ಗಳು: ಪ್ರಜ್ಞೆ ತಪ್ಪಿದಾಗ ಅತ್ಯಾಚಾರ!

'ಅತ್ಯಾಚಾರ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ದೇಶಾದ್ಯಂತ ಸಾರ್ವಜನಿಕ ಒತ್ತಡ ಕೇಳಿ ಬರುತ್ತಿದೆ. ಆದರೆ ನಾನಿದನ್ನು ಒಪ್ಪುವುದಿಲ್ಲ. ಯಾರನ್ನೂ ಸಾಯಿಸಲು ನಮಗೆ ಹಕ್ಕಿಲ್ಲ.  ಅವರನ್ನು ನೇಣಿಗೆ ಹಾಕುವ ಅಗತ್ಯವಿಲ್ಲ. ಕಬ್ಬಿನ ಜಲ್ಲೆಯಿಂದ ಚರ್ಮ ಕಿತ್ತು ಬರುವವರೆಗೂ ಹೊಡೆಯಬೇಕು. ಅಷ್ಟೇ ಸಾಕು' ಎಂದಿದ್ದಾರೆ.  ಪವನ್ ಕುಮಾರ್ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. 

ಇದಕ್ಕೆ ಆಂಧ್ರ ಪ್ರದೇಶ ಗೃಹ ಸಚಿವೆ ಮೆಕಾತೋಟಿ ಸುಚರಿತ ಪ್ರತಿಕ್ರಿಯಿಸಿದ್ದು, ಪವನ್ ಈ ರೀತಿ ಹೇಳುವುದು ಸರಿಯಲ್ಲ. ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದಿದ್ದಾರೆ.