Asianet Suvarna News Asianet Suvarna News

ಇನ್ಮುಂದೆ ಲೈಸೆನ್ಸ್ ಇದ್ರೆ ಈರುಳ್ಳಿ ವ್ಯವಹಾರ: ಮೈಸೂರು ಜಿಲ್ಲಾಡಳಿತ!

ದೇಶಾದ್ಯಂತ ಗಗನಕ್ಕೇರಿರುವ ಈರುಳ್ಳಿ ಬೆಲೆ| ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕ| ಕೃತಕ ಅಭಾವ ಸೃಷ್ಟಿಸಲು ಹೊರಟ ವರ್ತಕರಿಗೆ ಬಿಸಿ ಮುಟ್ಟಿಸಿದ ಮೈಸೂರು ಜಿಲ್ಲಾಡಳಿತ| ಈರುಳ್ಳಿ ಮಾರಾಟಕ್ಕೆ ಪರವಾನಗಿ ಕಡ್ಡಾಯಗೊಳಿಸಿದ ಮೈಸೂರು ಜಿಲ್ಲಾಡಳಿತ| ಈರುಳ್ಳಿ ಮಾರಾಟಕ್ಕೆ ಕರ್ನಾಟಕ ಅಗತ್ಯ ವಸ್ತುಗಳ ಪರವಾನಗಿ ಕಡ್ಡಾಯ| ಮಿತಿಗಿಂತ ಹೆಚ್ಚು ಈರುಳ್ಳಿ ದಾಸ್ತಾನಿದ್ದರೆ  ನಿರ್ದಾಕ್ಷಿಣ್ಯ ಕ್ರಮ|

Mysuru District Administration Orders Licence Compulsory To Sell Onion
Author
Bengaluru, First Published Dec 10, 2019, 8:09 PM IST

ಮೈಸೂರು(ಡಿ.10): ಈರುಳ್ಳಿ ಬೆಲೆ ಗಗನಕ್ಕೇರಿದ್ದು ಇದನ್ನೇ ಬಂಡವಾಳ ಮಾಡಿಕೊಂಡು ಕೆಲವು ವರ್ತಕರು ಕೃತಕ ಅಭಾವ ಸೃಷ್ಟಿಸಲು ಮುಂದಾಗಿದ್ದಾರೆ.

ವರ್ತಕರ ಈ ಕುತಂತ್ರ ಅರಿತ ಮೈಸೂರು ಜಿಲ್ಲಾಡಳಿತ, ಈರುಳ್ಳಿ ಮಾರಾಟಕ್ಕೆ ಪರವಾನಗಿ  ಕಡ್ಡಾಯಗೊಳಿಸಿದೆ. ಹೆಚ್ಚುವರಿಯಾಗಿ ಇರಿಸಿಕೊಂಡು ಕೃತಕ ಅಭಾವ ಸೃಷ್ಟಿಸಲು ಹೊರಟಿರುವ ವರ್ತಕರಿಗೆ ಬಿಸಿ ಮುಟ್ಟಿಸಲು ಜಿಲ್ಲಾಡಳಿತ ಸಜ್ಜಾಗಿದೆ.

ಆಕಾಶದಿಂದ ಪಾತಾಳಕ್ಕೆ: ಈರುಳ್ಳಿ ಬೆಲೆ 25 ರೂ. ಕೆಜಿಗೆ!

ಮೈಸೂರಿನ ಎಲ್ಲಾ ಈರುಳ್ಳಿ ಸಗಟು ಮಾರಾಟಗಾರರು, ಮಧ್ಯವರ್ತಿಗಳು ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಹಾಗೂ ಈರುಳ್ಳಿ ಚಿಲ್ಲರೆ ಮಾರಾಟಗಾರರು ತಮ್ಮ ತಾಲ್ಲೂಕು ತಹಶೀಲ್ದಾರರಿಂದ ಕರ್ನಾಟಕ ಅಗತ್ಯ ವಸ್ತುಗಳ ಪರವಾನಗಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಡಳಿತ ಕಟ್ಟಿನಿಟ್ಟಿನ ಆಜ್ಞೆ ಹೊರಡಿಸಿದೆ.

ಈಗಾಗಲೇ ಎಲ್ಲಾ ಮುಕ್ತ ಮಾರುಕಟ್ಟೆ ಹಾಗೂ ಸಗಟು ಗೋದಾಮಿನಲ್ಲಿ ವರ್ತಕರು ಈರುಳ್ಳಿ ದಾಸ್ತಾನಿರುವುದನ್ನು ಮಿತಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಒಂದು ವೇಳೆ ಮಿತಿಗಿಂತ ಹೆಚ್ಚು ಈರುಳ್ಳಿ ದಾಸ್ತಾನಿರುವುದು ಕಂಡುಬಂದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಮಾರುಕಟ್ಟೆಗೆ ಹೊಸ ಈರುಳ್ಳಿ; ಬೆಲೆ ಇಳಿಕೆ!

ಮುಕ್ತ ಮಾರುಕಟ್ಟೆಯಲ್ಲಿ ಸಗಟು ಮಾರಾಟಗಾರರು, ಮಧ್ಯವರ್ತಿಗಳು, ಉತ್ಪಾದಕರು 250 ಕ್ವಿಂಟಾಲ್‍ಗೂ ಹೆಚ್ಚು ದಾಸ್ತಾನು ಇರಿಸಿಕೊಳ್ಳುವಂತಿಲ್ಲ. ಚಿಲ್ಲರೆ ಮಾರಾಟಗಾರರು 50 ಕ್ವಿಂಟಾಲ್‍ಗಿಂತ ಹೆಚ್ಚು ಈರುಳ್ಳಿ ದಾಸ್ತಾನನ್ನು ಹೊಂದುವಂತಿಲ್ಲ ಎಂದು ಆದೇಶ ಹೊರಡಿಸಾಲಾಗಿದೆ.

Follow Us:
Download App:
  • android
  • ios