ಬೆಂಗಳೂರು(ಏ.01): ಕೊರೋನಾ ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಸಹ ರಾಜ್ಯ ಸರ್ಕಾರ ಮಂಡಿಸಿರುವ 2020-21ನೇ ಸಾಲಿನ ಆಯವ್ಯಯ ಬುಧವಾರದಿಂದ ಯಥಾವತ್ತಾಗಿ ಜಾರಿಯಾಗಲಿದೆ.

ಪರಿಣಾಮ ಪ್ರಮುಖವಾಗಿ ಅಬಕಾರಿ, ಪೆಟ್ರೋಲ್‌, ಡೀಸೆಲ್‌ ಹಾಗೂ ಹೆಚ್ಚಿನ ಪ್ರಯಾಣಿಕರನ್ನು ಕೊಂಡೊಯ್ಯುವ ಒಪ್ಪಂದ ವಾಹನಗಳಿಗೆ ಮೋಟಾರು ತೆರಿಗೆ ಹೆಚ್ಚಳವಾಗಲಿದೆ.

ಪೆಟ್ರೋಲ್‌ ಮೇಲಿನ ತೆರಿಗೆ ಶೇ.32ರಿಂದ 35ಕ್ಕೆ, ಡೀಸೆಲ್‌ ಮೇಲಿನ ತೆರಿಗೆ ಶೇ.21ರಿಂದ ಶೇ. 24ಕ್ಕೆ ಏರಿಕೆಯಾಗಲಿದೆ.

ಇಂದಿನಿಂದ 2 ರೀತಿಯ ಆದಾಯ ತೆರಿಗೆ, 10 ಬ್ಯಾಂಕ್‌ಗಳು ವಿಲೀನ!

ಅದೇ ರೀತಿ ಆಸನ ಸಾಮರ್ಥ್ಯ 12ಕ್ಕಿಂತ ಹೆಚ್ಚು ಹಾಗೂ 20 ಆಸನಗಳನ್ನು ಮೀರದ ಪ್ರಯಾಣಿಕರ ಒಪ್ಪಂದ ವಾಹನಗಳಿಗೆ ಮೋಟಾರು ವಾಹನ ತೆರಿಗೆಯಲ್ಲಿ ತ್ರೈಮಾಸಿಕ ಪ್ರತಿ ಆಸನಕ್ಕೆ 900 ರು. ನಿಗದಿ ಮಾಡಲಾಗಿದೆ.

ಅಲ್ಲದೇ ಮದ್ಯದ ಎಲ್ಲ 18 ಸ್ಲಾ್ಯಬ್‌ಗಳ ಮೇಲಿನ ಹೆಚ್ಚುವರಿ ಸುಂಕದ ದರಗಳು ಹಾಲಿ ಇರುವ ದರಗಳ ಮೇಲೆ ಶೇ.6ರಷ್ಟುಹೆಚ್ಚಾಗಲಿದೆ. ಸದ್ಯಕ್ಕೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚಿರುವುದರಿಂದ ಇದರ ಬಿಸಿ ತಟ್ಟುವುದಿಲ್ಲ. ಮದ್ಯದಂಗಡಿಗಳು ತೆರೆದ ಬಳಿಕ ತೆರಿಗೆ ಏರಿಕೆ ಅನ್ವಯವಾಗಲಿದೆ.

"