2023ರಲ್ಲಿ 1970ಕ್ಕಿಂತಲೂ ತೀವ್ರವಾದ ಜಾಗತಿಕ ಆರ್ಥಿಕ ಹಿಂಜರಿತ ಭೀತಿ: ವಿಶ್ವಸಂಸ್ಥೆ
ಹಣದುಬ್ಬರ ತಡೆಯಲು ವಿಶ್ವದೆಲ್ಲೆಡೆ ಬಡ್ಡಿದರ ಏರಿಕೆಯಿಂದಾಗಿ ಜಗತ್ತಿನ ಆರ್ಥಿಕತೆ (global economy) ಮಂದಗತಿಯತ್ತ ಸಾಗುತ್ತಿದ್ದು, ಇದರಿಂದ 2023ರಲ್ಲಿ ಆರ್ಥಿಕ ಹಿಂಜರಿತ ಭಾದಿಸಲಿದ್ದು, ಇದು 1970ಕ್ಕಿಂತ ತೀವ್ರವಾಗಿ ಕಾಡುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ವಾಷಿಂಗ್ಟನ್: ಹಣದುಬ್ಬರ ತಡೆಯಲು ವಿಶ್ವದೆಲ್ಲೆಡೆ ಬಡ್ಡಿದರ ಏರಿಕೆಯಿಂದಾಗಿ ಜಗತ್ತಿನ ಆರ್ಥಿಕತೆ (global economy) ಮಂದಗತಿಯತ್ತ ಸಾಗುತ್ತಿದ್ದು, ಇದರಿಂದ 2023ರಲ್ಲಿ ಆರ್ಥಿಕ ಹಿಂಜರಿತ ಭಾದಿಸಲಿದ್ದು, ಇದು 1970ಕ್ಕಿಂತ ತೀವ್ರವಾಗಿ ಕಾಡುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಹಣದುಬ್ಬರ ತಡೆಯಲು (prevent inflation) ಏಕಕಾಲದಲ್ಲಿ ಸಾಲ ನೀತಿಯನ್ನು ಬಿಗಿಗೊಳಿಸಿ ಬಡ್ಡಿದರ (interest rate) ಏರಿಸುತ್ತಿವೆ. ಇದರಿಂದಾಗಿ ಭಾರತ ಸೇರಿದಂತೆ ವಿಶ್ವವು ಮುಂದಿನ ವರ್ಷ ಆರ್ಥಿಕ ಹಿಂಜರಿತ ಕಾಣಬಹುದು ಎಂದು ವಿಶ್ವಬ್ಯಾಂಕ್ ವರದಿಯೊಂದು (World Bank report) ಅಭಿಪ್ರಾಯಪಟ್ಟಿದೆ. ಈಗಾಗಲೇ ಆರ್ಥಿಕ ಹಿಂಜರಿತದ (economic recession) ಲಕ್ಷಣ ಕಾಣತೊಡಗಿವೆ. 1970ರಲ್ಲಿ ಉಂಟಾದ ಆರ್ಥಿಕ ಹಿಂಜರಿತದ ನಂತರದ ಅತಿ ಗರಿಷ್ಠ ಹಿಂಜರಿತ 2023ರಲ್ಲಿ ಆಗಬಹುದು ಎಂದು ಅದು ಆತಂಕ ವ್ಯಕ್ತಪಡಿಸಿದೆ.
ಮುಂದಿನ ವರ್ಷ ಕೇಂದ್ರೀಯ ಬ್ಯಾಂಕ್‌ಗಳ ಬಡ್ಡಿ ಏರಿಕೆ ಶೇ.4ಕ್ಕೆ ತಲುಪಬಹುದು. ಇದು 2021ಕ್ಕಿಂತ ದುಪ್ಪಟ್ಟು. ಅಮೆರಿಕದಿಂದ ಯುರೋಪ್ ಹಾಗೂ ಭಾರತದ ವರೆಗೆ ಭಾರಿ ಪ್ರಮಾಣದಲ್ಲಿ ಸಾಲದ ಬಡ್ಡಿದರಗಳು (interest rates on loans) ಏರುತ್ತಿವೆ. ಹಣದುಬ್ಬರ ಏರಿಕೆ ತಡೆಗೆ ಈ ಕ್ರಮ ಜರುಗಿಸಲಾಗುತ್ತಿದೆ. ಆದರೆ ಇದು ಆರ್ಥಿಕ ಮಂದಗತಿಗೆ ಕಾರಣವಾಗಿದೆ. ಜಾಗತಿಕ ಬೆಳವಣಿಗೆ ತೀವ್ರಗತಿಯಲ್ಲಿ ಕುಂಠಿತಗೊಳ್ಳುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಮಾರಕ ವಾತಾವರಣ ಸೃಷ್ಟಿಆಗಬಲ್ಲದು. ಇದು ಹಲವಾರು ದೇಶಗಳಲ್ಲಿ ಆರ್ಥಿಕ ಹಿಂಜರಿತಕ್ಕೂ ಕಾರಣ ಆಗಬಲ್ಲದು. ಹಣದುಬ್ಬರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಬಂಡವಾಳ ಹೂಡಿಕೆಯಲ್ಲಿ ಇಳಿಕೆ, ಉದ್ಯೋಗ ನಷ್ಟ, ಅಭಿವೃದ್ಧಿ ಕುಂಠಿತ, ವಹಿವಾಟು ಕುಸಿತಕ್ಕೆ ಕಾರಣವಾಗಬಹುದು ಎಂದು ವರದಿ ಹೇಳಿದೆ.
ತೆರಿಗೆದಾರರೇ ಗಮನಿಸಿ, ಅಕ್ಟೋಬರ್ 1ರಿಂದ ಈ ಎರಡು ನಿಯಮಗಳಲ್ಲಿ ಬದಲಾವಣೆ
ಉಕ್ರೇನ್ ಕದನ, ಜಾಗತಿಕ ಆಹಾರ ಪೂರೈಕೆ (global food supply), ಕೃಷಿ ಉತ್ಪಾದನೆ ಕುಂಠಿತ, ಕೊರೋನಾ ಕರಿನೆರಳು, ಕೋವಿಡ್ ಕಾರಣ ಚೀನಾದಲ್ಲಿನ ಸತತ ಲಾಕ್‌ಡೌನ್‌ಗಳು- ಮುಂತಾದ ಕಾರಣ ವಿಶ್ವದಲ್ಲಿ ಹಣದುಬ್ಬರ ಹೆಚ್ಚುತ್ತಿದೆ. ಇದರ ನಡುವೆಯೇ ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ.5.4ಕ್ಕೆ ಹೆಚ್ಚಿಸಿದ್ದು, ಭಾರತದಲ್ಲಿ ಸಾಲದ ಬಡ್ಡಿದರ ಏರಿಕೆಗೆ ಕಾರಣವಾಗಿದೆ.
34.5 ಕೋಟಿ ಜನರಿಗೆ ಹಸಿವಿನ ಸಂಕಟ: 82 ದೇಶಗಳಲ್ಲಿ ಆಹಾರಕ್ಕಾಗಿ ಹಾಹಾಕಾರ
ಕೋವಿಡ್ ಸಾಂಕ್ರಾಮಿಕ ಹಾಗೂ ಉಕ್ರೇನ್ ಯುದ್ಧದ ಕಾರಣದಿಂದಾಗಿ ಮುಂಬರುವ ದಿನಗಳಲ್ಲಿ 82 ದೇಶಗಳ 34.5 ಕೋಟಿ ಜನರು ಹಸಿವಿನ ದವಡೆಗೆ ತಳ್ಳಲ್ಪಡುವ ಭೀತಿಯಿದೆ ಎಂದು ವಿಶ್ವ ಸಂಸ್ಥೆಯ ಆಹಾರ ಯೋಜನೆ (World Food Program) ಮುಖ್ಯಸ್ಥ ಡೇವಿಡ್ ಬಿಯಾಸ್ಲೇ (David Beasley) ಎಚ್ಚರಿಕೆ ನೀಡಿದ್ದಾರೆ.
ಇದು ಜಾಗತಿಕ ತುರ್ತುಪರಿಸ್ಥಿತಿಯಾಗಿದ್ದು, ಈಗಾಗಲೇ ಸೋಮಾಲಿಯಾ (Somalia), ಅಪ್ಘಾನಿಸ್ತಾನ (Afghanistan) ಸೇರಿ 45 ದೇಶಗಳಲ್ಲಿನ ಸುಮಾರು 5 ಕೋಟಿ ಜನರು ಈಗಾಗಲೇ ಹಸಿವು ಹಾಗೂ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಆದರೆ ಉಕ್ರೇನ್ ಯುದ್ಧದ ಬಳಿಕ ಹಸಿವಿನ ಅಲೆಯು ಹಸಿವಿನ ಸುನಾಮಿಯಾಗಿ ಪರಿವರ್ತನೆಯಾಗಿದೆ. ಆಹಾರ, ಇಂಧನ ಹಾಗೂ ಗೊಬ್ಬರದ ಬೆಲೆಯು ತೀವ್ರವಾದ ಏರುಗತಿಯಲ್ಲಿ ಸಾಗಿದ್ದು, 82 ದೇಶಗಳ 34.5 ಕೋಟಿ ಜನರು ಹಸಿವಿನತ್ತ ಸಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಶೇ.12.41ಕ್ಕೆ ತಗ್ಗಿದ ಸಗಟು ಹಣದುಬ್ಬರ,ಇಳಿಕೆಯಾಗುತ್ತಾ ಅಗತ್ಯ ವಸ್ತುಗಳ ಬೆಲೆ?
ಜುಲೈನಲ್ಲಿ ನಡೆದ ಒಪ್ಪಂದದ ಪ್ರಕಾರ ಉಕ್ರೇನಿನ ಆಹಾರ ಧಾನ್ಯಗಳು ಹಡಗುಗಳ ಮೂಲಕ ಕಪ್ಪು ಸಮುದ್ರದ ಬಂದರುಗಳಿಂದ ಸಾಗಿಸಲು ಮುಂದಾದಾಗಲೂ ರಷ್ಯಾ ಅವುಗಳನ್ನು ತಡೆಹಿಡಿದಿದೆ. ಆರ್ಥಿಕ ನಿರ್ಬಂಧದಿಂದಾಗಿ ರಷ್ಯಾದ ಗೊಬ್ಬರಗಳು ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ. ಹೀಗಾಗಿ ಈಗಲೇ ತಾವು ಈ ಬಗ್ಗೆ ಎಚ್ಚರ ವಹಿಸಿ ಕಾರ್ಯ ನಿರ್ವಹಿಸದಿದ್ದರೆ ಈಗಿನ ಆಹಾರ ಬಿಕ್ಕಟ್ಟು ಮುಂದಿನ ದಿನಗಳಲ್ಲಿ ಆಹಾರ ಲಭ್ಯತೆ ಬಿಕ್ಕಟ್ಟಾಗಿ ಪರಿರ್ವತೆಯಾಗಬಹುದು ಎಂದು ಬಿಯಾಸ್ಲೇ ಎಚ್ಚರಿಕೆ ನೀಡಿದ್ದಾರೆ.