ಡ್ರೆಸ್ ಜಾರುತ್ತಿದ್ದರೂ ಗೊತ್ತಾಗದಂತೆ ಕುಡಿದು ತೂರಾಡಿದ ಉರ್ಫಿ
ಪಿಂಕ್ ಶಾರ್ಟ್ ಡ್ರೆಸ್ ಧರಿಸಿರುವ ಉರ್ಫಿಗೆ ಸರಿಯಾಗಿ ಹೆಜ್ಜೆ ಇರಿಸಲು ಸಾಧ್ಯವಾಗಲ್ಲ. ಪಕ್ಕದಲ್ಲಿದ್ದ ಗೆಳತಿಯರ ಮೇಲೆ ಭಾರ ಹಾಕಿ ಉರ್ಫಿ ಕಾರ್‌ವರೆಗೂ ನಡೆದುಕೊಂಡು ಬರುತ್ತಾರೆ.
ಮುಂಬೈ: ಬಿಗ್‌ಬಾಸ್ ಶೋನ ಸ್ಪರ್ಧಿಯಾಗಿದ್ದ ಉರ್ಫಿ ಜಾವೇದ್ ನಶೆಯಲ್ಲಿ ತೇಲಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಮ್ಮ ವಿಚಿತ್ರ ಡ್ರೆಸ್‌ಗಳಿಂದಲೇ ಸುದ್ದಿಯಾಗುವ ಉರ್ಫಿ ಜಾವೇದ್, ಇದೀಗ ನಶೆಯಲ್ಲಿ ನಡೆಯಲಾಗರದ ಸ್ಥಿತಿಯಲ್ಲಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಶನಿವಾರ ರಾತ್ರಿ ಪಾರ್ಟಿ ಮುಗಿಸಿ ಹೊರಗೆ ಬರುವ ಸಂದರ್ಭದಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.
ಪಿಂಕ್ ಶಾರ್ಟ್ ಡ್ರೆಸ್ ಧರಿಸಿರುವ ಉರ್ಫಿಗೆ ಸರಿಯಾಗಿ ಹೆಜ್ಜೆ ಇರಿಸಲು ಸಾಧ್ಯವಾಗಲ್ಲ. ಪಕ್ಕದಲ್ಲಿದ್ದ ಗೆಳತಿಯರ ಮೇಲೆ ಭಾರ ಹಾಕಿ ಉರ್ಫಿ ಕಾರ್‌ವರೆಗೂ ನಡೆದುಕೊಂಡು ಬರುತ್ತಾರೆ. ಮಧ್ಯದಲ್ಲಿಯೇ ತೊದಲುತ್ತಾ ಸಾರಿ ಅಂತಾರೆ. ಕಾರ್ ಒಳಗೆ ಹೋಗಲು ಸ್ನೇಹಿತೆಯರು ಒತ್ತಾಯಿಸಿದ ಬಳಿಕ ಉರ್ಫಿ ಹೋಗ್ತಾರೆ. ವಿಡಿಯೋ ನೋಡಿದ ನೆಟ್ಟಿಗರು ಉರ್ಫಿ ಜಾವೇದ್ ಫುಲ್ ಟೈಟ್ ಆಗಿದ್ದಾರೆ. ವೀಕೆಂಡ್ ಪಾರ್ಟಿ ಜೋರು ಆದಂತೆ ಕಾಣಿಸುತ್ತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಹೀರೋಗೆ 23 ಬಾರಿ ಕಿಸ್ ಮಾಡಿದ್ದ ಈ ನಟಿಯ ಬಟ್ಟೆ ಉರ್ಫಿಗಿಂತ ಸಿಕ್ಕಾಪಟ್ಟೆ ಖುಲ್ಲಾ ಖುಲ್ಲಾ!
ಇನ್ನು ಕೆಲವರು ಉರ್ಫಿ ಜಾವೇದ್ ನಾಟಕ ಮಾಡುತ್ತಿದ್ದಾಳೆ. ಕ್ಯಾಮೆರಾಗಳನ್ನು ಕಂಡ ಕೂಡಲೇ ಉರ್ಫಿ ತನ್ನ ನಾಟಕ ಶುರು ಮಾಡ್ತಾಳೆ. ಡೋಂಟ್ ವರಿ ಎಂದು ಹಲವರು ಹೇಳಿದ್ದಾರೆ. ಇಲ್ಲ ಯಾಕೆ ನಿಜವಾಗಿಯೂ ಮದ್ಯದ ಅಮಲಿನಲ್ಲಿಯೇ ಇದ್ದಾಳೆ. ಆಕೆ ಸಾರಿ ಎಂದು ಹೇಳುತ್ತಿರೋದನ್ನು ನೋಡಿದ್ರೆ ಆಕೆ ನಶೆಯಲ್ಲಿದ್ದಾಳೆ ಎಂಬುವುದು ಸ್ಪಷ್ಟವಾಗುತ್ತದೆ. ಗೆಳತಿಯರು ಸಹ ಆಕೆಯನ್ನು ಅಲ್ಲಿಂದ ಸಾಗಿ ಹಾಕುವ ತರಾತುರಿಯಲ್ಲಿದ್ದಂತೆ ಕಾಣಿಸುತ್ತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.
ಸದಾ ತಮ್ಮ ವಿಶೇಷ ಬಟ್ಟೆ ವಿನ್ಯಾಸದಿಂದಲೇ ಸುದ್ದಿಯಲ್ಲಿರುವ ಉರ್ಫಿ ಜಾವೇದ್, ಹಲವು ಬಾರಿ ಬಾಲಿವುಡ್ ಅಂಗಳದ ಹಿಂದಿನ ರಹಸ್ಯಗಳನ್ನು ಬಿಚ್ಚಿಡುತ್ತಿರುತ್ತಾರೆ. ಸಂದರ್ಶನದಲ್ಲಿ ಮಾತನಾಡಿದ್ದ ಉರ್ಫಿ ಜಾವೇದ್, ಹಲವು ಸೆಲೆಬ್ರಿಟಿಗಳು ಇವೆಲ್ಲವನ್ನೂ ನಾಟಕ ಮಾಡಿ ಜನರ ಗಮನ ಸೆಳೆಯಲು ಮಾಡುತ್ತಾರೆ. ಕೆಲವೊಮ್ಮೆ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎಂದು ಹೇಳಿದ್ದರು. ನಾನು ತುಂಬಾ ಬಡತನದಲ್ಲಿ ಬೆಳೆದು ಬಂದವಳು. ನಮ್ಮದು ಮಧ್ಯಮ ವರ್ಗದ ಕುಟುಂಬಗಳು. ನಮಗೆ ಎಲ್ಲಾ ಅವಕಾಶಗಳು ಸಿಕ್ಕಿರಲಿಲ್ಲ. ಆದ್ರೆ ಇಂತಹ ಮಾತುಗಳನ್ನು ಸಿಂಪಥಿಗಾಗಿ ಕೆಲವರು ಹೇಳುತ್ತಾರೆ. ಅವರ ಬಾಯಲ್ಲಿ ಈ ಮಾತುಗಳನ್ನು ಕೇಳಿದಾಗ ಇರಿಟೇಟ್ ಆಗುತ್ತೆ ಎಂದು ಕಿಡಿಕಾರಿದ್ದರು.
ಉರ್ಫಿ ಮೈ ತುಂಬಾ ನೀರೂರಿಸುವ ಚೈನೀಸ್ ಡಿಷಸ್: ಅಲ್ಲೇ ತಿನ್ಬೋದಾ ಕೇಳ್ತಿದ್ದಾರೆ ತರ್ಲೆ ನೆಟ್ಟಿಗರು!