ಎಲ್ಲರಿಗೂ ಹಾಕೋಕೆ ರಜೆ ಏನೋ ಇದೆ, ಆದ್ರೆ ಟೂರ್, ಟ್ರಾವೆಲ್ ಅಂದ್ರೆ ಯಾರೂ ಕೊಡೋಲ್ಲ!
ಕೆಲಸದ ಒತ್ತಡ ಜನರನ್ನು ಹೈರಾಣ ಮಾಡಿದೆ. ಹಾಗಂತ ರಜೆ ತೆಗೆದ್ಕೊಂಡು ವಿಶ್ರಾಂತಿ ಪಡೆಯುವ ಸ್ಥಿತಿ ಅವರಿಗಿಲ್ಲ. ದೇಶ – ವಿದೇಶದ ಬಹುತೇಕ ಉದ್ಯೋಗಿಗಳ ಈ ರಜಾ ಬಡತನದಿಂದ ಬಳಲುತ್ತಿದ್ದಾರೆ.
ದಿನ ಬೆಳಗಾದ್ರೆ ಕೆಲಸಕ್ಕೆ ಓಡುವ ಜನರಿಗೆ ವಿಶ್ರಾಂತಿ ಅತ್ಯಗತ್ಯ. ಕಚೇರಿ (Employees Need Rest amidst Busy Scedule) – ಮನೆ ಇಷ್ಟರಲ್ಲೇ ವರ್ಷಾನುಗಟ್ಟಲೆ ಜೀವನ ನಡೆಸುವ ಜನರು ರೋಸಿ ಹೋಗಿರ್ತಾರೆ. ಒಂದಷ್ಟು ದಿನ ಆರಾಮವಾಗಿ ನಮ್ಮವರ ಜೊತೆ ವಿಶ್ರಾಂತಿ ಪಡೆಯಲು ಬಯಸ್ತಾರೆ. ಕುಟುಂಬದ ಜೊತೆ ಅಮೂಲ್ಯ ದಿನಗಳನ್ನು ಕಳೆಯೋದು ಬಹುತೇಕರಿಗೆ ಕನಸಿನ ಮಾತಾಗಿದೆ.
ಕೆಲಸ (Work) ಕ್ಕೆ ರಜೆ (Leave) ಹಾಕಿ, ಊರಿನಿಂದ, ದೇಶದಿಂದ ಹೊರಗೆ ಹೋಗಲು ಬಯಸುವ ಮಂದಿ ಅನೇಕರಿದ್ದಾರೆ. ಪ್ರವಾಸದ ಇಚ್ಛೆ ಇರುತ್ತೆ. ಆದ್ರೆ ಪ್ರವಾಸಕ್ಕೆ ಹೋಗಲು ಅವಕಾಶ ಸಿಗೋದಿಲ್ಲ. ಕುಟುಂಬಸ್ಥರ ಜೊತೆ ವಿದೇಶಿ ಪ್ರವಾಸ ಖರೀದಿ ಮಾಡಲು ಸಾಧ್ಯವಾಗೋದಿಲ್ಲ. ಇದಕ್ಕೆ ಕಾರಣ ಹೆಚ್ಚುತ್ತಿರುವ ಜೀವನ ವೆಚ್ಚ, ಕೆಲಸಕ್ಕೆ ಸಂಬಂಧಿಸಿದ ಒತ್ತಡ ಮತ್ತು ಹಣದುಬ್ಬರ. ಬಹುತೇಕರಿಗೆ ಒಂದು ವಾರ ಹೋಗ್ಲಿ ಒಂದೆರಡು ದಿನ ರಜೆ ಮೇಲೆ ಪ್ರವಾಸಕ್ಕೆ ಸಿಗೋದು ಕಷ್ಟ. ಇದನ್ನು ರಜೆಯ ಬಡತನ ಎಂದು ಕರೆಯಲಾಗುತ್ತದೆ.
