ನಿವೃತ್ತಿ ಬಳಿಕ ಕೈತುಂಬಾ ಹಣವಿರಬೇಕಾ? ಹಾಗಾದ್ರೆ ತಪ್ಪದೇ ಈ ಟಿಪ್ಸ್ ಫಾಲೋ ಮಾಡಿ

ನಿವೃತ್ತಿ ನಂತರದ ಬದುಕಿಗಾಗಿ ಉಳಿತಾಯ ಮಾಡೋದು ಅಗತ್ಯ. ಇದಕ್ಕಾಗಿ ಸೂಕ್ತ ಯೋಜನೆ ಅಗತ್ಯ. ಹಾಗಾದ್ರೆ ನಿವೃತ್ತಿ ಬಳಿಕ ಕೈತುಂಬಾ ಹಣವಿರಬೇಕಂದ್ರೆ ಏನ್ ಮಾಡ್ಬೇಕು? ಇಲ್ಲಿದೆ ಟಿಪ್ಸ್. 

Retirement Savings SOS Top Money Saving Tips You Cant Afford to Miss anu

Business Desk:ಉದ್ಯೋಗ ಸಿಕ್ಕ ತಕ್ಷಣ ನಿವೃತ್ತಿ ಬಗ್ಗೆ ಯೋಚಿಸಬೇಕು ಎನ್ನುತ್ತಾರೆ ಹಣಕಾಸು ತಜ್ಞರು. ಹೌದು, ನಿವೃತ್ತಿ ಜೀವನದ ಬಗ್ಗೆ ನಾವು ಎಷ್ಟು ಬೇಗ ಯೋಚಿಸುತ್ತೇವೆಯೋ ಅಷ್ಟು ಒಳ್ಳೆಯದು. ಹೀಗಾಗಿ ಉದ್ಯೋಗ ಸಿಕ್ಕ ತಕ್ಷಣ ನಿವೃತ್ತಿ ಜೀವನಕ್ಕಾಗಿ ಉಳಿತಾಯ ಮಾಡಲು ಪ್ರಾರಂಭಿಸಬೇಕು. ಇದು ದೀರ್ಘಾವಧಿಯ ಹೂಡಿಕೆಯಾಗಿದೆ. ಹೀಗಾಗಿ ಈ ಬಗ್ಗೆ ಸೂಕ್ತ ಯೋಜನೆ ರೂಪಿಸೋದು ಅಗತ್ಯ. ನಗರ ಪ್ರದೇಶಗಳಲ್ಲಿ ವೆಚ್ಚ ಹೆಚ್ಚುತ್ತಿದೆ. ಹೀಗಾಗಿ ನಮ್ಮ ಖರ್ಚು-ವೆಚ್ಚಗಳ ಜೊತೆಗೆ ಬದುಕಿನ ಇಳಿಸಂಜೆಯನ್ನು ನೆಮ್ಮದಿಯಿಂದ ಕಳೆಯಲು ಒಂದಿಷ್ಟು ಉಳಿಸೋದು ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯ. ಇನ್ನನು ನಿವೃತ್ತಿಗಾಗಿ ಮಾಡುವ ಉಳಿತಾಯ ಅಥವಾ ಹೂಡಿಕೆ ಯೋಜನೆಗಳನ್ನು ಬದ್ಧತೆಯಿಂದ ನಿರ್ವಹಿಸೋದು ಅಗತ್ಯ. ಕೆಲವು ಸಂದರ್ಭಗಳಲ್ಲಿ ವೆಚ್ಚಗಳು ಹೆಚ್ಚಿ, ಹಣ ಉಳಿತಾಯ ಮಾಡಲು ಕಷ್ಟವಾಗಬಹುದು. ಇಂಥ ಸಂದರ್ಭಗಳನ್ನು ಜಾಣತನದಿಂದ ನಿರ್ವಹಿಸುವ ಬಗ್ಗೆ ಯೋಚಿಸಬೇಕು. ಇನ್ನು ನಿಮ್ಮ ನಿವೃತ್ತಿ ಜೀವನಕ್ಕೆ ಎಷ್ಟು ಹಣ ಉಳಿತಾಯ ಮಾಡಲು ನೀವು ಬಯಸುತ್ತೀರಿ ಎಂಬುದನ್ನು ಒಮ್ಮೆಗೆ ನಿರ್ಧರಿಸಿದರೆ, ಉಳಿದ ಕೆಲಸ ಸುಲಭವಾಗುತ್ತದೆ.

