ಆಮದು ವಾಹನಗಳಿಗೆ ಸುಂಕ ಕಡಿತ; ಟೆಸ್ಲಾ ಬೇಡಿಕೆಗೆ ಧ್ವನಿ ಜೋಡಿಸಿದ ಆಡಿ
ಟೆಸ್ಲಾ ಬೇಡಿಕೆಯನ್ನೇ ಪುನರುಚ್ಚರಿಸಿರುವ ಆಡಿ (Audi), ಭಾರತಕ್ಕೆ ಎಲೆಕ್ಟ್ರಿಕಲ್ ಐಷಾರಾಮಿ ವಾಹನಗಳನ್ನು ಆಮದು ಮಾಡಿಕೊಳ್ಳಲು 3-5 ವರ್ಷಗಳ ಸುಂಕ ವಿರಾಮ ಬಯಸಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಆಮದು ಸುಂಕ (import duty) ಕಡಿತಗೊಳಿಸಬೇಕು ಎಂಬ ಅಮೆರಿಕದ ಆಟೋ ಮೇಜರ್ (Auto major) ಟೆಸ್ಲಾದ (Tesla) ಬೇಡಿಕೆಗೆ ಜರ್ಮನಿಯ ಐಷಾರಾಮಿ ತಯಾರಕ ಆಡಿ ಬೆಂಬಲ ನೀಡಿದೆ. ಟೆಸ್ಲಾ ಬೇಡಿಕೆಯನ್ನೇ ಪುನರುಚ್ಚರಿಸಿರುವ ಆಡಿ(Audi), ಭಾರತಕ್ಕೆ ಎಲೆಕ್ಟ್ರಿಕಲ್ ಐಷಾರಾಮಿ ವಾಹನಗಳನ್ನು ಆಮದು ಮಾಡಿಕೊಳ್ಳಲು 3-5 ವರ್ಷಗಳ ಸುಂಕ ವಿರಾಮ ಬಯಸಿದೆ. ಸಮಂಜಸವಾದ ತೆರಿಗೆ ವಿಧಿಸುವುದರಿಂದ ಭಾರತೀಯ ಐಷಾರಾಮಿ ಮಾರುಕಟ್ಟೆಯು ಪ್ರಸ್ತುತ ಶ್ರೇಣಿಗಳಿಂದ ಪ್ರಾಯೋಗಿಕವಾಗಿ 3 ಪಟ್ಟು ಅಭಿವೃದ್ಧಿ ಹೊಂದಬಹುದು ಎಂದಿದೆ.
ಆಮದು ಮಾಡಿದ ಕ್ರೀಡಾ ಮತ್ತು ಪೆಟ್ರೋಲ್,ಡೀಸೆಲ್ ವಾಹನಗಳ ಅಂತಿಮ ಶ್ರೇಣಿಗೆ ವಿಧಿಸಲಾಗುವ ಶೇ. 200ರಷ್ಟು ಸಂಚಿತ ತೆರಿಗೆಗಳ ಬದಲಿಗೆ, ಎಲೆಕ್ಟ್ರಿಕ್ ವಾಹನಗಳ ಆಮದು ಸುಂಕವನ್ನು ಶೇ.5 ರಷ್ಟು ನಿಗದಿಪಡಿಸಬೇಕು ಎಂದು ಆಡಿ ಒತ್ತಾಯಿಸಿದೆ. ಕಳೆದ ವರ್ಷ ಆಡಿ ಶೇ.100ರಷ್ಟು ವ್ಯಾಪಾರದ ಪ್ರಗತಿ ದಾಖಲಿಸಿದೆ. ಒಂದೇ ವರ್ಷದಲ್ಲಿ ಸುಮಾರು 3,300ಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ. 2022ರ ಮೊದಲಾರ್ಧಲ್ಲಿ ಶೇ.49ರಷ್ಟು ಅಂದರೆ, 1,765ರಷ್ಟು ವಾಹನಗಳ ಮಾರಾಟ ದಾಖಲಿಸಿದೆ. ಈಗ ದೇಶದ ನಿಯಮಾವಳಿಗಳು ಸಡಿಲಗೊಂಡರೆ ಆಡಿ, ಎಲೆಕ್ಟ್ರಿಕ್ (Electric) ಹಾಗೂ ಪೆಟ್ರೋಲ್ (petrol) ಎರಡೂ ಮಾದರಿಗಳಲ್ಲಿ ಹೊಸ ವಾಹನಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.
ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ದಿಲ್ಲೋನ್, “ನಮಗೆ 3-5 ವರ್ಷಗಳ ಅವಧಿಗೆ ಆಮದು ಸುಂಕದಲ್ಲಿ ಕಡಿತಗೊಳಿಸಿದರೆ, ಭಾರತದಲ್ಲಿ ಹಲವು ಜಾಗತಿಕ ಮಾದರಿಗಳನ್ನು ಪರೀಕ್ಷಿಸಲು ನೆರವಾಗುತ್ತದೆ ಮತ್ತು ಹೆಚ್ಚು ಹೂಡಿಕೆಗಳನ್ನು ಆಕರ್ಷಿಸಲು ಕೂಡ ಸಹಕಾರಿಯಾಗುತ್ತದೆ. ಇದರಿಂದ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ದೇಶಕ್ಕೆ ಆಮದು (import) ಮಾಡಿಕೊಳ್ಳಬಹುದು” ಎಂದಿದ್ದಾರೆ.
