ಬೆಂಗಳೂರು (ಮಾ. 24): ಬಿ-ಟೌನ್ ನ ಹಾಟ್ ಕಪಲ್ ಅಲಿಯಾ ಭಟ್ ಹಾಗೂ ರಣಬೀರ್ ಕಪೂರ್ 64 ನೇ  ಫಿಲ್ಮ್ ಫೇರ್ ಅವಾರ್ಡ್ 2019 ರಲ್ಲಿ ಉತ್ತಮ ನಟಿ, ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಆರ್‌ಸಿಬಿಗೆ ಸೋಲು, ಫ್ಯಾನ್ಸ್‌ಗೆ ಫೀಲ್, ’ಪಡ್ಡೆಹುಲಿ’ಯಿಂದ ಕಪ್ ನಮ್ದೆ ಹಾಡು!

ರಾಝಿ ಸಿನಿಮಾದ ಮೇಘನಾ ಗುಲ್ಜಾರ್ ಪಾತ್ರಕ್ಕಾಗಿ ಅಲಿಯಾ ಭಟ್ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಸಂಜು ಚಿತ್ರಕ್ಕಾಗಿ ರಣಬೀರ್ ಕಪೂರ್ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. 

ಉತ್ತಮ ನಟಿ (ವಿಮರ್ಷೆ) ವಿಭಾಗದಲ್ಲಿ ಬದಾಯಿ ಹೋ ಚಿತ್ರಕ್ಕಾಗಿ ನೀನಾ ಗುಪ್ತಾ ಪಡೆದಿದ್ದಾರೆ. ಉತ್ತಮ ನಟ (ವಿಮರ್ಶೆ) ವಿಭಾಗದಲ್ಲಿ ಪದ್ಮಾವತ್ ಚಿತ್ರಕ್ಕಾಗಿ ರಣವೀರ್ ಸಿಂಗ್ ಪಡೆದಿದ್ದಾರೆ.  ಬೆಸ್ಟ್ ಫಿಲ್ಮ್ ಅವಾರ್ಡನ್ನು ರಾಜಿ ಪಡೆದರೆ, ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಮೇಘನಾ ಗುಲ್ಜಾರ್ ಪಡೆದಿದ್ದಾರೆ.