Asianet Suvarna News Asianet Suvarna News

ಮುಕೇಶ್‌ ಅಂಬಾನಿಯಿಂದ ಮತ್ತೊಂದು ದೈತ್ಯ ಇ-ಕಾಮರ್ಸ್ ಕಂಪನಿ

ಮುಕೇಶ್‌ ಅಂಬಾನಿಯಿಂದ ಮತ್ತೊಂದು ದೈತ್ಯ ಕಂಪನಿ | ಫ್ಲಿಪ್‌ಕಾರ್ಟ್‌, ಅಮೆಜಾನ್‌ ಜೊತೆ ಪೈಪೋಟಿ |  1.7 ಲಕ್ಷ ಕೋಟಿ ರು.ಮೊತ್ತದಲ್ಲಿ ಡಿಜಿಟಲ್‌ ಸೇವಾ ಸಂಸ್ಥೆ ಇದಾಗಿದೆ. 

Mukesh Ambani set to build E Commerce giant for India
Author
Bengaluru, First Published Oct 29, 2019, 10:22 AM IST

ಮುಂಬೈ (ಅ. 29): ಇ- ಕಾಮರ್ಸ್‌ ಕ್ಷೇತ್ರದಲ್ಲಿ ಪಾರುಪತ್ಯ ಮೆರೆಯುತ್ತಿರುವ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ಗೆ ಪೈಪೋಟಿಯಾಗಿ ಇ- ಕಾಮರ್ಸ್‌ನ ದೈತ್ಯ ಸಂಸ್ಥೆಯೊಂದನ್ನು ನಿರ್ಮಿಸಲು ಮುಂದಾಗಿರುವ ಭಾರತದ ಅಗ್ರ ಶ್ರೀಮಂತ ಮುಕೇಶ್‌ ಅಂಬಾನಿ, 1.7 ಲಕ್ಷ ಕೋಟಿ ರು.ಮೊತ್ತದಲ್ಲಿ ಡಿಜಿಟಲ್‌ ಸೇವಾ ಸಂಸ್ಥೆಯೊಂದನ್ನು ಆರಂಭಿಸುವ ಯೋಜನೆಯನ್ನು ಅನಾವರಣಗೊಳಿಸಿದ್ದಾರೆ.

ದೀಪಾವಳಿ: ಚಿನಿವಾರ ಪೇಟೆಯಲ್ಲಿ ನಿರೀಕ್ಷೆಗೂ ಮೀರಿ 30 ಟನ್ ನಷ್ಟು ಚಿನ್ನ ಮಾರಾಟ

ಈ ನಿಟ್ಟಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ತನ್ನ ಒಡೆತನದಲ್ಲಿ ಸುಮಾರು 1 ಲಕ್ಷ ಕೋಟಿ ರು. ಮೊತ್ತದ ಅಂಗಸಂಸ್ಥೆಯೊಂದನ್ನು ಸ್ಥಾಪಿಸಲಿದೆ. ಪ್ರತಿಯಾಗಿ ಈ ಸಂಸ್ಥೆ ರಿಲಯನ್ಸ್‌ ಜಿಯೊ ಇಸ್ಫೋಕಾಮ್‌ನಲ್ಲಿ ಹೂಡಿಕೆ ಮಾಡಲಿದೆ. ರಿಲಯನ್ಸ್‌ ಈಗಾಗಲೇ ಜಿಯೋ ಮೂಲಕ ಮೊಬೈಲ್‌ ನೆಟ್‌ವರ್ಕ್, ಇಂಟರ್‌ನೆಟ್‌ ಬ್ಯಾಂಡ್‌ಬ್ಯಾಂಡ್‌ ಸೇವೆಯನ್ನು ಒದಗಿಸುತ್ತಿದೆ. 

ಅಕ್ಟೋಬರ್ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios