ಕೇವಲ 1 ಲಕ್ಷ ರೂಗೆ ಬುಕ್ ಮಾಡಿ ನಿಸ್ಸಾನ್ X Trail ಎಸ್‌ಯುವಿ ಕಾರು!
ನಿಸ್ಸಾನ್ ಭಾರತದಲ್ಲಿ ಕೈಗೆಟುಕುವ ದರಲ್ಲಿ ಮ್ಯಾಗ್ನೈಟ್ ಕಾರಿನ ಮೂಲಕ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಮತ್ತೊಂದು ಉತ್ತಮ ಕಾರಿನ ಮೂಲಕ ಮತ್ತೆ ಸದ್ದು ಮಾಡುತ್ತಿದೆ. ಹೊಚ್ಚ ಹೊಸ ನಿಸ್ಸಾನ್ ಎಕ್ಸ್ ಟ್ರೈಲ್ ಕಾರು ಬಿಡುಗಡೆಯಾಗಿದೆ. ಕೇವಲ 1 ಲಕ್ಷ ರೂಪಾಯಿ ನೀಡಿ ಈ ಕಾರು ಬುಕ್ ಮಾಡಿಕೊಳ್ಳಲು ಸಾಧ್ಯವಿದೆ.
ಬೆಂಗಳೂರು(ಜು.25) ಭಾರತದಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಸಬ್ ಕಾಂಪಾಕ್ಟ್ ಎಸ್‌ಯುವಿ ನೀಡಿದ ಹೆಗ್ಗಳಿಕೆಗೆ ನಿಸ್ಸಾನ್ ಪಾತ್ರವಾಗಿದೆ. ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಮೂಲಕ ನಿಸ್ಸಾನ್ ಜನಸಾಮಾನ್ಯರ ಅಚ್ಚು ಮೆಚ್ಚು ಎನಿಸಕೊಂಡಿದೆ. ಇದೀಗ ನಿಸ್ಸಾನ್ ಹೊಚ್ಚ ಹೊಸ ಪ್ರೀಮಿಯಂ ಎಸ್‌ಯುವಿ ಕಾರು ಬಿಡುಗಡೆ ಮಾಡಿದೆ. ನಿಸ್ಸಾನ್ ಎಕ್ಸ್ ಟ್ರೈಲ್ ಕಾರು ಬಿಡುಗಡೆಯಾಗಿದೆ. ನೂತನ ಕಾರು 1 ಲಕ್ಷ ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು. ಆಗಸ್ಟ್ ತಿಂಗಳಿನಿಂದ ವಿತರಣೆ ಆರಂಭಗೊಳ್ಳಲಿದೆ.
ನಿಸ್ಸಾನ್ ಈಗಾಗಲೇ ಎಕ್ಸ್ ಟ್ರೈಲ್ ಕಾರಿನ ಮೂಲಕ ಜನಪ್ರಿಯವಾಗಿದೆ. ಆದರೆ ಭಾರತದ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಬಿಡುಗಡೆಯಾಗುತ್ತಿದೆ. ಇದು ವಿಶ್ವಾದ್ಯಂತ ಮಾರಾಟವಾಗಿರುವ ಟಾಪ್ 5 ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಕ್ಸ್ ಟ್ರೈಯಲ್ ಮೊತ್ತ ಮೊದಲ ಪ್ರೊಡಕ್ಷನ್ ವೇರಿಯೇಬಲ್ ಕಂಪ್ರೆಷನ್- ಟರ್ಬೋ ಎಂಜಿನ್ ಹೊಂದಿದೆ. ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ, ಟಾರ್ಕ್ ಆಸಿಸ್ಟ್, ಹೆಚ್ಚುವರಿ ಐಡಲ್ ಸ್ಟಾಪ್, ತ್ಪರಿತ ರಿಸ್ಟಾರ್ಟ್ ಸೇರಿದಂತೆ ಹಲವು ಹೊಸತನಗಳು ಇದರಲ್ಲಿದೆ. ಹೀಗಾಗಿ ಮೈಲೇಜ್ ಕೂಡ ಉತ್ತಮವಾಗಿದೆ.