ನಿವೃತ್ತಿ ಜೀವನಕ್ಕಾಗಿ ಉಳಿತಾಯ ಮಾಡಲು ಅನೇಕ ಹೂಡಿಕೆ ಅವಕಾಶಗಳು ಲಭ್ಯವಿವೆ. ಹೀಗಾಗಿ ಸೂಕ್ತವಾದ ಯೋಜನೆಯನ್ನು ಆಯ್ಕೆ ಮಾಡೋದು ಅಗತ್ಯ. ನಿವೃತ್ತಿಗಾಗಿ ಹಣವನ್ನು ಉಳಿತಾಯ ಮಾಡಲು ಈ ಟಿಪ್ಸ್ ಪಾಲಿಸಿ.
*ಬೇಗ ಹೂಡಿಕೆ ಪ್ರಾರಂಭಿಸಿ:  ಹಣಕಾಸು ತಜ್ಞರ ಪ್ರಕಾರ ನಿವೃತ್ತಿ ಜೀವನಕ್ಕಾಗಿ ನೀವು ಬೇಗ ಉಳಿತಾಯ ಮಾಡಲು ಪ್ರಾರಂಭಿಸಿದರೆ ನಿಮ್ಮ ಹಣ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ. ನಿವೃತ್ತಿ ಜೀವನದ ಹೂಡಿಕೆಗೆ ನೀವು ಸಣ್ಣ ಮೊತ್ತವನ್ನು ನಿರಂತರವಾಗಿ ಪಾವತಿಸಿದರೂ ಸಾಕು, ದೊಡ್ಡ ಪ್ರಮಾಣದಲ್ಲಿ ಉಳಿತಾಯ ಮಾಡಬಹುದು.
*ಗುರಿ ಸ್ಪಷ್ಟವಾಗಿರಲಿ: ನಿಮ್ಮ ಜೀವನಶೈಲಿ ಹಾಗೂ ನಿರೀಕ್ಷಿತ ವೆಚ್ಚಗಳಿಗೆ ಅನುಗುಣವಾಗಿ ನಿವೃತ್ತಿ ಬದುಕಿಗೆ ಎಷ್ಟು ಹಣ ಬೇಕು ಎಂಬುದನ್ನು ನಿರ್ಧರಿಸಿ. ಹಣದುಬ್ಬರ ಹಾಗೂ ಆರೋಗ್ಯ ಸೇವಾ ವೆಚ್ಚಗಳನ್ನು ಕೂಡ ಪರಿಗಣಿಸಿ. ಸ್ಪಷ್ಟವಾದ ನಿವೃತ್ತಿ ಗುರಿ ನಿಮಗೆ ಉತ್ತೇಜನ ನೀಡುವ ಜೊತೆಗೆ ನಿರ್ದಿಷ್ಟ ಮೊತ್ತವನ್ನು ಉಳಿತಾಯ ಮಾಡಲು ನೆರವು ನೀಡುತ್ತದೆ.

