Asianet Suvarna News Asianet Suvarna News

ಮಾಜಿ ಬಾಯ್‌ಫ್ರೆಂಡ್ ವಿರುದ್ಧ ಸಿಡಿದೆದ್ದ 'ಹೆಬ್ಬುಲಿ' ನಟಿ ಅಮಲಾ ಪೌಲ್; ದೂರು ದಾಖಲು

ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಮಾಜಿ ಬಾಯ್‌ಫ್ರೆಂಡ್ ವಿರುದ್ಧ ಸಿಡಿದೆದ್ದಿದ್ದಾರೆ. ಮಾಜಿ ಪ್ರಿಯತಮ ಭವನೀಂದನ್ ಸಿಂಗ್ ಧತ್ ವಿರುದ್ಧ ವಂಚನೆ ಮತ್ತು ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. 

Amala Paul Files cheating Case Against Ex-Friend sgk
Author
First Published Aug 31, 2022, 10:38 AM IST

ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಮಾಜಿ ಬಾಯ್‌ಫ್ರೆಂಡ್ ವಿರುದ್ಧ ಸಿಡಿದೆದ್ದಿದ್ದಾರೆ. ಮಾಜಿ ಪ್ರಿಯತಮ ಭವನೀಂದನ್ ಸಿಂಗ್ ಧತ್ ವಿರುದ್ಧ ವಂಚನೆ ಮತ್ತು ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಭಾವನೀಂದರ್ ಸಿಂಗ್ ಬ್ಯುಸಿನೆಸ್ ಡೀಲ್ ನಲ್ಲಿ ಮೊಸ ಮಾಡಿದ್ದಾರೆ ಹಾಗೂ ತನ್ನ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿರುವ ಅಮಲಾ ಪೌಲ್ ವಿಲ್ಲುಪುರಂ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದಾರೆ. 

ಈ ಹಿಂದಿ ಭವನೀಂದರ್ ಸಿಂಗ್ ಜೊತೆಗಿನ ಅಮಲಾ ಪೌಲ್ ಫೋಟೋಗಳು ವೈರಲ್ ಆಗಿದ್ದಾಗ ಇಬ್ಬರೂ ಮದುವೆಯಾಗಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಭವನೀಂದರ್ ಸಿಂಗ್ ಜೊತೆಗಿನ ಮದುವೆ ವದಂತಿಯನ್ನು ತಳ್ಳಿಹಾಕಿದ್ದರು. ಕೇವಲ ಫೋಟೋಶೂಟ್ ಮಾಡಿಸಿದ ಫೋಟೋಗಳು ಅಷ್ಟೆ ಎಂದು ಹೇಳಿದ್ದರು. ಆ ಫೋಟೋಗಳನ್ನು ಭವನೀಂದರ್ ಸಿಂಗ್ ಹರಿಬಿಟ್ಟಿದ್ದಾರೆ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡದಂತೆ ತಡೆಯಲು ಕೋರ್ಟ್ ಮೊರೆಹೋಗಿದ್ದರು.  

ಪೊಲೀಸರು ನೀಡಿದ ಮಾಹಿತಿ ಪ್ರಕಾರಾ, ನಟಿ ಅಮಲಾ ಪೌಲ್ ಮತ್ತು ಭಾವನೀಂದರ್ ಸಿಂಗ್ 2018 ರಲ್ಲಿ ಚಲನಚಿತ್ರ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದ್ದರು. ಬಳಿಕ ಇಬ್ಬರು ಬೇರೆ ಬೇರೆಯಾದರು. ಇತ್ತೀಚಿಗೆ ಅಮಲಾ ಸಿನಿಮಾ ನಿರ್ಮಾಣ ಮಾಡಲು ಸಿಕ್ಕಾಪಟ್ಟೆ ಬಂಡವಾಳ ಹೂಡಿದ್ದರು. ಆದರೀಗ ಭವನೀಂದರ್ ಸಿಂಗ್ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಂಪನಿಯೆ ನಿರ್ದೇಶಕಿ ಸ್ಥಾನದಿಂದ ತೆಗೆದು ಹಾಕಿದ್ದಾರೆ, ಭವನೀಂದರ್ ಸಿಂಗ್ ವಂಚನೆ ಮಾಡಿದ್ದಾರೆ ಎಂದು ಅಮಲಾ ಪೌಲ್ ಆರೋಪ ಮಾಡಿದ್ದಾರೆ. ಅಲ್ಲದೆ ಭಾವನೀಂದರ್ ಅವರ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಮಲಾ ಪೌಲ್ ದೂರು ನೀಡಿದ್ದಾರೆ. 

'ಹೆಬ್ಬುಲಿ' ನಟಿ ದೇಹದ ಬಗ್ಗೆ ಕೆಟ್ಟ ಕಾಮೆಂಟ್‌; ಗ್ರಹಚಾರ ಬಿಡಿಸಿದ ಅಮಲಾ!

ಅಮಲಾ ಪೌಲ್ ಅವರ ದೂರಿನ ಮೇರೆಗೆ ವಿಲ್ಲುಪುರಂ ಪೊಲೀಸರು ಭಾವನೀಂದರ್ ಸಿಂಗ್ ಧತ್ ವಿರುದ್ಧ ನಕಲಿ, ಬೆದರಿಕೆ ಮತ್ತು ಕಿರುಕುಳ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಸದ್ಯ ಪೊಲೀಸರು ಅಮಲಾ ಪೌಲ್ ಮಾಜಿ ಬಾಯ್‌ಫ್ರೆಂಡ್ ವಿಚಾರಣೆ ನಡೆಸುತ್ತಿದ್ದಾರೆ. 

Hot Photo Shoot: ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದೆ ಅಮಲಾ ಫೋಟೋಸ್!

ಅಮಲಾ ಪೌಲ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಸಿನಿಮಾ ಜೊತೆಗೆ ವೆಬ್  ಸೀರಿಸ್ ನಲ್ಲೂ ಬ್ಯುಸಿಯಾಗಿದ್ದಾರೆ. ಟೀಚರ್, ಕ್ರಿಸ್ಟೋಪರ್ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ತಮಿಳಿನ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಅಮಲಾ ಪೌಲ್ ಕನ್ನಡ ಸಿನಿಮಾದಲ್ಲೂ ಮಿಂಚಿದ್ದಾರೆ. ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದಲ್ಲಿ ಅಮಲಾ ಪೌಲ್ ನಟಿಸುವ ಮೀೂಲಕ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದರು. 

Follow Us:
Download App:
  • android
  • ios