ಕೈಗೆಟುಕವ ದರದಲ್ಲಿ ಪ್ರಿಮಿಯಂ SUV ಕಾರು, ನಿಸಾನ್ ಮ್ಯಾಗ್ನೈಟ್ ಗೆಝಾ ಸಿವಿಟಿ ಲಾಂಚ್!
1.5 ಲೀಟರ್ ಕಂಪ್ರೆಷನ್ ಟರ್ಬೋ ಎಂಜಿನ್ ಮೈಲ್ಡ್ ಹೈಬ್ರಿಡ್ ಹಾಗೂ 2WD ಎಂಜಿನ್ ಹೊಂದಿದೆ. 5 ಜೆನ್ ಎಕ್ಸ್ ಟ್ರಾನಿಕ್ CVT ಪವರ್‌ಟ್ರೇನ್ ಮೂಲಕ ವಾಹನಕ್ಕೆ ಹೆಚ್ಚಿನ ಶಕ್ತಿ ಸಾಮರ್ಥ್ಯ ತುಂಬಲಿದೆ. 156 ಪಿಎಸ್ ಪವರ್ ಹಾಗೂ 300 ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ ಹೊಂದಿದೆ. 7 ಸೀಟರ್ ಸಾಮರ್ಥ್ಯದ ಈ ಕಾರು ಪ್ರೀಮಿಯಂ ಕ್ಲಾಸ್ ಹೊಂದಿದೆ. ಅಷ್ಟೇ ಆಕರ್ಷಕ ವಿನ್ಯಾಸವನ್ನು ಹೊಂದಿದೆ.
ಇ-ಶಿಫ್ಟರ್, ಡ್ರೈವ್ ಮೋಡ್ ಸೆಲೆಕ್ಟರ್ ಹಾಗೂ ಟ್ವಿನ್ ಕಪ್ ಹೋಲ್ಡರ್‌ಗಳನ್ನು ಹೊಂದಿದೆ. ಜೊತೆಗೆ ಸ್ಮಾರ್ಟ್‌ಫೋನ್‌ಗಳಿಗಾಗಿ 15w ವೈರ್‌ಲೆಸ್ ಚಾರ್ಜ್ ಪ್ಯಾಡ್ ಈ ಕಾರಿನಲ್ಲಿದೆ. ಕಾರಿನ ಮೂರು ಸಾಲಿನ ಆಸನದಲ್ಲಿ ಎಲ್ಲೆ ಕುಳಿತರೂ ಆರಾಮದಾಯಕ ಪ್ರಯಾಣ ನಿಮ್ಮದಾಗಲಿದೆ. ಕಾರಿನಲ್ಲಿ ಹೆಚ್ಚಿನ ಸ್ಟೋರೇಜ್ ನೀಡಲಾಗಿದೆ. ಈ ಪೈಕಿ ಅಮೂಲ್ಯ ವಸ್ತುಗಳನ್ನು ಇಡಲು ಸ್ಟೋರೇಜ್ ನೀಡಲಾಗಿದೆ. ಈ ಮೂಲಕ ವಸ್ತುಗಳ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ. ಪನರೋಮಿಕ್ ಸನ್‌ರೂಫ್, ಟ ಮಲ್ಟಿ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ಇತರ ಕೆಲ ಫೀಚರ್ಸ್ ಇದರಲ್ಲಿದೆ.
ಹೊಸ ವರ್ಷದಲ್ಲಿ ಖುಲಾಯಿಸಿದ ಅದೃಷ್ಠ, ಬಿರಿಯಾನಿ ತಿಂದು ನಿಸಾನ್ ಮ್ಯಾಗ್ನೈಟ್ ಕಾರು ಗೆದ್ದ ಯುವಕ!
ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 7 ಏರ್‌ಬ್ಯಾಗ್ ನೀಡಲಾಗಿದೆ. ಇದರ ಜೊತೆಗೆ ಟ್ರಾಕ್ಷನ್ ಕಂಟ್ರೋಲ್, ಅರೌಂಡ್ ವ್ಯೂ ವಾನಿಟರ್, ಹಿಲ್ ಸ್ಟಾರ್ಟ್ ಅಸಿಸ್ಟ್, ಎಬಿಡಿ, ಎಬಿಎಸ್ ಸೇರಿದಂತೆ ಇತರ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