ಠೇವಣಿದಾರರಿಗೆ ಗುಡ್‌ ನ್ಯೂಸ್‌: ಆರ್‌ಡಿ ಖಾತೆ ಬಡ್ಡಿ ದರ ಹೆಚ್ಚಿಸಿದ ಕೇಂದ್ರ ಸರ್ಕಾರ

*ನಿವೃತ್ತಿ ಬಜೆಟ್ ಸಿದ್ಧಪಡಿಸಿ: ನಿಮ್ಮ ಪ್ರಸಕ್ತ ವೆಚ್ಚಗಳು ಹಾಗೂ ಆದಾಯವನ್ನು ಆಧರಿಸಿ ಬಜೆಟ್ ಸಿದ್ಧಪಡಿಸಿ. ಎಲ್ಲಿ ನೀವು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಬಹುದೋ ಎಂಬ ಬಗ್ಗೆ ಯೋಚಿಸಿ ಆ ಹಣವನ್ನು ಉಳಿತಾಯಕ್ಕೆ ಬಳಸಿ.
*ನಿವೃತ್ತಿ ಖಾತೆ: ತೆರಿಗೆ ಉಳಿತಾಯದ ನಿವೃತ್ತಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸಿ. ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಯೋಜನೆ (ಎನ್ ಪಿಎಸ್ ) ಅಥವಾ ತೆರಿಗೆ ಉಳಿತಾಯದ ಸ್ಥಿರ ಠೇವಣಿಗಳಲ್ಲಿ (ಎಫ್ ಡಿ) ಹೂಡಿಕೆ ಮಾಡುವ ಬಗ್ಗೆ ಯೋಚಿಸಿ. ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ತೆರಿಗೆ ಪ್ರಯೋಜನ ಕೂಡ ಸಿಗುತ್ತದೆ. ಅಲ್ಲದೆ, ನಿಮ್ಮ ನಿವೃತ್ತಿ ಉಳಿತಾಯವನ್ನು ಹೆಚ್ಚಿಸಲು ನೆರವು ನೀಡುತ್ತದೆ. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ಕೈಗೊಳ್ಳಲು ಹಣಕಾಸು ಸಲಹೆಗಾರರು ನೆರವು ನೀಡುತ್ತಾರೆ.

*ಜಾಣತನದಿಂದ ಹೂಡಿಕೆ ಮಾಡಿ: ಈಕ್ವಿಟಿ, ಸ್ಥಿರ ಆದಾಯ ಹೂಡಿಕೆಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ಹೂಡಿಕೆ ಮಾಡಿ. ಇನ್ನು ನಿಮ್ಮ ನಿವೃತ್ತಿ ಗುರಿಗಳಿಗೆ ಅನುಗುಣವಾಗಿ ಹೂಡಿಕೆ ಮಾಡಿ. 
*ನಿಯಮಿತವಾಗಿ ಪರಿಶೀಲಿಸಿ ಹಾಗೂ ಹೊಂದಾಣಿಕೆ ಮಾಡಿ: ನಿಮ್ಮ ಹೂಡಿಕೆಗಳನ್ನು ನಿಯಮಿತವಾಗಿ ಪರಿಶೀಲಿಸಿ. ಹಾಗೆಯೇ ನಿಮ್ಮ ಗುರಿಗಳನ್ನು ನಿಮ್ಮ ಆದಾಯಕ್ಕೆ ಅನುಗುಣವಾಗಿ ಪರಿಷ್ಕರಿಸಿ. 
*ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ: ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಿ. ನಿಮ್ಮ ಖಾತೆಗೆ ವೇತನ ಬಂದ ತಕ್ಷಣ ಅದನ್ನು ನಿವೃತ್ತಿ ಯೋಜನೆಯ ಖಾತೆಗೆ ವರ್ಗಾಯಿಸಿ.
*ಹೆಚ್ಚುವರಿ ಉಳಿತಾಯದ ಆಯ್ಕೆಗಳನ್ನು ಪರಿಗಣಿಸಿ: ಮ್ಯೂಚುವಲ್ ಫಂಡ್, ಸ್ಟಾಕ್ಸ್ ಹಾಗೂ ಬಾಂಡ್ ಗಳು ಸೇರಿದಂತೆ ಇತರ ಹೂಡಿಕೆ ಆಯ್ಕೆಗಳನ್ನು ಪರಿಗಣಿಸಿ. ನಿಮ್ಮ ಹೂಡಿಕೆಗಳನ್ನು ವಿವಿಧ ಯೋಜನೆಗಳಿಗೆ ವಿಸ್ತರಿಸೋದ್ರಿಂದ ಉತ್ತಮ ರಿಟರ್ನ್ಸ್ ಗಳಿಸಬಹುದು.
*ಮಾಹಿತಿ ಹೊಂದಿರಿ: ತೆರಿಗೆ ಕಾನೂನುಗಳು, ಹೂಡಿಕೆ ಆಯ್ಕೆಗಳು ಹಾಗೂ ನಿವೃತ್ತಿ ಯೋಜನೆಗಳಲ್ಲಿನ ಬದಲಾವಣೆಗಳ ಬಗ್ಗೆ ಮಾಹಿತಿ ಪಡೆಯುತ್ತೀರಿ. ಇದ್ರಿಂದ ನಿಮಗೆ ಸೂಕ್ತವಾದ ಹಣಕಾಸು ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ನಾಮಿನಿ ಘೋಷಣೆ ಗಡುವು ಜನವರಿ1ಕ್ಕೆ ವಿಸ್ತರಣೆ

