ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅಭಿನಯದ ರೀಸೆಂಟ್ ಸಿರೀಸ್‌ ಬಗ್ಗೆ ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬ ಕಮೆಂಟ್ ಮಾಡಿ ನಿಮ್ಮ ಸೆಕ್ಸ್ ರೋಲ್‌ಗಳೇ ಅತ್ಯಾಚಾರ ಹೆಚ್ಚಳಕ್ಕೆ ಕಾರಣ ಎಂದು ಬರೆದಿದ್ದಾರೆ.

ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯತ್ತಿದ್ದ ಸಂದರ್ಭವೇ ಈ ರೀತಿ ಸ್ಟೇಟಸ್ ಹಾಕಿ ನಟಿಯನ್ನು ಟ್ಯಾಗ್ ಮಾಡಲಾಗಿದೆ. ಹತ್ರಾಸ್ ಹಾಗೂ ಬರ್ಲಾರಂಪುರದಲ್ಲಿ ನಡೆದ ಘಟನೆ ಬೆನ್ನಲ್ಲಿಯೇ ರಾಸ್‌ಭರಿ ವೆಬ್‌ಸಿರೀಸ್‌ ನಟಿಯ ವಿರುದ್ಧ ಟೀಕೆ ವ್ಯಕ್ತವಾಗಿದೆ.

CBI, ED ರಿಯಾ ಕೇಸ್ ಬಿಟ್ಟು, ನೀರವ್ ಮೋದಿ ಕಡೆ ನೋಡಲಿ ಎಂದ ನಟಿ ಸ್ವರಾ

ದೇಶಕ್ಕೇ ನಾಚಿಕೆಯಾಗಿದೆ. ಇದು ಸ್ವರಾ ಭಾಸ್ಕರ್. ರಾಸ್ಭರಿಯಂತಹಾ ಶೋಗಳು ಸೆಕ್ಸ್‌ ಪ್ರಚೋದಿಸಿ, ಮಹಿಳೆಯರ ವಿರುದ್ಧ ದೌರ್ಜನ್ಯ ಹೆಚ್ಚಿಸುತ್ತಿವೆ ಎಂದು ಟ್ವೀಟ್ ಮಾಡಲಾಗಿದೆ.

ಇದು ತಪ್ಪು ಚಿಂತನೆ. ವಯಸ್ಕರು ಪರಸ್ಪರ ಒಪ್ಪಿಗೆಯಿಂದ ಸೆಕ್ಸ್ ಮಾಡುವುದು ನ್ಯಾಚುರಲ್. ಹಾಗೆಯೇ ನಾವೆಲ್ಲರೂ ಹುಟ್ಟಿದ್ದು. ರೇಪ್ ಹಾಗಲ್ಲ. ಇದು ಬಲವಂತದ ಸೆಕ್ಸ್. ಇದರ ನಡುವಿನ ವತ್ಯಾಸ ತಿಳ್ಕೊಳ್ಳಿ ಎಂದು ಕ್ಲಾಸ್ ತೆಗೆದಿದ್ದಾರೆ. ನನ್ನ ರೋಲ್‌ನಿಂದ ರೇಪ್ ಹೆಚ್ತಿಲ್ಲ, ನಿಮ್ಮಂತಹ ಯೋಚನೆಯಿಂದ ಹೆಚ್ಚುತ್ತಿದೆ, ಕೆಲವೊಮ್ಮೆಯಾದರೂ ನಿಮ್ಮ ಬುದ್ಧಿ ಉಪಯೋಗಿಸಿ ಎಂದಿದ್ದಾರೆ.