Asianet Suvarna News Asianet Suvarna News

ಡಿ-ಮಾರ್ಟ್‌ ಒಡೆಯ ದಮಾನಿ ಸಂಪತ್ತು ಈಗಲೂ ಏರಿಕೆ!

ಡಿ-ಮಾರ್ಟ್‌ ಒಡೆಯನ ಸಂಪತ್ತು ಈಗಲೂ ಏರಿಕೆ| ಕೊರೋನಾ ದಾಳಿಗೂ ಬಗ್ಗದ ದಮಾನಿ

Radhakishan Damani the only Indian tycoon to get richer under lockdown
Author
Bangalore, First Published Apr 9, 2020, 9:05 AM IST

ನವದೆಹಲಿ(ಏ.09):: ಕೊರೋನಾ ದಾಳಿ ಬಳಿಕ ಭಾರತದ ಬಹುತೇಕ ಶ್ರೀಮಂತರ ಆಸ್ತಿ ಮಂಜಿನಂತೆ ಕರಗಿ ಹೋಗಿದ್ದರೆ ಡಿ ಮಾರ್ಟ್‌ ಮಾಲ್‌ಗಳ ಮಾಲೀಕ ರಾಧಾಕೃಷ್ಣ ದಮಾನಿ ಅವರ ಆಸ್ತಿ ಮಾತ್ರ ದಿನೇ ದಿನೇ ಏರಿಕೆ ಕಾಣುತ್ತಲೇ ಇದೆ. ಕೊರೋನಾ ಸುಂಟರಗಾಳಿಯನ್ನೂ ಮೆಟ್ಟಿನಿಂತ ಅವರ ಈ ಸಾಹಸ ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ.

ಬ್ಲೂಂಬರ್ಗ್‌ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಟಾಪ್‌ 13ರ ಪೈಕಿ ರಾಧಾಕೃಷ್ಣ ದಮಾನಿ ಹೊರತುಪಡಿಸಿ ಉಳಿದೆಲ್ಲರ ಆಸ್ತಿಯಲ್ಲೂ ಭಾರೀ ಇಳಿಕೆಯಾಗಿದೆ. ಆದರೆ ಮತ್ತೊಂದೆಡೆ ಈ ವರ್ಷವೊಂದರಲ್ಲೇ ದಮಾನಿ ಅವರ ಆಸ್ತಿಯಲ್ಲಿ 7500 ಕೋಟಿ ರು. ನಷ್ಟುಏರಿಕೆಯಾಗಿ ಒಟ್ಟು ಆಸ್ತಿ 80000 ಕೋಟಿ ರು.ಗೆ ತಲುಪಿದೆ.

ಕಳೆದ 3 ತಿಂಗಳ ಅವಧಿಯಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿಶೇ.25ರಷ್ಟುಕುಸಿತ ಕಂಡಿದ್ದರೆ, ಇದೇ ಅವಧಿಯಲ್ಲಿ ಡಿ ಮಾರ್ಟ್‌ನ ಮಾತೃ ಸಂಸ್ಥೆಯಾದ ಅವೆನ್ಯೂ ಸೂಪರ್‌ಮಾರ್ಟ್‌ನ ಷೇರುಮೌಲ್ಯ ಶೇ.25ರಷ್ಟುಏರಿಕೆ ಕಂಡಿದೆ.

ಸಾಮಾನ್ಯ ದಿನಗಳಲ್ಲೇ ಡಿ- ಮಾರ್ಟ್‌ ಮುಂದೆ ಜನ ಸಾಲುಗಟ್ಟಿನಿಂತು ವಸ್ತುಗಳನ್ನು ಖರೀದಿಸುತ್ತಾರೆ. ಇನ್ನು ಲಾಕ್‌ಡೌನ್‌ ಅವಧಿಯಲ್ಲಂತೂ ಈ ಸರದಿ ಇನ್ನೂ ಉದ್ದವಿತ್ತು. ಹೀಗಾಗಿ ಈ ಭರ್ಜರಿ ವಹಿವಾಟು ಕಂಪನಿಯ ಷೇರು ಮೌಲ್ಯ ಏರುವಂತೆ ಮಾಡಿ, ಮಾಲೀಕರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡಿದೆ.

Follow Us:
Download App:
  • android
  • ios