Asianet Suvarna News Asianet Suvarna News

ಕರ್ನಾಟಕ ಬಜೆಟ್ 2020ನಲ್ಲಿ ನಿಮ್ಮ ಜಿಲ್ಲೆಗೆ ಸಿಕ್ಕಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಸಿಎಂ ಯಡಿಯೂರಪ್ಪ ಅವರು ಗುರುವಾರ ಬಜೆಟ್ ಮಂಡನೆ ಮಾಡಿ ಕೈತೊಳೆದುಕೊಂಡಿದ್ದಾರೆ. ಈ ಬಾರಿಯ ರಾಜ್ಯ ಬಜೆಟ್ ಗಾತ್ರ 2,37,893 ಕೋಟಿ ರೂ ಆಗಿದೆ. ಆದ್ರೆ, ಬಿಎಸ್‌ವೈ ತಮ್ಮ ತವರು ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದ್ದು, ಇನ್ನುಳಿದ ಜಿಲ್ಲೆ ಸುಣ್ಣ ಸುರಿದಿದ್ದಾರೆ. ಹಾಗಾದ್ರೆ ನಿಮ್ಮ-ನಿಮ್ಮ ಜಿಲ್ಲೆಗೆ ಯಡಿಯೂರಪ್ಪ ಬಜೆಟ್‌ನಲ್ಲಿ ಏನೆಲ್ಲ ಸಿಕ್ಕಿದೆ ಎನ್ನುವ ಡಿಟೇಲ್ಸ್ ಇಲ್ಲಿದೆ,

What BSY allocates to all districts of Karnataka in budget 2020
Author
Bengaluru, First Published Mar 5, 2020, 5:48 PM IST

ಬೆಂಗಳೂರು, (ಮಾ.05): ಅಳೆದು ತೂಗಿ ಆಯವ್ಯಯ ಮಂಡನೆ ಮಾಡಿರುವ ಸಿಎಂ ಬಿಎಸ್​ವೈ, ಇದ್ದಿದ್ದರಲ್ಲೇ ತವರು ಜಿಲ್ಲೆ ಶಿವಮೊಗ್ಗಕ್ಕೆ ಬಂಪರ್ ಕೊಡುಗೆ ಕೊಟ್ಟಿದ್ದಾರೆ. ಜಿಲ್ಲೆಗೆ 526.25 ಕೋಟಿ ಅನುದಾನ ನೀಡಿರುವ ಯಡಿಯೂರಪ್ಪ, ಹಲವು ಯೋಜನೆಗಳಿಗೆ ಹಣಕಾಸು ನೀಡಿದ್ದಾರೆ.

"

ಸಾಲದ ಹೊರೆಯ ನಡುವೆಯೂ ಬಜೆಟ್ ಮಂಡಿಸಿದ ಸಿಎಂ, ಹೊಸ ಯೋಜನೆಗಳ ಘೋಷಣೆ ಮಾಡದೇ ಹಳೆ ಭಾಗ್ಯ ಯೋಜನೆಗಳ ಕಡಿತ ಮಾಡದೆ ಒಟ್ಟು 2 ಲಕ್ಷ 37 ಸಾವಿರ 893 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಆದ್ರೆ, ಈ ಬಜೆಟ್ ಆರಕ್ಕೆ ಏರಲಿಲ್ಲ. ಮೂರಕ್ಕೆ ಇಳಿದಿಲ್ಲ ಎನ್ನುವಂತಿದೆ.

ಬಿಎಸ್‌ವೈ ಬಜೆಟ್‌ನಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಪ್ರಸ್ತಾಪವೇ ಇಲ್ಲ!

ಅದ್ರೆ ಮುಖ್ಯವಾಗಿ ಸುಮಾರು 14 ಜಿಲ್ಲೆಗಳಿಗೆ ಸೂಕ್ತ ಯೋಜನೆ, ಅನುದಾನ ಘೋಷಣೆ ಮಾಡದೇ ಇರೋದು ಪ್ರತಿಪಕ್ಷಗಳ ಟೀಕೆಗೆ ಅಸ್ತ್ರವಾದಂತಿದೆ. 

