Asianet Suvarna News Asianet Suvarna News

ಶೂನ್ಯ ಬಂಡವಾಳದಲ್ಲಿ ವ್ಯಾಪಾರ ಶುರು ಮಾಡಿ ಐವತ್ತು ಸಾವಿರ ಲಾಭಗಳಿಸ್ತಿರುವ ಮಹಿಳೆ!

ಮಾರಾಟ ಆಗದೆ ಹೋದ್ರೆ ವಾಪಸ್ ಕೊಡ್ತೇನೆ ಎನ್ನುತ್ತ ಝಿರೋ ಬಂಡವಾಳದಲ್ಲಿ ವ್ಯಾಪಾರ ಶುರು ಮಾಡಿದ ಮಹಿಳೆ ಈಗ ಬೆಂಗಳೂರು ಸೇರಿ ನಾನಾ ನಗರಗಳಿಗೆ ತಮ್ಮ ಉತ್ಪನ್ನ ಮಾರಾಟ ಮಾಡುವಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಅವರ ಸಾಧನೆ ಅನೇಕ ಹೆಣ್ಮಕ್ಕಳಿಗೆ ಸ್ಫೂರ್ತಿಯಾಗಲಿದೆ.
 

Success Story Kanak Agrawal Makes Profit From Sewing Machine roo
Author
First Published Mar 15, 2024, 11:46 AM IST

ವ್ಯಾಪಾರ ಶುರು ಮಾಡುವ ಮೊದಲು ಬಂಡವಾಳ ಎಲ್ಲಿಂದ ಹೊಂದಿಸೋದು ಎನ್ನುವ ಸಮಸ್ಯೆ ನಮ್ಮನ್ನು ಕಾಡುತ್ತದೆ. ಹೂಡಿಕೆಗೆ ಅಗತ್ಯವಿರುವ ಹಣವನ್ನು ಲೆಕ್ಕ ಮಾಡಿ, ಬ್ಯಾಂಕ್ ನಿಂದ ಸಾಲ ಅಥವಾ ಬೇರೆಯವರಿಂದ ಹಣ ಪಡೆದು ನಾವು ವ್ಯಾಪಾರ ಶುರು ಮಾಡಲು ಮುಂದಾಗ್ತೇವೆ. ಆದ್ರೆ ಈಗ ನಾವು ಹೇಳ್ತಿರುವ ಮಹಿಳೆ ಝಿರೋ ಬಂಡವಾಳದಲ್ಲಿ ವ್ಯಾಪಾರ ಶುರು ಮಾಡಿ ಈಗ ಐವತ್ತು ಸಾವಿರಕ್ಕಿಂತ ಹೆಚ್ಚು ಲಾಭ ಗಳಿಸುತ್ತಿದ್ದಾಳೆ.

ಬ್ಯುಸಿನೆಸ್ (Business) ಮಾಡುವ ಕಲೆ ಹಾಗೂ ಆಸಕ್ತಿ ಕೆಲವರಿಗೆ ಬಾಲ್ಯದಲ್ಲಿಯೇ ಇರುತ್ತೆ. ಮಹಿಳೆಯರು ಏನೇ ಬಯಕೆ ಹೊಂದಿದ್ದರೂ ಮದುವೆ, ಮಕ್ಕಳು ಎನ್ನುವ ಕಾರಣಕ್ಕೆ ತಮ್ಮೆಲ್ಲ ಆಸೆಯನ್ನು ಬದಿಗೊತ್ತಿರುತ್ತಾರೆ. ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಮತ್ತೆ ಅವರ ಬಾಲ್ಯದ ಆಸೆಗಳು ಚಿಗುರೊಡೆಯುತ್ತವೆ. ತಾವೂ ಜೀವನದಲ್ಲಿ ಸಾಧನೆ (Achievement) ಮಾಡಬೇಕು, ಒಂದಿಷ್ಟು ಹಣ ಸಂಪಾದನೆ ಮಾಡಬೇಕು ಎನ್ನುವ ಕನಸು ಕಾಣಲು ಶುರು ಮಾಡ್ತಾರೆ. ಈಗಿನ ಕಾಲದಲ್ಲಿ ಅವಕಾಶಗಳು ಸಾಕಷ್ಟಿದೆ. ಮನೆಯಲ್ಲೇ ಕುಳಿತು ಮಾಡುವ ಕೆಲಸಗಳು ಬೇಕಷ್ಟಿದೆ. ಅದ್ರ ಜೊತೆಗೆ ವ್ಯಾಪಾರದಲ್ಲೂ ಮಹಿಳೆಯರು ಮುಂದೆ ಬರ್ತಿದ್ದಾರೆ. ಈಗ ನಾವು ಹೇಳ್ತಿರುವ ಮಹಿಳೆ ಕೂಡ ಝೀರೋ (zero)  ಹೂಡಿಕೆಯಲ್ಲಿ ವ್ಯಾಪಾರ ಶುರು ಮಾಡಿ ಯಶಸ್ವಿಯಾಗಿದ್ದಾರೆ. ಜಾರ್ಖಂಡ್ ರಾಜಧಾನಿ ರಾಂಚಿಯ ಅಪ್ಪರ್ ಬಜಾರ್ ನಿವಾಸಿ ಕನಕ ಅಗರ್ವಾಲ್, ವ್ಯಾಪಾರ ಶುರು ಮಾಡಬೇಕು ಎನ್ನುವ ಮಧ್ಯಮ ವಯಸ್ಸಿನ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. 

ಏನೂ ಮಾಡದೇ 1.27 ಕೋಟಿ ಪಡೆವ ಕೊಹ್ಲಿ, ತಿಂಗಳಿಗೆ 18 ಲಕ್ಷ ಪಡೆವ ಅಭಿಷೇಕ್ ಬಚ್ಚನ್; ಇಲ್ಲಿದೆ ಹೂಡಿಕೆ ಯೋಜನೆ

57 ವರ್ಷದ ಕನಕ ಅಗರ್ವಾಲ್ ಗೆ ಇಬ್ಬರು ಮಕ್ಕಳು. ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ತಾನೇನಾದ್ರೂ ಮಾಡ್ಬೇಕು ಎನ್ನುವ ಆಲೋಚನೆ ತಲೆಯಲ್ಲಿತ್ತು. ವ್ಯಾಪಾರದ ಮೂಲಕ ಹಣ ಸಂಪಾದನೆ ಮಾಡಬೇಕೆಂಬ ಆಸೆಯನ್ನು ಅವರು ಹೊಂದಿದ್ದರು. ಬಾಲ್ಯದಲ್ಲಿಯೇ ಕಸೂತಿ ಹಾಗೂ ನೆಯ್ಗೆ ಬಗ್ಗೆ ಆಸಕ್ತಿ ಹೊಂದಿದ್ದ ಕನಕ, ಲೇಟೆಸ್ಟ್ ಕುರ್ತಾ ತಯಾರಿಸುವ ಕಲೆ ಕಲಿತಿದ್ದರು.

ಆದ್ರೆ ಇದನ್ನು ಹೇಗೆ ವ್ಯಾಪಾರವಾಗಿ ಬದಲಿಸಬೇಕು ಎಂಬುದು ಅವರಿಗೆ ತಿಳಿದಿರಲಿಲ್ಲ. ಮೊದಲು ಒಂದು ಅಂಗಡಿಗೆ ಹೋಗಿ ಇಪ್ಪತ್ತು ಸೀರೆ ಮತ್ತು ಕುರ್ತಾ ಪಡೆದು ಅದನ್ನು ಜಾತ್ರೆಯಲ್ಲಿ ಮಾರಾಟ ಮಾಡುವ ನಿರ್ಧಾರಕ್ಕೆ ಬಂದರು. ಒಂದ್ವೇಳೆ ಸೀರೆ ಮಾರಾಟವಾಗಿಲ್ಲ ಎಂದಾದ್ರೆ ಅದನ್ನು ವಾಪಸ್ ನೀಡುವುದಾಗಿ ಅಂಗಡಿಯವರಿಗೆ ಹೇಳಿದ್ದರು. ಕನಕ ಅದೃಷ್ಟ ಚೆನ್ನಾಗಿತ್ತು. ಅವರು ತೆಗೆದುಕೊಂಡು ಹೋಗಿದ್ದ ಸೀರೆ ಹಾಗೂ ಕುರ್ತಾ ಎಲ್ಲವೂ ಮಾರಾಟವಾಗಿತ್ತು. ಒಂದೇ ದಿನದಲ್ಲಿ ಇಪ್ಪತ್ತು ಸಾವಿರ ಲಾಭ ಮಾಡಿದ್ದರು ಕನಕ. ಅಂಗಡಿಗೆ ನೀಡಬೇಕಾದ ಹಣ ನೀಡಿ, ಉಳಿದ ಹಣದಲ್ಲಿ ನಾಲ್ಕು ಹೊಲಿಗೆ ಮಶಿನ್ (Sewing Machine) ಖರೀದಿಸಿದ್ರು ಕನಕ.

ಅಬ್ಬಬ್ಬಾ ..39ನೇ ವಿವಾಹ ವಾರ್ಷಿಕೋತ್ಸವಕ್ಕೆ ಅಂಬಾನಿ ದಂಪತಿ ಕಟ್‌ ಮಾಡಿದ ಗೋಲ್ಡನ್‌ ಕೇಕ್‌ ಹೇಗಿದೆ ನೋಡಿ!

ನಂತ್ರ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸಲು ಅವರು ಮುಂದಾದ್ರು. ಈಗ ಅವರು ಹ್ಯಾಂಡ್ ಎಂಬ್ರಾಯಿಡರಿ ಹ್ಯಾಂಡ್ ಪರ್ಸ್, ಮಿನಿ ಪರ್ಸ್, ಫ್ಯಾಶನ್ ಕುರ್ತಾ, ಸೀರೆ,  ರೇಷ್ಮೆ ಸೀರೆ, ನೆಕ್ಲೇಸ್, ಕುಂದನ್ ಆಭರಣಗಳು ಮತ್ತು ವಜ್ರದ ಆಭರಣಗಳು ಸೇರಿದಂತೆ ಬಗೆ ಬಗೆಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವರೇ ಲೇಟೆಸ್ಟ್ ಡಿಸೈನ್ ಕುರ್ತಾಗಳನ್ನು ಸಿದ್ಧಪಡಿಸುತ್ತಾರೆ. ಎಂಟರಿಂದ ಹತ್ತು ಮಂದಿ ಹುಡುಗಿಯರಿಗೆ ಕೆಲಸ ನೀಡಿದ್ದಾರೆ. ಅವರು ಕುರ್ತಾ ತಯಾರಿಸುವ ಕೆಲಸ ಮಾಡ್ತಿದ್ದಾರೆ. ಆರಂಭದ ದಿನಗಳಲ್ಲಿ ಅಂಗಡಿಯಿಂದ ತಂದು ಸೀರೆ, ಕುರ್ತಾ ಮಾರುತ್ತಿದ್ದ ಕನಕ, 10 ರಿಂದ 15000 ಲಾಭ ಗಳಿಸುತ್ತಿದ್ದರು. ಈಗ ನಲವತ್ತರಿಂದ ಐವತ್ತು ಸಾವಿರ ಲಾಭ ಗಳಿಸುತ್ತಿದ್ದಾರೆ. ಕೆಲಸ ಮಾಡುವ ಹುಡುಗಿಯರಿಗೆ ಸಂಬಳ ನೀಡಿಯೂ ಇಷ್ಟೊಂದು ಹಣ ಉಳಿಯುತ್ತಿದೆ.

ಕನಕ ಅವರ ಡಿಸೈನ್ ಕುರ್ತಾ (Design Kurta), ಪರ್ಸ್ (Purse) ಗಳನ್ನು ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ಕೊಲ್ಕತ್ತಾ, ಪಾಟ್ನಾ ವ್ಯಾಪಾರಸ್ಥರು ಖರೀದಿಸುತ್ತಾರೆ.  ಪತಿ ಹಾಗೂ ಮಾವನ ಸಹಕಾರದಿಂದ ಈ ಎಲ್ಲ ಕೆಲಸ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ಕನಕ.

Follow Us:
Download App:
  • android
  • ios