Asianet Suvarna News Asianet Suvarna News

ಆಕಾಶದಿಂದ ಪಾತಾಳಕ್ಕೆ: ಈರುಳ್ಳಿ ಬೆಲೆ 25 ರೂ. ಕೆಜಿಗೆ!

ಒಂದು ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ.| ಹಠಾತ್ ಬೆಲೆ ಇಳಿಕೆ ಕಂಡು ಆಶ್ಚರ್ಯಗೊಂಡ ಜನತೆ| ಈರುಳ್ಳಿ ಮೇಲೆ ಸಬ್ಸಿಡಿ ಘೋಷಿಸಿದ ಆಂಧ್ರಪ್ರದೇಶ ಸರ್ಕಾರ|   ರೈತು ಬಜಾರ್‌ಗಳಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. | 25 ಕೋಟಿ ರೂ.ನಲ್ಲಿ 35,000 ಕ್ವಿಂಟಲ್ ಈರುಳ್ಳಿ ಖರೀದಿಸಿರುವ ಆಂಧ್ರ ಸರ್ಕಾರ| 

Onion Cost Just 25 Rupees Per KG In Andhra Pradesh
Author
Bengaluru, First Published Dec 10, 2019, 3:45 PM IST

ಅಮರಾವತಿ(ಡಿ.10): ಗಗನ ಸೀಳಿ ಬ್ರಹ್ಮಾಂಡ ತಲುಪಿದ್ದ ಈರುಳ್ಳಿ ಬೆಲೆ ಇದೀಗ ನಿಧಾನವಾಗಿ ಇಳಿಕೆಯತ್ತ ಮುಖ ಮಾಡಿದೆ. ದೇಶದ ವಿವಿಧೆಡೆ 200 ರೂ. ಗಡಿ ದಾಟಿದ್ದ ಈರುಳ್ಳಿ ಬೆಲೆ ಇದೀಗ 170 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.

ಆದರೆ ನೆರೆಯ ಆಂಧ್ರಪ್ರದೇಶದಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. ಅಂದರೆ ನಿಮಗೆ ಅಚ್ಚರಿಯಾದಿತು. ಹೌದು, ಆಂಧ್ರ ಸರ್ಕಾರ ಈರುಳ್ಳಿಗೆ ಸಬ್ಸಿಡಿ ಘೋಷಣೆ ಮಾಡಿದ್ದು, ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ,. ಆಗಿದೆ.

ಮಾರುಕಟ್ಟೆಗೆ ಹೊಸ ಈರುಳ್ಳಿ; ಬೆಲೆ ಇಳಿಕೆ!

ರಾಜ್ಯದ ರೈತು ಬಜಾರ್‌ಗಳಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. ಆಗಿದೆ. ಸಬ್ಸಿಡಿ ಆಧಾರದಲ್ಲಿ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ದೇಶಾದ್ಯಂತ ಈರುಳ್ಳಿ ಬೆಲೆ ಹೆಚ್ಚಳವಾಗಿದ್ದು, ಇದನ್ನರಿತ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಸರ್ಕಾರ ಈರುಳ್ಳಿ ಮೇಲೆ ಸಬ್ಸಿಡಿ ಘೋಷಣೆ ಮಾಡಿದೆ.

ಕೇಜಿ ಈರುಳ್ಳಿಗೆ 180 ರು.: ಸಾರ್ವಕಾಲಿಕ ದಾಖಲೆ!

ಒಟ್ಟು 25 ಕೋಟಿ ರೂ.ನಲ್ಲಿ 35,000 ಕ್ವಿಂಟಲ್ ಈರುಳ್ಳಿ ಖರೀದಿಸಿರುವ ರಾಜ್ಯ ಸರ್ಕಾರ, ಸಬ್ಸಿಡಿ ಆಧಾರದಲ್ಲಿ ಒಂದು ಕೆಜಿ ಈರುಳ್ಳಿ ಬೆಲೆಯನ್ನು ಕೇವಲ 25 ರೂ. ನಿಗದಿ ಮಾಡಿದೆ.

Follow Us:
Download App:
  • android
  • ios