*ಆರೋಗ್ಯಸೇವಾ ಪ್ಲಾನಿಂಗ್ : ನಿಮ್ಮ ನಿವೃತ್ತಿ ಯೋಜನೆಗಳಲ್ಲಿ ವೈದ್ಯಕೀಯ ವೆಚ್ಚಗಳು ಕೂಡ ಸೇರಿರಲಿ. ಏಕೆಂದರೆ ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ. ಹೀಗಾಗಿ ಈ ಬಗ್ಗೆ ಎಚ್ಚರ ವಹಿಸೋದು ಅಗತ್ಯ.
*ತುರ್ತು ನಿಧಿ: ಅನಿರೀಕ್ಷಿತ ವೆಚ್ಚಗಳನ್ನು ನಿರ್ವಹಿಸಲು ತುರ್ತು ನಿಧಿ ಹೊಂದಿರೋದು ಅಗತ್ಯ. ಇದ್ರಿಂದ ನೀವು ನಿಮ್ಮ ನಿವೃತ್ತಿಗಾಗಿ ಕೂಡಿಟ್ಟಿರುವ ಹಣವನ್ನು ತುರ್ತು ಸಂದರ್ಭಗಳಲ್ಲಿ ಬಳಸಬೇಕಾದ ಅಗತ್ಯವಿಲ್ಲ.
*ನಿಮ್ಮ ನಿವೃತ್ತಿ ಉಳಿತಾಯವನ್ನು ಮುಟ್ಟಬೇಡಿ: ಇತರ ವೆಚ್ಚಗಳಿಗೆ ಯಾವುದೇ ಕಾರಣಕ್ಕೂ ನಿಮ್ಮ ನಿವೃತ್ತಿ ಬದುಕಿಗಾಗಿ ಉಳಿತಾಯ ಮಾಡಿರುವ ಹಣವನ್ನು ಬಳಸಬೇಡಿ. 
*ತಜ್ಞರ ನೆರವು ಪಡೆಯಿರಿ: ಹಣ ಹಾಗೂ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿ ತಜ್ಞರ ನೆರವು ಪಡೆಯೋದು ಅಗತ್ಯ. ಒಂದು ವೇಳೆ ನಿಮ್ಮ ನಿವೃತ್ತಿ ಯೋಜನೆ ಬಗ್ಗೆ ನಿಮಗೆ ಗೊಂದಲವಿದ್ದರೆ ತಜ್ಞರನ್ನು ಸಂಪರ್ಕಿಸಿ. 


 

Latest Videos
Follow Us:
Download App:
  • android
  • ios