ಇದನ್ನೂ ಓದಿ: ಭಾರತದಲ್ಲೇ ತಯಾರಾಗಲಿದೆ ಓಲಾ ಎಲೆಕ್ಟ್ರಿಕ್ ಕಾರು, ಟೀಸರ್ ಬಿಡುಗಡೆ ಮಾಡಿದ ಸಿಇಓ!
ಟೆಸ್ಲಾ ಕೂಡ ಈ ಹಿಂದೆ ಎಲೆಕ್ಟ್ರಿಕ್ ಕಾರುಗಳ ಮೇಲೆ ಇಂತಹದೇ ಸುಂಕ ವಿನಾಯಿತಿಯ ಬೇಡಿಕೆ ಇಟ್ಟಿತ್ತು. ಆದರೆ, ಸರ್ಕಾರ ಈ ಬೇಡಿಕೆಯನ್ನು ತಿರಸ್ಕರಿಸಿದ್ದು, ದೇಶೀಯ ಉತ್ಪನ್ನಗಳನ್ನು ಬಳಸಿ ಕಾರುಗಳನ್ನು ತಯಾರಿಸಲು ಒಪ್ಪಿದಲ್ಲಿ ಮಾತ್ರ ಸುಂಕ ವಿನಾಯಿತಿಯ ಪ್ರಸ್ತಾವನೆಯನ್ನು ಪರಿಶೀಲಿಸುವುದಾಗಿ ಸ್ಪಷ್ಟಪಡಿಸಿತ್ತು. ಈ ಹಿನ್ನೆಲೆಯಲ್ಲಿ ಟೆಸ್ಲಾ (Tesla) ಭಾರತಕ್ಕೆ ಆಗಮಿಸುವ ನಡೆಯನ್ನು ತಡೆಹಿಡಿದು ಸದ್ಯ ಈ ನಿಟ್ಟಿನಲ್ಲಿ ಕಾದು ನೋಡುವ ನಿರ್ಧಾರ ತೆಗೆದುಕೊಂಡಿದೆ. ಸದ್ಯದ ಮಾರುಕಟ್ಟೆ ದರದಲ್ಲಿ ಟೆಸ್ಲಾ ಭಾರತಕ್ಕೆ ಆಗಮಿಸಿದಲ್ಲಿ, ಅದು ಅತ್ಯಂತ ದುಬಾರಿ ವಾಹನಗಳಲ್ಲಿ ಒಂದಾಗಲಿದ್ದು, ಜನರು ಅದರಿಂದ ದೂರ ಸರಿಯುವ ಸಾಧ್ಯತೆಗಳು ಹೆಚ್ಚಿವೆ.
ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ಭಾರತೀಯ ಸರ್ಕಾರವನ್ನು ಕಂಪನಿ ಗೌರವಿಸುತ್ತದೆ ಎಂದಿರುವ ಸಿಂಗ್, ನಾವು ಶಾಶ್ವತ ವಿನಾಯಿತಿಯನ್ನು ಕೋರುತ್ತಿಲ್ಲ. ಕೇವಲ ಕೆಲವು ವರ್ಷಗಳ ವಿನಾಯಿತಿಯಿಂದ ಕಂಪನಿಗೆ ಭಾರತದಲ್ಲಿ ಸೂಕ್ತ ಮಾರುಕಟ್ಟೆ ನೆಲೆ ರೂಪಿಸಲು ಹಾಗೂ ಹೆಚ್ಚು ಕಾರುಗಳನ್ನು ಶೀಘ್ರದಲ್ಲೇ ಜೋಡಿಸಲು ನೆರವಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: 10 ತಿಂಗಳಲ್ಲಿ 1.5 ಲಕ್ಷ ಮಹೀಂದ್ರಾ XUV ಬುಕಿಂಗ್!
ಭಾರತದಲ್ಲಿ ಚಾಲ್ತಿಯಲ್ಲಿರುವ ಒಟ್ಟು ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಲಕ್ಸುರಿ ಕಾರುಗಳ ಪ್ರಮಾಣ ಶೇ.1ರಷ್ಟು ಮಾತ್ರ. ಇದು ಇತರ ದೇಶಗಳಿಗೆ ಹೋಲಿಸಿದರೆ ಸಾಕಷ್ಟು ಕಡಿಮೆಯಿದೆ. ಚೀನಾದಲ್ಲಿ ಲಕ್ಸುರಿ ವಾಹನಗಳ ಮಾರಾಟ ಪ್ರಮಾಣ ಶೇ.13ರಷ್ಟಿದ್ದರೆ, ಯೂರೋಪಿಯನ್ ದೇಶಗಳಲ್ಲಿ ಇದು ಶೇ.50ರಷ್ಟಿದೆ. 2021ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರುಗಳ ಮಾರಾಟ 25,000ದಷ್ಟು ಮಾತ್ರ. ಕೋವಿಡ್ ಅಲೆಯ ನಂತರ ಮಾರುಕಟ್ಟೆ ಚೇತರಿಸಿಕೊಂಡಿದ್ದರೂ ಐಷಾರಾಮಿ ಕಾರುಗಳಿಗೆ ಬೇಡಿಕೆ ಹೆಚ್ಚಿಲ್ಲ. 2018ರಲ್ಲಿ ಈ ವಾಹನಗಳು 40 ಸಾವಿರದಷ್ಟು ಮಾರಾಟ ದಾಖಲಿಸಿದ್ದವು. ಆದ್ದರಿಂದ ಈ ಕಂಪನಿಗಳು ಹೆಚ್ಚು ವಾಹನಗಳನ್ನು ಭಾರತಕ್ಕೆ ತರಲು ಪ್ರಯತ್ನ ನಡೆಸಿವೆ.