ಈ ಬಾರಿಯ ಬಜೆಟ್ ನಲ್ಲಿ ಬೆಂಗಳೂರು ಅಭಿವೃದ್ಧಿಗೆ ಒತ್ತು ಕೊಡುವುದನ್ನ ಯಡಿಯೂರಪ್ಪ ಮರೆತಿಲ್ಲ. ಹಲವು ವಲಯಗಳಿಗೆ ಅನುದಾನ ನೀಡಿದ್ದಾರೆ. ತಮ್ಮ ತವರು ಜಿಲ್ಲೆ ಶಿವಮೊಗ್ಗಕ್ಕೆ ಭರಪೂರ ಕೊಡುಗೆ ನೀಡಿದ್ದಾರೆ. ಆದ್ರೆ, ಇತರೆ ಜಿಲ್ಲೆಗಳಿಗೆ ಒಂದು ನಯಾಪೈಸೆಯೂ ಕೊಟ್ಟಿಲ್ಲದಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಆರಕ್ಕೇರದ ಮೂರಕ್ಕಿಳಿಯದ ಬಜೆಟ್, ಭಾರತ ವನಿತೆಯರಿಗೆ ಫೈನಲ್ ಟಿಕೆಟ್; ಮಾ.05ರ ಟಾಪ್ 10 ಸುದ್ದಿ!

ಆದ್ರೆ, ಇನ್ನುಳಿದ 14 ಜಿಲ್ಲೆಗಳ ಪ್ರಸ್ತಾಪವೇ ಆಗಿಲ್ಲದಿರುವುದು ಎಲ್ಲರ ಕಣ್ಣು ಕೆಂಪಾಗಿಸಿದೆ. ಹಾಗಾದ್ರೆ ಯಾವ ಜಿಲ್ಲೆಗೆ ಏನೆಲ್ಲ ಸಿಕ್ಕಿದೆ ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

* ಬೆಂಗಳೂರಿಗೆ ಬಂಪರ್​!
# ಶುಭ್ರ ಬೆಂಗಳೂರು ಯೋಜನೆಯಡಿ 999 ಕೋಟಿ 
# ಬೆಂಗಳೂರು ಕೆರೆಗಳ ಅಭಿವೃದ್ಧಿಗೆ 100 ಕೋಟಿ 
# ನವನಗರೋತ್ಥಾನ ಯೋಜನೆಗೆ 317 ಕೋಟಿ 
# ಮನೆಗಳಿಗೆ ನೀರು ನುಗ್ಗುವುದು ತಪ್ಪಿಸಲು 200 ಕೋಟಿ
# ಬೆಂಗಳೂರಿನ ಸುತ್ತ ಹಳ್ಳಿಗಳ ರಸ್ತೆ ದುರಸ್ಥಿಗೆ 500 ಕೋಟಿ 
# ವಾರ್ಷಿಕ 70 ದಶಲಕ್ಷ ಯೂನಿಟ್ ವಿದ್ಯುತ್​ ಉತ್ಪಾದನೆ
# ಕಚೇರಿಗಳಲ್ಲಿ ಮಹಿಳಾ ಸ್ನೇಹಿ ವಾತಾವರಣ ನಿರ್ಮಾಣ
# ಬೆಂಗಳೂರಿನ ವಿವಿಧ ಭಾಗಗಳಲ್ಲಿ 4 ವಿದ್ಯುತ್​ ಚಿತಾಗಾರ