ಭವಿಷ್ಯದ ಕನಸು ಕಂಡು ಊರು ಬಿಟ್ಟು ಇನ್ಫೋಸಿಸ್ ಸರ್ವಿಸ್ ಬಾಯ್ ಆಗಿ ದುಡಿದಾತ ಇಂದು ಎರಡು ಕಂಪೆನಿ ಒಡೆಯ!
ಭಾರತ ಮಾತ್ರವಲ್ಲ ಬಹುತೇಕ ಎಲ್ಲ ದೇಶದ ಜನರು ಈ ರಜೆಯ ಬಡತನವನ್ನು ಎದುರಿಸುತ್ತಿದ್ದಾರೆ. ಅನಾರೋಗ್ಯ ಸಮಸ್ಯೆ, ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಉದ್ಯೋಗಿಗಳಿಗೆ ಹೆಚ್ಚುವರಿ ರಜೆ ಲಭ್ಯವಿಲ್ಲ. ವಾರದಲ್ಲಿ ಒಂದು ಅಥವಾ ಎರಡು ರಜೆಯನ್ನು ಬಿಟ್ರೆ ನಿರಂತರ ವಾರಗಟ್ಟಲೆ ರಜೆ ಸಿಗೋದಿಲ್ಲ. ಸಿಕ್ಕಿದ್ರೂ ಅವರಿಗೆ ಪ್ರವಾಸಕ್ಕೆ ವೆಚ್ಚ ಮಾಡಲು ಸಾಧ್ಯವಾಗೋದಿಲ್ಲ.
ಯುರೋಪಿಯನ್ ಕಾರ್ಮಿಕರ ಮೇಲೆ ಅಧ್ಯಯನ ಕೂಡ ನಡೆದಿದೆ. ಯುರೋಪಿಯನ್ ಟ್ರೇಡ್ ಯೂನಿಯನ್ ಕಾನ್ಫೆಡರೇಶನ್ (ETUC) ನ ಒಂದು ಅಧ್ಯಯನದ ಪ್ರಕಾರ, ಸುಮಾರು 40 ಮಿಲಿಯನ್ ಜನರು ಅಥವಾ ಯುರೋಪಿಯನ್ ಒಕ್ಕೂಟದ ದುಡಿಯುವ ಜನಸಂಖ್ಯೆಯ ಶೇಕಡಾ 15ರಷ್ಟು ಜನರು ರಜೆಯ ಬಡತನವನ್ನು ಎದುರಿಸುತ್ತಾರೆ. ಏಕೆಂದರೆ ಅವರು ಒಂದು ವಾರದ ರಜೆಯನ್ನು ಸಹ ಪಡೆಯಲು ಸಾಧ್ಯವಾಗ್ತಿಲ್ಲ.
ಸಮೀಕ್ಷೆಯು 2021 ಮತ್ತು 2022 ರಲ್ಲಿ 18 ರಿಂದ 64 ವರ್ಷ ವಯಸ್ಸಿನ ಜನರ ಆದಾಯ ಮತ್ತು ಜೀವನ ಗುಣಮಟ್ಟದ ಡೇಟಾವನ್ನು ಪರಿಗಣಿಸಿದೆ. ಒಂದು ವಾರದ ರಜೆಯನ್ನು ಪಡೆಯಲು ಅವರು ಎಷ್ಟು ಅರ್ಹರು ಎಂಬುದನ್ನು ತಿಳಿಯಲು ಅವರ ಆರ್ಥಿಕ ಒತ್ತಡದ ಮಾಹಿತಿ ಪಡೆದರು. ಕಳೆದ ಎರಡು ವರ್ಷಗಳ ಹಿಂದೆ ಅಪ್ಪಳಿಸಿದ್ದ ಕೊರೊನಾ ಈಗ್ಲೂ ಇವರ ಸ್ಥಿತಿಯಲ್ಲಿ ಸುಧಾರಣೆ ತಂದಿಲ್ಲ. ಇಲ್ಲಿನ ಜನರು ರಜೆ ಪಡೆಯಲು ಈಗ್ಲೂ ಹೆಣಗಾಡುತ್ತಿದ್ದಾರೆ.
ಯರೋಪಿಯನ್ ಕಾರ್ಮಿಕರಿಗೆ ಹೋಲಿಕೆ ಮಾಡಿದ್ರೆ ಇನ್ನೂ ಕೆಟ್ಟ ಪರಿಸ್ಥಿತಿಯಲ್ಲಿರುವ ಅನೇಕ ದೇಶಗಳಿವೆ. ಇಟಲಿಯು ರಜಾದಿನಗಳನ್ನು ಪಡೆಯಲು ಸಾಧ್ಯವಾಗದ ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿದೆ. ಇಲ್ಲಿ 6 ದಶಲಕ್ಷಕ್ಕೂ ಹೆಚ್ಚು ಜನರು ರಜೆಯನ್ನು ತೆಗೆದುಕೊಳ್ಳಲು ಹೆಣಗಾಡುತ್ತಿದ್ದಾರೆ. ಇನ್ನು ರೊಮೇನಿಯಾದಲ್ಲಿ ಒಂದು ವಾರದ ರಜೆಗೆ ಪರದಾಡುತ್ತಿರುವ ಕಾರ್ಮಿಕರ ಸಂಖ್ಯೆ ಶೇಕಡಾ 36ರಷ್ಟಿದೆ. ಸೈಪ್ರಸ್ ತನ್ನ ಜನಸಂಖ್ಯೆಯಲ್ಲಿ ಶೇಕಡಾ 25 ಇಂಥ ಜನರನ್ನು ಹೊಂದಿದೆ.
2021 ಮತ್ತು 2022 ರ ನಡುವೆ, ಐರ್ಲೆಂಡ್ ಮತ್ತು ಫ್ರಾನ್ಸ್‌ನಲ್ಲಿ ರಜಾದಿನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ಜನರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಯುರೋಪಿಯನ್ ಟ್ರೇಡ್ ಯೂನಿಯನ್ ಕಾನ್ಫೆಡರೇಶನ್ ಪತ್ತೆ ಮಾಡಿದೆ.
ರಜೆಗಳು ಐಷಾರಾಮಿ ಅಲ್ಲ. ಕುಟುಂಬದೊಂದಿಗೆ ಸಮಯ ಕಳೆಯುವುದು ಮಕ್ಕಳಿಗೆ ಅಮೂಲ್ಯವಾದ ಅನುಭವಗಳನ್ನು ಒದಗಿಸಲು ಮತ್ತು ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ರಕ್ಷಿಸಲು ಮುಖ್ಯವಾಗಿದೆ ಎಂದು ಯುರೋಪಿಯನ್ ಟ್ರೇಡ್ ಯೂನಿಯನ್ ಕಾನ್ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಎಸ್ತರ್ ಲಿಂಚ್ ಹೇಳಿದ್ದಾರೆ.
National Underwear Day ಈ ದೇಶದಲ್ಲಿ ಹೆಣ್ಮಕ್ಕಳು ಬ್ರಾ - ಪ್ಯಾಂಟಿ ಧರಿಸಲೂ ರೂಲ್ಸ್ ಫಾಲೋ ಮಾಡಬೇಕು!
ಆರ್ಥಿಕ ಬಿಕ್ಕಟ್ಟಿನ ನಂತರ 2010 ರಲ್ಲಿ ರಜೆ ತೆಗೆದುಕೊಳ್ಳಲು ಸಾಧ್ಯವಾಗದ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ಸಾಂಕ್ರಾಮಿಕ ರೋಗದ ಹಿಂದಿನ ವರ್ಷಗಳಲ್ಲಿ ಈ ಅಂಕಿಅಂಶಗಳು ಚೇತರಿಸಿಕೊಳ್ಳಲು ಪ್ರಾರಂಭಿಸಿದ್ದವು. ಆದ್ರೆ ಕೊರೊನಾ ಮತ್ತೆ ಸಮಸ್ಯೆ ತಂದೊಡ್ಡಿತು.