ಲೈಂಗಿಕ ಕ್ರಿಯೆ ವೇಳೆ ಭಗವದ್ಗೀತೆ ಪಠಣ : ಓಪನ್‌ಹೈಮರ್ ಚಿತ್ರದ ವಿವಾದಿತ ದೃಶ್ಯ ಕಟ್‌ಗೆ ಸೂಚನೆ
ಓಪನ್‌ಹೈಮರ್ ಚಿತ್ರದಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಭಗವದ್ಗೀತೆ ಪಠಣ ಮಾಡುವ ವಿವಾದಿತ ದೃಶ್ಯವನ್ನು ಉಳಿಸಿದ ಕೇಂದ್ರ ಸೆನ್ಸಾರ್ ಮಂಡಳಿ ವಿರುದ್ಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಓಪನ್‌ಹೈಮರ್ ಚಿತ್ರದಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಭಗವದ್ಗೀತೆ ಪಠಣ ಮಾಡುವ ವಿವಾದಿತ ದೃಶ್ಯವನ್ನು ಉಳಿಸಿದ ಕೇಂದ್ರ ಸೆನ್ಸಾರ್ ಮಂಡಳಿ ವಿರುದ್ಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥದ್ದೊಂದು ದೃಶ್ಯವನ್ನು ಮಂಡಳಿ ಉಳಿಸಿಕೊಂಡಿದ್ದಾದರೂ ಹೇಗೆ ಎಂದು ಅವರು ಮಂಡಳಿಯಿಂದ ಉತ್ತರ ಬಯಸಿದ್ದಾರೆ. ಜೊತೆಗೆ ವಿವಾದಿತ ದೃಶ್ಯ ತೆಗೆದುಹಾಕುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಚಿತ್ರದಲ್ಲಿನ ವಿವಾದಿತ ದೃಶ್ಯ ತೆಗೆಯದೇ ಹೋದಲ್ಲಿ ಅದರ ವಿರುದ್ಧ ಬಹಿಷ್ಕಾರಕ್ಕೆ ಕರೆ ಕೊಡಲಾಗುವುದು ಎಂದು ಜಾಲತಾಣದಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಚಿತ್ರ ಜುಲೈ 21 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಜೀವ ಜಗತ್ತಿನ ಅತ್ಯಂತ ಘಾತಕ ಬಾಂಬ್, 'ನ್ಯೂಕ್ಲಿಯರ್ ಬಾಂಬ್'ನ ಪಿತಾಮಹ ಅಮೆರಿಕದ ವಿಜ್ಞಾನಿ ರಾಬರ್ಟ್ ಒಪೆನ್ಹೈಮರ್ ಅವರ ಜೀವನಾಧಾರಿತ ಈ ಸಿನಿಮಾದಲ್ಲಿ ಎಮಿಲಿ ಬ್ಲಂಟ್, ರಾಬರ್ಟ್ ಡೌನಿ ಜೂನಿಯರ್, ಮ್ಯಾಟ್ ಡ್ಯಾಮನ್ ಮತ್ತು ಫ್ಲಾರೆನ್ಸ್ ಪಗ್ ನಟಿಸಿದ್ದಾರೆ. ಇಂಟರ್‌ಸ್ಟೆಲ್ಲರ್ ಇನ್‌ಸೆಪ್ಷನ್, ಡುಂಕಿರ್ಕ್‌ನಂಥ ಮಹಾನ್ ಚಿತ್ರಗಳನ್ನು ನೀಡಿದ್ದ ಅಮೆರಿಕದ ಪ್ರಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರವಿದು. ಇದು ಪುಲಿಟ್ಜರ್ ಪ್ರಶಸ್ತಿ ವಿಜೇತ ಕೈ ಬರ್ಡ್ ಮತ್ತು ದಿವಂಗತ ಮಾರ್ಟಿನ್ ಜೆ ಅವರು ಬರೆದ American Prometheus: The Triumph and Tragedy of J Robert Oppenheimer ಪುಸ್ತಕವನ್ನು ಆಧರಿಸಿದೆ.
'ಅದ್ಭುತವಾದ ಗ್ರಂಥ..' ಒಪೆನ್ಹೈಮರ್ ಚಿತ್ರದ ಸಿದ್ಧತೆಗಾಗಿ ಭಗವದ್ಗೀತೆ ಓದಿದ್ದ ಹಾಲಿವುಡ್ ನಟ ಸಿಲಿಯನ್ ಮರ್ಫಿ
ಈ ಚಿತ್ರದ ಸಿದ್ಧತೆಯ ವೇಳೆ ನಾನು ಭಗವದ್ಗೀತೆಯನ್ನು ಓದಿದ್ದೆ. ಇದೊಂದು ಅದ್ಭುತ ಹಾಗೂ ಸುಂದರವಾದ ಗ್ರಂಥ. ಇದು ಸ್ವತಃ ರಾಬರ್ಟ್ ಒಪೆನ್‌ಹೈಮರ್ ಅವರಿಗೂ ಸ್ಫೂರ್ತಿ ನೀಡಿತ್ತು. ಅಣುಬಾಂಬ್ ಕಂಡು ಹಿಡಿದ ಬಳಿಕ ಅವರಿಗೆ ಸಮಾಧಾನ ನೀಡಿತ್ತು. ಅವರ ಜೀವನದುದ್ದಕ್ಕೂ ಅವರಿಗೆ ಸಾಕಷ್ಟು ಸಾಂತ್ವನವನ್ನು ಈ ಗ್ರಂಥ ಒದಗಿಸಿತ್ತು' ಎಂದು ಮರ್ಫಿ ಹೇಳಿದ್ದು, ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಪವಿತ್ರ ಪುಸ್ತಕದಿಂದ ನೀವು ಕಲಿತಿದ್ದು ಏನು ಎನ್ನುವ ಪ್ರಶ್ನೆಗೆ, ದಯವಿಟ್ಟು ಇಂಥ ಪ್ರಶ್ನೆಗಳಿಂದ ನನ್ನನ್ನು ವಿಚಾರಣೆ ಮಾಡಬೇಡಿ ಎಂದು ತಮಾಷೆಯಲ್ಲಿಯೇ ಹೇಳಿದ ಅವರು, ನನಗೆ ಇಡೀ ಪುಸ್ತಕ ಬಹಳ ಅದ್ಭುತ ಎನಿಸಿತು ಎಂದು ತಿಳಿಸಿದರು.
ಹಾಲಿವುಡ್‌ನ 'ಆಪನ್ಹೈಮರ್' ಸಿನಿಮಾ ಟಿಕೆಟ್ ಬೆಲೆ 2450 ರೂ.: ಮುಂಗಡ ಬುಕ್ಕಿಂಗ್‌ಗೆ ಮುಗಿಬಿದ್ದ ಭಾರತದ ಫ್ಯಾನ್ಸ್
ಗ್ರೇಟಾ ಗೆರ್ವಿಗ್ ಅವರ ಬಹುನಿರೀಕ್ಷಿತ ಚಲನಚಿತ್ರದಲ್ಲಿ ಬಾರ್ಬಿ, ಮಾರ್ಗಟ್ ರಾಬಿ ಮತ್ತು ರಿಯಾನ್ ಗೊಸ್ಲಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.