* ಶಿವಮೊಗ್ಗಕ್ಕೆ ಸಿಕ್ಕಿದ್ದೇನು?
 ಶಿವಮೊಗ್ಗದಲ್ಲಿ ಟೂರಿಸಂ ಸರ್ಕ್ಯೂಟ್​ ಅಭಿವೃದ್ಧಿಗೆ ಒತ್ತು ನೀಡಿರುವ ಸಿಎಂ, ಜೋಗ ಜಲಪಾತ ಅಭಿವೃದ್ಧಿಗೆ 500 ಕೋಟಿ. ಕೃಷಿ ವಿವಿಗಾಗಿ 700 ಎಕರೆ ಜಾಗ, ಔಷಧ ತಯಾರಿಕಾ ಘಟಕ ಸ್ಥಾಪನೆಗೆ ಅನುದಾನ ಕೊಟ್ಟಿದ್ದಾರೆ. ತ್ಯಾವರೆಕೊಪ್ಪ ಮೃಗಾಲಯಕ್ಕೆ 5 ಕೋಟಿ, ನವಲೆ ಬಳಿ ಸಮತೋಲನ ಜಲಾಶಯ ನಿರ್ಮಾಣಕ್ಕೆ 20 ಕೋಟಿ. ಮಂಗಗಳ ಪುನರ್ವಸತಿಗಾಗಿ 1 ಕೋಟಿ 25 ಲಕ್ಷ ಮೀಸಲಿಡಲಾಗಿದೆ.)

* ಬಾಗಲಕೋಟೆ : 
ಸಿದ್ದರಾಮಯ್ಯ ಬಾದಾಮಿ ಕ್ಷೇತ್ರಕ್ಕೆ ಬಿಎಸ್​ವೈ ಕೇವಲ 25 ಕೋಟಿ ಕೊಟ್ಟಿದ್ದಾರೆ. ಈ ಹಣದಲ್ಲಿ ಬಾದಾಮಿ ಸಮಗ್ರ ಅಭಿವೃದ್ಧಿಯ ಮಂತ್ರ ಹಾಡಿದ್ದಾರೆ. ಇದ್ರ ಜೊತೆಗೆ  ನೂತನ ಅಗ್ನಿ ಶಾಮಕ ಠಾಣೆಗಳ ನಿರ್ಮಾಣ ಬಜೆಟ್​​ನಲ್ಲಿದೆ..

* ಎಚ್​​ಡಿಕೆ ಕ್ಷೇತ್ರಕ್ಕಿಲ್ಲ ಬಂಪರ್​
ಕುಮಾರಸ್ವಾಮಿ ಕ್ಷೇತ್ರ ಮತ್ತು ತವರು ಜಿಲ್ಲೆ ರಾಮನಗರಕ್ಕೆ ಬಿಎಸ್​ವೈ ಹೆಚ್ಚೇನೂ ಕೊಟ್ಟಿಲ್ಲ. ರಣಹದ್ದು ಸಂತಾನೋತ್ಪತ್ತಿ ಕೇಂದ್ರಕ್ಕಾಗಿ 2 ಕೋಟಿ ರೂ. ಅನುದಾನ ಘೋಷಣೆ ಮಾಡಿರುವ ಬಿಎಸ್​ವೈ, ಹಾರೋಹಳ್ಳಿಯಲ್ಲಿ ಎಲೆಕ್ಟ್ರಿಕ್​​ ವೆಹಿಕಲ್ಸ್​ & ಎನರ್ಜಿ ಸ್ಟೋರೇಜ್​ ಸ್ಥಾಪನೆ ನಿರ್ಮಾಣಕ್ಕೆ ಅನುದಾನ ಘೋಷಣೆ ಮಾಡಿದ ಅಷ್ಟೇ..

* ಉಡುಪಿಗೆ ಸಿಕ್ಕಿದ್ದೇನು..? 
 ಉಡುಪಿಯ ಹಂಗಾರ ಕಟ್ಟೆ ಬಂದರು ಅಭಿವೃದ್ಧಿಗೆ ಒಟ್ಟು 130 ಕೋಟಿ ರೂ. ಅನುದಾನ ಸಿಕ್ಕಿದ್ದು, ಮರವಂತೆಯಲ್ಲಿ ನಿರ್ಮಾಣವಾಗ್ತಿರುವ ಬಂದರಿಗೆ 85 ಕೋಟಿ. ರೂ ಅನುದಾನ ಘೋಷಣೆ ಮಾಡಲಾಗಿದೆ. ಕೊಡೇರಿ ಮೀನುಗಾರಿಕೆ ಬಂದರು ಅಭಿವೃದ್ಧಿಗೆ 2 ಕೋಟಿ ರೂಪಾಯಿ ಹಾಗೂ ಯಜಮಾಡಿಯಲ್ಲಿ ಬಂದರು ನಿರ್ಮಾಣಕ್ಕಾಗಿ 181 ಕೋಟಿ ರೂಪಾಯಿ ಘೋಷಣೆ ಮಾಡಿದ್ರೆ, ಜವಳಿ ಪಾರ್ಕ್​& ನೂತನ ಅಗ್ನಿ ಶಾಮಕ ಠಾಣೆಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. 

