ಚಿತ್ರರಂಗಕ್ಕೆ ಈಗಷ್ಟೇ ಕಾಲಿಟ್ಟ ನಟಿಯರಿಂದ ಹಿಡಿದು ಹಿರಿಯ ನಟಿಯರನ್ನೂ ಬಿಡದೇ ಕಾಡಿದ  ಕಾಸ್ಟಿಂಗ್ ಕೌಚ್‌ ಎರಡು-ಮೂರು ವರ್ಷಗಳಿಂದ ಸಾಕಷ್ಟು ಸದ್ದು  ಮಾಡುತ್ತಿದೆ. ನಟಿ  ಮಂಜರಿ ಫಡ್ನೀಸ್‌, ಸಪ್ನಾ ಪಬ್ಬಿ, ತುನುಶ್ರೀ ದತ್ತಾ, ಪದ್ಮ ಲಕ್ಷ್ಮಿ, ರಾಧಿಕಾ ಆಪ್ಟೆ ಮುಂತಾದವರು ಈ ಬಗ್ಗೆ ಧೈರ್ಯವಾಗಿ ಮಾತನಾಡಿದ್ದಾರೆ. ಕಾಸ್ಟಿಂಗ್‌ ಕೌಚ್‌ ಪಟ್ಟಿಯಲ್ಲಿ ನಟಿಯರ ಸಂಖ್ಯೆಯೇ ಹೆಚ್ಚಿದರೂ ಅಲ್ಲೊಮ್ಮೆ, ಇಲ್ಲೊಮ್ಮೆ ನಟರೂ ಅದರ ಬಗ್ಗೆ ಮಾತನಾಡಿದ್ದಾರೆ. ಅವರಿಗೂ ಈ ಸಮಸ್ಯೆ ತಪ್ಪಿಲ್ಲ.

ಕೊರೋನಾ ಲಾಕ್‌ಡೌನ್‌ನಲ್ಲಿ ಬಾಲಿವುಟ್‌ ನಟ-ನಟಿಯರು ಅನೇಕ ವಿಚಾರಗಳ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಲೈವ್‌ ಮೂಲಕವೇ ಚರ್ಚಿಸುತ್ತಾರೆ. ನಟ ರಾಜೀವ್‌ ಖಂಡೇಲ್‌ವಾಲ್‌ ಕಾಸ್ಟಿಂಗ್‌ ಬಗ್ಗೆ ನೀಡಿರುವ ಹೇಳಿಕೆಯನ್ನು ನಟಿಯರು, ಧಿಕ್ಕರಿಸುತ್ತಿದ್ದಾರೆ. ಅಷ್ಟಕ್ಕೂ ನಟಿಯರಿಗೆ ಸಿಟ್ಟು ಬರುವಂತೆ ಇವರು ಹೇಳಿದ್ದೇನು?

ಆಡಿಷನ್‌ಗೆ ಕರೆದು, ಹಿಂಗ್ ಮಾಡೋದಾ? #MeToo ಕಥೆ ಬಿಚ್ಚಿಟ್ಟ ನಾಗಿನ್ ನಟಿ

ಕಿರುತೆರೆ ಧಾರಾವಾಹಿಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ರಾಜೀವ್‌ 2008ರಲ್ಲಿ 'ಆಮಿರ್‌' ಚಿತ್ರದ ಮೂಲಕ ಬಿ-ಟೌನ್‌ಗೆ ಕಾಲಿಟ್ಟರು. ಸಿನಿಮಾಗಳಲ್ಲಿ ಆಫರ್‌ ಪಡೆಯುವ ಮೊದಲು ರಾಜೀವ್‌ ಮೇಲೆ ಕಾಸ್ಟಿಂಗ್ ಕೌಚ್‌ ಒತ್ತಡವಿತ್ತಂತೆ. ಆದರೆ ಅದನ್ನು ನಯವಾಗಿ ತಿರಸ್ಕರಿಸಿ, ಗೆದ್ದಿದ್ದಾರೆ. 'ಕಾಸ್ಟಿಂಗ್‌ ಕೌಚ್‌ ಬಗ್ಗೆ ನಟಿಯರು ಮಾತನಾಡುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಕರೆಯುವವರು ಹಾಗೂ ಒಪ್ಪಿಕೊಂಡು ಹೋಗುವವರದ್ದೂ ತಪ್ಪು. ಹಾಗಾಗಿ ಇಬ್ಬರದ್ದೂ ತಪ್ಪಿರುತ್ತದೆ. ಒಬ್ಬ ನಟಿ ಶೋಷಣೆಗೆ ಒಳಗಾಗಿದ್ದಾಳೆ ಎಂಬುದನ್ನು ನೀವು ಹೇಗೆ ಹೇಳುತ್ತೀರಾ? ಶೋಷಣೆಗೆ ಒಳಗಾಗುವುದರ ಬಗ್ಗೆ ಮಾತನಾಡಲು ನಟಿ ಹೆದರುತ್ತಾಳೆ ಎಂದಾ? ಒಬ್ಬ ಸಹ ನಟ ಆಕೆಗಿಂತಲೂ ಹೆಚ್ಚು ಪ್ರಭಾವ ಬೀರುವಂತಹ ಪಾತ್ರದಲ್ಲಿ ನಟಿಸುತ್ತಿದ್ದರೆ ಮಾತ್ರ ಕಾಸ್ಟಿಂಗ್ ಕೌಚ್ ಬಗ್ಗೆ ನಟಿಯರು ಮಾತನಾಡುತ್ತಾರೆ. ಇದರ ಅರ್ಥ ಅವರು ಆತ್ಮ ವಿಶ್ವಾಸ ಹಾಗೂ ತನ್ನ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆಂದರ್ಥ. ಕಾಸ್ಟಿಂಗ್ ಕೌಚ್‌ ಅಂದರೆ ರೇಪ್‌ ಅಲ್ಲ. ನನ್ನ ಪ್ರಕಾರ ನೀವು ಆ ಸಂದರ್ಭಕ್ಕೆ ಸಿಲುಕಿ ಕೊಂಡಿದ್ದೀರಾ, ಅದರಿಂದ ನಿಮಗೆ ಮತ್ತೊಂದು ಅವಕಾಶ ಕಾದಿದೆ. ದುರ್ಬಲ ಮನಸ್ಥತಿ ಇರುವವರು ಮಾತ್ರ ಇಂಥ ಶೋಷಣೆಗೆ ಒಳಗಾಗುತ್ತಾರೆ ಅಥವಾ ಅವರಿಗೆ ಇದನ್ನು ಎದುರಿಸಲು ಧೈರ್ಯವಿರುವುದಿಲ್ಲ, ಅದಿಕ್ಕೆ ಮಾತನಾಡುತ್ತಾರೆ' ಎಂದು ರಾಜೀವ್‌ ಹೇಳಿದ್ದಾರೆ. 

