ಬಳ್ಳಾರಿಯಲ್ಲಿ 13 ವರ್ಷವಾದ್ರೂ ಕಾರ್ಖಾನೆ ಸ್ಥಾಪನೆ ಮಾಡ್ತಿಲ್ಲ: ಜಮೀನು ನೀಡಲು ರೈತರು ಒಪ್ತಿಲ್ಲ..!
ಬಳ್ಳಾರಿಯಲ್ಲಿನ ಅದಿರನ್ನು ಸದ್ಭಳಕೆ ಮಾಡಲು ಸ್ಟೀಲ್ ಹಬ್ ಮಾಡಲು ದೊಡ್ಡದೊಂದು ಪ್ಲಾನ್ ಮಾಡಲಾ ಗಿತ್ತು..ಹದಿಮೂರು ಸಾವಿರ ಎಕರೆ ಭೂಮಿಯನ್ನು ವಶಪಡಿಸಕೊಂಡಿದ್ರು ಒಂದೇ ಒಂದು ಕಾರ್ಖಾನೆ ನಿರ್ಮಾಣ ಮಾಡಿಲ್ಲ. ಭೂಮಿ ನೀಡಿದ ರೈತರೀಗ ಭೂಮಿ ವಾಪಸ್ ನೀಡಿ ಇಲ್ಲವಾದ್ರೂ ಹೆಚ್ಚುವರಿ ಪರಿಹಾರ ನೀಡಿ ಎನ್ನುತ್ತಿದ್ದಾರೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ(ಅ.03): ಬಳ್ಳಾರಿಯನ್ನು ಸ್ಟೀಲ್ ಹಬ್ ಮಾಡಬೇಕು. ದೇಶದಲ್ಲಿರೋ ದೊಡ್ಡ ದೊಡ್ಡ ಸ್ಟೀಲ್ ಕಂಪನಿಗಳು ಬಳ್ಳಾರಿಯಲ್ಲಿ ಕಾರ್ಖಾನೆ ಸ್ಥಾಪನೆ ಮಾಡಬೇಕೆಂದು. 2009 ಮತ್ತು 2010ರಲ್ಲಿ 13000 ಎಕರೆ ಭೂಮಿಯನ್ನು ಸರ್ಕಾರ ಕೆಐಡಿಬಿ ಮೂಲಕ ವಶಪಡಿಸಿಕೊಂಡಿತ್ತು. ಆದ್ರೇ ಈವರೆಗೂ ಯಾವುದೇ ಒಂದು ಕಾರ್ಖಾನೆ ಸ್ಥಾಪನೆ ಮಾಡಿಲ್ಲ. ಇದೀಗ ಈ ಭೂಮಿಯನ್ನು ಮತ್ತೊಂದು ಕೆಲಸಕ್ಕೆ ಬಳಸಲು ಸರ್ಕಾರ ಮುಂದಾಗುತ್ತಿದ್ದು, ಭೂಮಿ ನೀಡಿದ ರೈತರು ಒಪ್ಪುತ್ತಿಲ್ಲ. ಅಲ್ಲದೇ ಕೊಟ್ಟಿರೋ ಪರಿಹಾರವನ್ನು ಪರಿಷ್ಕರಣೆ ಮಾಡಿ ಹೆಚ್ಚುವರಿ ಹಣ ನೀಡಿ ಎನ್ನುತ್ತಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಬ್ರಾಹ್ಮಿಣಿ, ಲಕ್ಷ್ಮೀಮಿತ್ತಲ್, ಎನ್ಎಂಡಿಸಿ ಸ್ಟೀಲ್ ಇಂಡಸ್ಟ್ರಿ ನಿರ್ಮಾಣ ಮಾಡಲು ಪ್ಲಾನ್
ಬಳ್ಳಾರಿಯಲ್ಲಿನ ಅದಿರನ್ನು ಸದ್ಭಳಕೆ ಮಾಡಲು ಸ್ಟೀಲ್ ಹಬ್ ಮಾಡಲು ದೊಡ್ಡದೊಂದು ಪ್ಲಾನ್ ಮಾಡಲಾ ಗಿತ್ತು..ಹದಿಮೂರು ಸಾವಿರ ಎಕರೆ ಭೂಮಿಯನ್ನು ವಶಪಡಿಸಕೊಂಡಿದ್ರು ಒಂದೇ ಒಂದು ಕಾರ್ಖಾನೆ ನಿರ್ಮಾಣ ಮಾಡಿಲ್ಲ. ಭೂಮಿ ನೀಡಿದ ರೈತರೀಗ ಭೂಮಿ ವಾಪಸ್ ನೀಡಿ ಇಲ್ಲವಾದ್ರೂ ಹೆಚ್ಚುವರಿ ಪರಿಹಾರ ನೀಡಿ ಎನ್ನುತ್ತಿದ್ದಾರೆ. ಹೌದು, ಬಳ್ಳಾರಿ ಹೊಸಪೇಟೆ ಮಾರ್ಗದಲ್ಲಿ ಸ್ಟೀಲ್ ಫ್ಯಾಕ್ಟ್ರಿಗಳನ್ನು ನಿರ್ಮಾಣ ಮಾಡೋ ಮೂಲಕ ಸ್ಟೀಲ್ ಹಬ್ ಮಾಡಬೇಕೆಂದು ಪ್ಲಾನ್ ಮಾಡಲಾಗಿತ್ತು. ಬ್ರಾಹ್ಮಿಣಿ, ಲಕ್ಷ್ಮೀಮಿತ್ತಲ್, ಎನ್ಎಂಡಿಸಿ ಸೆರಿದಂತೆ ಇತರೆ ಕಾರ್ಖಾನೆ ನಿರ್ಮಾಣಕ್ಕೆಂದು ಕೆಐಡಿಬಿ ಮೂಲಕ ಸ್ಥಳೀಯ ರೈತರಿಗೆ ಸೇರಿದ ಹದಿಮೂರು ಸಾವಿರ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಆದ್ರೇ ಕಾರಣಾಂತರಗಳಿಂದ ಈವರೆಗೂ ಫ್ಯಾಕ್ಟ್ರಿ ನಿರ್ಮಾಣ ಮಾಡಲಾಗಿಲ್ಲ. ಇದೀಗ ಹರಗಿನಡೋಣಿ ಗ್ರಾಮದಲ್ಲಿನ 700 ಎಕರೆ ಪ್ರದೇಶದಲ್ಲಿ ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ಮಾಡಿ ಸರ್ಕಾರ ಸಣ್ಣ ಸಣ್ಣ ಕಂಪನಿಗಳಿಗೆ ಭೂಮಿ ನೀಡಲು ಮುಂದಾಗಿದೆ. ಇದಕ್ಕೆ ಭೂಮಿ ನೀಡಿದ ರೈತರು ಒಪ್ಪುತ್ತಿಲ್ಲ ಕಾರಣ ಕಡಿಮೆ ಬೆಲೆಗೆ ರೈತರಿಂದ ಭೂಮಿ ಪಡೆದು ಸ್ಮಾಲ್ ಸ್ಕೇಲ್ ಇಂಡಸ್ಟ್ರಿಗಳಿಗೆ ಹೆಚ್ಚುವರಿ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಬಳ್ಳಾರಿ: ಎಗ್ಗಿಲ್ಲದೇ ಸಾಗಿದೆ ಅಕ್ರಮ ಮರಳು ಸಾಗಾಟ, ಕಣ್ಮುಚ್ಚಿ ಕುಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ!
ಸ್ಟೀಲ್ ಹಬ್ ಮಾಡಬೇಕೆಂದು ಕನಸು ಕಂಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ
ಹರಗಿಡೋಣಿ ವ್ಯಾಪ್ತಿಯಲ್ಲಿನ 700 ಎಕರೆ ಭೂಮಿಯನ್ನು 2009 ಮತ್ತು 2010ರಲ್ಲಿ 6ರಿಂದ 8 ಲಕ್ಷಕ್ಕೆ ವಶಪಡಿಸಿಕೊಳ್ಳಲಾಗಿತ್ತು.. ಇದೀಗ ಅದನ್ನು ಒಂದಷ್ಟು ಡೆವಲಪ್ಮೆಂಟ್ ಮಾಡೋ ಮೂಲಕ ಸ್ಮಾಲ್ ಸ್ಟೇಲ್ ಇಂಡಸ್ಟ್ರಿ ಏರಿಯಾ ಮಾಡಿ ಎಕರೆಗೆ 54 ಲಕ್ಷದಂತೆ ಸರ್ಕಾರ ಮಾರಾಟ ಮಾಡುತ್ತಿದೆಯಂತೆ. ಇದಕ್ಕೆ ರೈತರು ಒಪ್ಪತ್ತಿಲ್ಲ. ಈಗಾಗಲೇ ಪರಿಹಾರದ ಹಣದಲ್ಲಿ ಕಡಿಮೆ ಮಾಡಿದ್ದು, ಇದೀಗ ಬೇರೆ ಸಣ್ಣ ಸಣ್ಣ ಇಂಡಸ್ಟ್ರಿಗಳಿಗೆ ಕೊಟ್ರೇ, ನಮಗೆ ಕೆಲಸ ಕೂಡ ಸಿಗೋದಿಲ್ಲ. ಇದರ ಜೊತೆಗೆ ಇದೀಗ ಕೋರ್ಟ್ ನಿಗದಿ ಪಡಿಸಿದಂತೆ ನಮಗೀಗ ಹೆಚ್ಚುವರಿ ಹಣವನ್ನು ನೀಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಬಲವಂತವಾಗಿ ಇಂಡಸ್ಟ್ರಿ ಮಾಡಲು ಹೋದ್ರೇ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಗೆ ನೀಡಿದ್ದಾರೆ.
ಆರಂಭದಲ್ಲಿದ್ದ ಹುರುಪು ನಂತರ ಕ್ಷಿಣಿಸಿದ್ದರಿಂದ ಇದೀಗ ಸಮಸ್ಯೆ
ಇಷ್ಟು ದಿನ ಭೂಮಿ ಪಡೆದವರು ಕಾರ್ಖಾನೆ ನಿರ್ಮಾಣ ಮಾಡಲಿಲ್ಲ. ಇದೀಗ ಸರ್ಕಾರ ಬೇರೆ ಬೇರೆ ಸ್ಮಾಲ್ ಸ್ಟೇಲ್ ಇಂಡಸ್ಟ್ರಿ ಸ್ಥಾಪನೆಗೆ ನೀಡಲು ರೈತರು ಒಪ್ಪುತ್ತಿಲ್ಲ. ಮೊದಲು ಪರಿಹಾರದ ಹಣ ಪರಿಷ್ಟರಣೆ ಮಾಡದ ಬಳಿಕವೇ ಇಂಡಸ್ಟ್ರಿ ಸ್ಥಾಪನೆಗೆ ಬಿಡುತ್ತೇವೆ ಎನ್ನುತ್ತಿದ್ದಾರೆ. ಹೀಗಾಗಿ ಇದೊಂದು ಜಟಿಲವಾದ ಸಮಸ್ಯೆಗೆ ಕಳೆದ ಹತ್ತು ವರ್ಷದಿಂದಲೂ ಜಿಲ್ಲಾಡಳಿತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ.