ಅಟ್ಲಿ ಮೈ ಬಣ್ಣದ ಬಗ್ಗೆ ವ್ಯಂಗ್ಯ ಮಾಡಿ ನಕ್ಕ ಕಪಿಲ್ ಶರ್ಮಾ… ಖಡಕ್ ಉತ್ತರ ಕೊಟ್ಟ ಸ್ಟಾರ್ ನಿರ್ದೇಶಕ

ಜವಾನ್ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಸದ್ದು ಮಾಡಿದ್ದ ಜನಪ್ರಿಯ ತಮಿಳು ನಿರ್ದೇಶಕ ಅಟ್ಲಿ ಅವರ ದೇಹದ ಬಣ್ಣದ ಬಗ್ಗೆ ಅನುಚಿತ ಪ್ರಶ್ನೆಗಳನ್ನು ಕೇಳಿ ನಕ್ಕ ಕಪಿಲ್ ಶರ್ಮಾಗೆ, ಅಟ್ಲಿ ಕೊಟ್ಟ ಖಡಕ್ ಉತ್ತರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 
 

Director Atlee give strong reply for Kapil Sharmas offensive joke pav

ತಮಿಳಿನಲ್ಲಿ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ನಿರ್ದೇಶಕ ಅಟ್ಲಿ (Director Atlee), ಜವಾನ್ ಚಿತ್ರದ ಮೂಲಕ ಬಾಲಿವುಡ್ ನಲ್ಲೂ ಸದ್ದು ಮಾಡಿದ್ದರು. ರಾಜಾ ರಾಣಿ, ಥೇರಿ, ಮರ್ಸಲ್, ಬಿಗಿಲ್ ಸಿನಿಮಾಗಳನ್ನು ನೀಡಿ ಗೆದ್ದ ಈ ನಿರ್ದೇಶಕನಿಗೆ ಇದೀಗ ಹಿಂದಿಯ ಜನಪ್ರಿಯ ಕಾರ್ಯಕ್ರಮವೊಂದರಲ್ಲಿ ಅವಮಾನವಾಗಿದ್ದು, ಆ ಟೀಕೆಗೆ ನಿರ್ದೇಶಕ ಖಡಕ್ ಆಗಿ ಉತ್ತರ ನೀಡಿದ್ದು, ಸದ್ಯ ಆ ವಿಡಿಯೋ ವೈರಲ್ ಆಗುತ್ತಿದೆ. 

 ಹೌದು, ಜನಪ್ರಿಯ ನಿರ್ದೇಶಕ ಅಟ್ಲಿ ಅವರ ದೇಹದ ಬಣ್ಣವನ್ನು ಇಟ್ಟುಕೊಂಡು  ಪರೋಕ್ಷವಾಗಿ ಕಪಿಲ್ ಶರ್ಮಾ (Kapil Sharma) ವ್ಯಂಗ್ಯವಾಗಿ ಮಾತನಾಡಿ, ನಕ್ಕಿದ್ದು. ಇದಕ್ಕೆ  ಅಟ್ಲಿ  ನಗದೇ ಖಡಕ್ ಆಗಿ ಉತ್ತರ ನೀಡಿದ್ದಾರೆ. ಇಬ್ಬರ ನಡುವಿನ ಮಾತುಕತೆಯ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಜನಪ್ರಿಯ ನಿರ್ದೇಶಕರನ್ನು ಕಾರ್ಯಕ್ರಮಕ್ಕೆ ಕರೆಯಿಸಿ, ಅವರ ಬಣ್ಣದ ಬಗ್ಗೆ ಅವಮಾನ ಮಾಡಿರೋದಕ್ಕಾಗಿ ಕಪಿಲ್ ಶರ್ಮಾ ವಿರುದ್ಧ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ. 

ಸಲ್ಮಾನ್ ಖಾನ್‌ ಸಿನಿಮಾಗೆ ಅಟ್ಲಿ ಆ್ಯಕ್ಷನ್ ಕಟ್, ನಿರ್ದೇಶಕ ಸಂಭಾವನೆ ಎಷ್ಟು ಕೋಟಿ ?

ಅಟ್ಲಿ ಇತ್ತೀಚೆಗೆ ಹಿಂದಿಯ ಜನಪ್ರಿಯ ಕಾಮಿಟಿ ಶೋ ಆಗಿರುವ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ  (The Great Indian Kapil Show) ಆಗಮಿಸಿದ್ದರು. ಈ ವೇಳೆ ಕಪಿಲ್ ಅವರು ಅಟ್ಲಿಯವರನ್ನು ಪ್ರಶ್ನಿಸುತ್ತಾ, ನೀವು ಯಾವುದಾದರೂ ಸ್ಟಾರ್​ ನಟರನ್ನು ಅಥವಾ ನಿರ್ದೇಶಕರನ್ನು ಮೊದಲ ಬಾರಿ ಭೇಟಿ ಮಾಡಲು ಹೋದಾಗ, ಅವರು ಅಟ್ಲಿ ಎಲ್ಲಿ ಎಂದು ಕೇಳಿದ್ದಾರೆಯೇ? ಈ ರೀತಿಯ ಘಟನೆ ನಡೆದಿದೆಯೇ ಎಂದು ಕೇಳಿ ನಕ್ಕಿದ್ದಾರೆ, ಜೊತೆಗೆ ಅರ್ಚನಾ ಪೂರಣ್ ಸಿಂಗ್ ಸೇರಿ, ಇತರರು ಕೂಡ ನಕ್ಕಿದ್ದಾರೆ. ಆದರೆ ಈ ಪ್ರಶ್ನೆಗೆ ಅಟ್ಲಿ ಮುಖದಲ್ಲಿ ನಗು ತರದೇ, ಸೀರಿಯಸ್ ಆಗಿ, ಜೊತೆಗೆ ಅಷ್ಟೇ ಖಡಕ್ ಆಗಿ ಉತ್ತರ ನೀಡಿದ್ದಾರೆ. 

ಕಪಿಲ್ ಮಾತಿಗೆ ಉತ್ತರಿಸಿದ ಅಟ್ಲಿ ‘ಸರ್ ನೀವು ಯಾವ ಅರ್ಥದಲ್ಲಿ ಪ್ರಶ್ನೆ ಕೇಳಿದ್ದೀರಿ, ಅನ್ನೋದು ನನಗೆ ಅರ್ಥ ಆಗಿದೆ. ನಾನು ಉತ್ತರಿಸಲು ಪ್ರಯತ್ನಿಸುತ್ತೇನೆ. ಮೊದಲಿಗೆ ನಾನು ಎಆರ್​ ಮುರುಗದಾಸ್​ಗೆ (A R Murugadas) ಧನ್ಯವಾದ ಹೇಳಬೇಕು. ಅವರೇ ನನ್ನ ಮೊದಲ ಸಿನಿಮಾನ ನಿರ್ಮಾಣ ಮಾಡಿದ್ದು. ಅವರು ಸ್ಕ್ರಿಪ್ಟ್ ಕೇಳಿದ್ದರು ಅಷ್ಟೇ, ನಾನು ಹೇಗಿದ್ದೇನೆ ಅನ್ನೋದನ್ನು ಅವರು ನೋಡಲಿಲ್ಲ, ಅವರು ನನ್ನ ಸ್ಕ್ರಿಪ್ಟ್ ನರೇಷನ್ ಕೇಳಿ ಇಷ್ಟಪಟ್ಟರು. ಒಬ್ಬರು ಹೇಗೆ ಕಾಣುತ್ತೇವೆ ಎಂಬುದರ ಮೇಲೆ ನಾವು ಜಡ್ಜ್ ಮಾಡಬಾರದು. ಒಬ್ಬರ ಹೃದಯವನ್ನು ನೋಡಿ ಜಡ್ಜ್ ಮಾಡಬೇಕು’ ಎಂದು ಅಟ್ಲಿ ಹೇಳಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಅಟ್ಲಿ ಕುಮಾರನ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ಸದ್ಯ ಸೋಶಿಯಲ್ ಮೀಡಿಯಾದಲ್ಲಿ (Social Media) ಈ ವಿಡಿಯೋ ವೈರಲ್ ಆಗುತ್ತಿದೆ. ಸೆಲೆಬ್ರಿಟಿಗಳು ಸಹ ಈ ವಿಡಿಯೋವನ್ನು ಶೇರ್ ಮಾಡುವ ಮೂಲಕ ಕಪಿಲ್ ಶರ್ಮಾ ವಿರುದ್ಧ ಕಿಡಿ ಕಾರಿದ್ದಾರೆ. ಕಪಿಲ್ ಶರ್ಮಾ ಈ ರೀತಿ ಇನ್ಸಲ್ಟ್ ಮಾಡೋದು ಸರಿಯಲ್ಲ ಎಂದಿದ್ದಾರೆ. ಗಾಯಕಿಯಾಗಿರುವ ಚಿನ್ಮಯಿ ಶ್ರೀಪಾದ ಕೂಡ ಈ ವಿಡಿಯೋ ಶೇರ್ ಮಾಡಿ, 'ಕಾಮಿಡಿ' ಹೆಸರಿನಲ್ಲಿ ಅವರ ಚರ್ಮದ ಬಣ್ಣವನ್ನು ಟೀಕಿಸುವ ಈ ಕೊಳಕು ಮತ್ತು ಜನಾಂಗೀಯ ನಿಂದನೆಗಳನ್ನು ಅವರು ಎಂದಿಗೂ ನಿಲ್ಲಿಸುವುದಿಲ್ಲವೇ? ಕಪಿಲ್ ಶರ್ಮಾ ಅವರಂತಹ ವ್ಯಕ್ತಿ ಈ ರೀತಿ ಹೇಳಿರುವುದು ನಿಜಕ್ಕೂ ನಿರಾಶಾದಾಯಕ ಮತ್ತು ದುರದೃಷ್ಟವಶಾತ್ ಎಂದು ಬರೆದುಕೊಂಡಿದ್ದಾರೆ.

 

Latest Videos
Follow Us:
Download App:
  • android
  • ios