ಆ ಮೂಲಕ ನಟರೂ ಈ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದಿದ್ದಲ್ಲದೇ, ಹೆಣ್ಣು ಮಕ್ಕಳು ಹೆಚ್ಚು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಇರಬೇಕೆಂದು ಪರೋಕ್ಷವಾಗಿ ಹೇಳಿದ್ದಾರೆ. 

ಆಡಿಷನ್‌ನಲ್ಲಿ ರೇಪ್‌ ಸೀನ್ ಮಾಡಿ ಎಂದಿದ್ದಕ್ಕೆ ರೂಮ್‌ನಿಂದ ಓಡಿ ಹೋದ ನಟಿ!

ಕಾಸ್ಟಿಂಗ್ ಕೌಚ್‌ಗೆ ಒಳಗಾದ ವ್ಯಕ್ತಿ ಮೊದಲು 'ನನಗೆ ಆಫರ್‌ ನೀಡಿದ ವ್ಯಕ್ತಿಯನ್ನು ನಾನು ತೀರಸ್ಕರಿಸಬೇಕಾ? ಅವರು ನನ್ನನು ರೇಪ್ ಮಾಡಿಲ್ಲ ಅಥವಾ ನನ್ನ ಮೇಲೆ ಯಾವುದೇ ಹಲ್ಲೆ ಮಾಡಿಲ್ಲ. ನನಗೆ ಎರಡು ಆಯ್ಕೆಗಳನ್ನು ನೀಡಿದ್ದಾರೆ. ಯಾವುದು ಬೇಕೆಂದು ಸೆಲೆಕ್ಟ್‌ ಮಾಡುವುದು ನನ್ನ ಕೈಯಲ್ಲಿದೆ', ಎಂದು ಪ್ರತಿಯೊಬ್ಬರೂ ಯೋಚಿಸಬೇಕಾದ ಅನಿವಾರ್ಯ ಇದೆ, ಎಂಬುವುದು ರಾಜೀವ್ ವಾದ. 

ಬಾಲಿವುಡ್‌ ನಟಿ ತನುಶ್ರೀ ದತ್ತ ಕಾಸ್ಟಿಂಗ್‌ ಕೌಚ್ ಆರೋಪ ಮಾಡಿದ ನಂತರ ಒಬ್ಬೊರಾಗಿ ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಹೇಳಿಕೊಳ್ಳುವ ಮೂಲಕ  2018ರಲ್ಲಿ #Metooಅಭಿಯಾನ ಶುರು ಮಾಡಿದ್ದರು. ಇದಕ್ಕೆ ಎಲ್ಲೆಡೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 

ಕ್ಯಾಸ್ಟಿಂಗ್ ಕೌಚ್ ಬಗ್ಗೆ ಬಾಯ್ಬಿಟ್ಟ ‘ಕಹಾನಿ’ ಗರ್ಲ್!

ಸ್ಯಾಂಡಲ್‌ವುಡ್‌ನಲ್ಲಿ ಶ್ರುತಿ ಹರಿಹರನ್ ಸಹ, ತಮ್ಮ ಸಹ ನಟ ಅರ್ಜುನ್ ಸರ್ಜಾ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆಂದು ಆರೋಪಿಸಿದ್ದರು. ಇದು ಗಾಂಧೀನಗರದಲ್ಲಿ ದೊಡ್ಡ ಸುದ್ದಿ ಮಾಡಿದ್ದಲ್ಲದೇ, ಕೋರ್ಟ್ ಮೆಟ್ಟಿಲು ಏರುವಂತೆ ಮಾಡಿತ್ತು. ನಂತರ ಶ್ರುತಿ ಕನ್ನಡ ಚಿತ್ರರಂಗದಿಂದಲೇ ದೂರವಾಗುವಂತೆ ಮಾಡಿದ್ದು ಹಳೇ ವಿಷಯ.