* ದಕ್ಷಿಣ ಕನ್ನಡಕ್ಕೆ ದಕ್ಕಿದ್ದೇನು..?
 ಇನ್ನು ಮಂಗಳೂರಿನ ಕುಳಾಯಿಯಲ್ಲಿ  ಹೊಸ ಮೀನುಗಾರಿಕೆ ಬಂದರು ಸ್ಥಾಪನೆಗೆ ಬಜೆಟ್​​ನಲ್ಲಿ ಸಿಗ್ನಲ್​ ಸಿಕ್ಕಿದ್ದು, ಇದಕ್ಕಾಗಿ 12.50 ಕೋಟಿ ರೂ. ಘೋಷಣೆ ಮಾಡಲಾಗಿದೆ. ಇದ್ರ ಜೊತೆಗೆ ಮುಲ್ಕಿಯಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ 2 ಕೋಟಿ ಹಾಗೂ ಸಾಗರ ಮಾಲಾ ಯೋಜನೆಯಲ್ಲಿ 12.50 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ.  

* ಉತ್ತರ ಕನ್ನಡ 
ಶಿರಸಿ ತಾಲೂಕಿನ ಸರ್ಕಾರಿ ಆಸ್ಪತ್ರೆಯನ್ನ, 200 ಹಾಸಿಗೆಗಳ ಮೇಲ್ದರ್ಜೆಗೇರಿಸಿ ಅಭಿವೃದ್ಧಿಗಾಗಿ ಬಜೆಟ್​​ನಲ್ಲಿ ಅನುಮೋದನೆ ಸಿಕ್ಕಿದೆ. ಹಾಗೇಯೇ ಮೀನುಗಾರಿಕಾ ಬಂದರು ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ ಘೋಷಣೆಯಾಗಿದ್ದು, ಸಿದ್ಧಾಪುರ ತಾಲೂಕಿನಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಗ್ರೀನ್​ ಸಿಗ್ನಲ್​ ಸಿಕ್ಕಿದೆ. ಖಾಸಗಿ ಸಹಭಾಗಿತ್ವದಲ್ಲಿ ಪಾವಿನಕುರ್ವೆ, ಬೇಲೆಕೇರಿಯಲ್ಲಿ ಬಂದರು ಅಭಿವೃದ್ಧಿಗೆ 2,500 ಕೋಟಿ ರೂ. ಬಿಡುಗಡೆಯಾಗಿದ್ದು, ಕಾರವಾರ ಬಂದರಿನಲ್ಲಿ ಶಾಶ್ವತ ಅಗ್ನಿ ಶಾಮಕ ಉಪಕರಣಗಳಿಗಾಗಿ 19 ಕೋಟಿ ರೂ. ಘೋಷಣೆ ಮಾಡಲಾಗಿದೆ. ಇದ್ರ ಜೊತೆಗೆ ಕಡಲಧಾಮ ಸ್ಥಾಪನೆಗಾಗಿ 1 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ. 

* ಹಾವೇರಿ 
 ಹಾವೇರಿಯಲ್ಲಿ 20 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆ ಅಭಿವೃದ್ಧಿಗೆ 20 ಕೋಟಿ ಅನುದಾನ ಘೋಷಣೆ ಮಾಡಲಾಗಿದ್ದು, ಶಿಗ್ಗಾಂವಿನಲ್ಲಿ ಜವಳಿ ಪಾರ್ಕ್​ ನಿರ್ಮಾಣಕ್ಕೆ ಗ್ರೀನ್​ ಸಿಗ್ನಲ್​ ಸಿಕ್ಕಿದೆ. ಹಾಗೇನೇ ಸಂತ ಶಿಶುನಾಳರ ಹುಟ್ಟೂರಾದ ಶಿಶುನಾಳ ಗ್ರಾಮ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಘೋಷಣೆಯಾಗಿದೆ. 

