Asianet Suvarna News Asianet Suvarna News

ಹಿಮಾಂಶು ಶರ್ಮಾ ಜೊತೆಗಿನ ಬ್ರೇಕಪ್‌ ಬಗ್ಗೆ ಬಾಯ್ಬಿಟ್ಟ ಸ್ವರಾ ಭಾಸ್ಕರ್

ಬಾಲಿವುಡ್ ವಿವಾದಾತ್ಮಕ ನಟಿ, ಸೆಕ್ಸಿ ಗರ್ಲ್ ಸ್ವರಾ ಭಾಸ್ಕರ್ ವಿವಾದಾತ್ಮಕ ಹೇಳಿಕೆಗಳಿಂದ ಸಿಕ್ಕಾಪಟ್ಟೆ ಫೇಮಸ್. ಅವರ ವೈಯಕ್ತಿಕ ಜೀವನ, ಸಿನಿ ಗಾಸಿಪ್‌ಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಹಿಮಾಂಶು ಶರ್ಮಾ ಬ್ರೇಕಪ್‌ನಿಂದಾಗಿ ಸುದ್ದಿಯಲ್ಲಿದ್ದಾರೆ. 

Bollywood Swara Bhasker opens up on her break up with Himanshu Sharma
Author
Bengaluru, First Published Mar 29, 2020, 1:40 PM IST

ಬಾಲಿವುಡ್ ವಿವಾದಾತ್ಮಕ ನಟಿ, ಸೆಕ್ಸಿ ಗರ್ಲ್ ಸ್ವರಾ ಭಾಸ್ಕರ್ ವಿವಾದಾತ್ಮಕ ಹೇಳಿಕೆಗಳಿಂದ ಸಿಕ್ಕಾಪಟ್ಟೆ ಫೇಮಸ್. ಅವರ ವೈಯಕ್ತಿಕ ಜೀವನ, ಸಿನಿ ಗಾಸಿಪ್‌ಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಹಿಮಾಂಶು ಶರ್ಮಾ ಬ್ರೇಕಪ್‌ನಿಂದಾಗಿ ಸುದ್ದಿಯಲ್ಲಿದ್ದಾರೆ. 

ಬೀದಿ ನಾಯಿಗಳಿಗೆ ನೆರವಾದ ಕನ್ನಡ ನಟಿ; ನೆಟ್ಟಿಗರು ಫುಲ್‌ ಫಿದಾ!

ಬ್ರೇಕಪ್ ಬಗ್ಗೆ ಮಾತನಾಡುತ್ತಾ,  ಬ್ರೇಕಪ್ ಆದಾಗ ಎಲ್ಲರಂತೆ ನನಗೂ ಬಹಳ ಬೇಸರವಾಗಿತ್ತು. ನನ್ನ ದುರಾದೃಷ್ಟ. ನಮ್ಮ ಸಂಬಂಧದಲ್ಲಿ ಕೆಟ್ಟದ್ದೇನೂ ಅಗಿರಲಿಲ್ಲ. ಅಥವಾ ಯಾರೂ ಹುಳಿ ಹಿಂಡಿರಲಿಲ್ಲ. ನಮ್ಮ ನಮ್ಮ ದಾರಿ ಬೇರೆಯಾದಾಗ ಅನಿವಾರ್ಯವಾಗಿ ಬೇರೆಯಾಗಲೇಬೇಕಾಯಿತು. ಅವರವರ ದಾರಿ ಅವರಿಗೆ ಎಂದು ಬೇರೆಯಾದೆವು ಎಂದಿದ್ದಾರೆ. 

ಬ್ರೇಕಪ್ ಅದಾಗ ಬಹಳ ನೋವಾಯಿತು. ಕುಟುಂಬದವರೊಡನೆ, ಸ್ನೇಹಿತರೊಡನೆ ಹಂಚಿಕೊಂಡೆ. ಅವರೆಲ್ಲರೂ ನನ್ನ ಬೆನ್ನಿಗೆ ನಿಂತರು' ಎಂದಿದ್ದಾರೆ. 

ಸ್ವರಾ ಹಾಗೂ ಹಿಮಾಂಶು ರಾಂಜಾನಾ ಸಿನಿಮಾ ಸೆಟ್‌ನಲ್ಲಿ ಭೇಟಿಯಾದರು. ಅಲ್ಲಿಂದ ಶುರುವಾದ ಸ್ನೇಹ, ಪ್ರೀತಿಗೆ ತಿರುಗಿ 5 ವರ್ಷಗಳ ಕಾಲ ಡೇಟಿಂಗ್‌ನಲ್ಲಿ ಬ್ಯುಸಿಯಾದರು. ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುತ್ತಿರುವಾಗ ನಿಧಾನ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದು ಬ್ರೇಕಪ್ ಮಾಡಿಕೊಂಡಿದ್ದಾರೆ. 
 

Follow Us:
Download App:
  • android
  • ios