* ತುಮಕೂರು: 
ತುಮಕೂರಿನ ತಿಪಟೂರಿನಲ್ಲಿ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್ ನಿರ್ಮಾಣಕ್ಕೆ ಬಜೆಟ್​​ನಲ್ಲಿ ಘೋಷಣೆಯಾಗಿದ್ದು, ಎತ್ತಿನ ಹೊಳೆ ಯೋಜನೆ ಮೂಲಕ ಕುಡಿಯುವ ನೀರು ಸರಬರಾಜಿಗೆ ಯೋಜನೆ ರೂಪಿಸಲಾಗಿದೆ.

* ಚಿತ್ರದುರ್ಗ
ಕೋಟೆ ನಾಡು ಚಿತ್ರದುರ್ಗ ಅಭಿವೃದ್ಧಿ ದಿಟ್ಟ ಕ್ರಮಕ್ಕೆ ಮುಂದಾಗಿರುವ ಬಿಎಸ್​ವೈ ಸರ್ಕಾರ, ತನ್ನ ಬಜೆಟ್​​ನಲ್ಲಿ ಮಾಜಿ ಸಿಎಂ ದಿ. ಎಸ್​​. ನಿಜಲಿಂಗಪ್ಪ ಗೃಹ ಸಂರಕ್ಷಣೆ & ಅಭಿವೃದ್ಧಿಗೆ 5 ಕೋಟಿ ಅನುದಾನ ಘೋಷಣೆ ಮಾಡಿದೆ. ಇದ್ರ ಜೊತೆಗೆ 20 ಕೋಟಿ ವೆಚ್ಚದಲ್ಲಿ ಮುರುಘಾ ಮಠದ ಆವರಣದಲ್ಲಿ 325 ಅಡಿ ಬಸವ ಪುತ್ಥಳಿ ನಿರ್ಮಾಣಕ್ಕೆ ಬಜೆಟ್​ ಘೋಷಣೆ ಮಾಡಲಾಗಿದ್ದು, - ಶುದ್ಧೀಕರಿಸಿದ ನೀರನ್ನ ಗೃಹೇತರ ಬಳಕೆಗೆ ಯೋಜನೆ ಅನುಷ್ಠಾನಗೊಳಿಸಿದೆ.)

* ಕಾರವಾರ: ಬಂದರು ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ. 
* ಕೊಪ್ಪಳ: ಗಂಗಾವತಿಯ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ 20 ಕೋಟಿ ಅನುದಾನ
* ಬೀದರ್​ : ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ 
* ಹಾಸನ :  ಎಸ್​.ಎಲ್​ ಭೈರಪ್ಪನವ್ರ ಹುಟ್ಟೂರು ಸಂತೆಶಿವರ ಗ್ರಾಮದ ಅಭಿವೃದ್ಧಿಗೆ 5 ಕೋಟಿ
* ಮೈಸೂರು: ಮೈಸೂರು ಸರ್ಕಾರಿ ಮುದ್ರಾಣಾಲಯಕ್ಕೆ 80 ಲಕ್ಷ ರೂ. ಅನುದಾನ.
*ಬೀದರ್: ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ. 

ಇಷ್ಟು ಜಿಲ್ಲೆಗಳಿ ಯಡಿಯೂರಪ್ಪ ಅವರು ತಮ್ಮ ಬಜೆಟ್‌ನಲ್ಲಿ ಯೋಜನೆ, ಅನುದಾನ ಘೋಷಣೆ ಮಾಡಿದ್ದಾರೆ. ಅದರಲ್ಲಿ ತವರು ಜಿಲ್ಲೆಗೆ ಸಿಂಹಪಾಲು. ಆದ್ರೆ, ಇನ್ನುಳಿದ 14 ಜಿಲ್ಲೆಗಳಿಗೆ ಹೊಸ ಯೋಜನೆ ಅಥವಾ ಅನುದಾನವನ್ನ ನೀಡಿಲ್ಲ. 

Follow Us:
Download App:
  • android
  • ios