ಭಾರತ ಕಂಡ ಸಾರ್ವಕಾಲಿಕ ಶ್ರೀಮಂತ; 100 ವರ್ಷ ಹಿಂದೆಯೇ 50 ರೋಲ್ಸ್ ರಾಯ್ಸ್ ಕಾರ್ ಹೊಂದಿದ್ದ ಇವರ ಆಸ್ತಿ ಮೌಲ್ಯ ಎಷ್ಟು?
ಶತಮಾನದ ಹಿಂದೆಯೇ 50 ರೋಲ್ಸ್ ರಾಯ್ಸ್ ಹೊಂದಿದ್ದ ಈತ ವಜ್ರವನ್ನೇ ಪೇಪರ್ ವ್ಹೈಟ್ ಆಗಿ ಬಳಸುತ್ತಿದ್ದ. ಅಷ್ಟೇ ಏಕೆ, ಆಗಲೇ ಆತನ ಒಟ್ಟಾರೆ ಆಸ್ತಿಯು ಈಗಿನ ಜಗತ್ತಿನ ಅತಿ ಶ್ರೀಮಂತನಲ್ಲಿರುವುದಕ್ವಕಿಂತ ಕೊಂಚ ಹೆಚ್ಚೇ ಇತ್ತು. ಯಾರೀತ?
ಭಾರತದ ಶ್ರೀಮಂತ ವ್ಯಕ್ತಿ ಎಂದಾಗ ಅಂಬಾನಿ, ಅದಾನಿ, ಟಾಟಾ ಬಿರ್ಲಾ ಹೆಸರುಗಳು ನೆನಪಾಗಬಹುದು. ಆದರೆ, ಇವರ್ಯಾರೂ ಸಾರ್ವಕಾಲಿಕ ಶ್ರೀಮಂತ ಭಾರತೀಯರಲ್ಲ. ಈ ಬಿರುದಿಗೆ ಪಾತ್ರರಾದವರು 1911 ರಿಂದ 1948 ರವರೆಗೆ 37 ವರ್ಷಗಳ ಕಾಲ ಆಳಿದ ಹೈದರಾಬಾದ್‌ನ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್.
ಹಣದುಬ್ಬರಕ್ಕೆ ಸರಿಹೊಂದಿಸಿದರೆ ಮೀರ್ ಉಸ್ಮಾನ್ ಅಲಿ ಖಾನ್ ಅವರ ನಿವ್ವಳ ಮೌಲ್ಯವು ಸುಮಾರು 17.47 ಲಕ್ಷ ಕೋಟಿ ರೂ. ($230 ಬಿಲಿಯನ್ ಅಥವಾ ರೂ. 1,74,79,55,15,00,000.00) ಎಂದು ಅಂದಾಜಿಸಲಾಗಿದೆ. ಇದು ಪ್ರಪಂಚದ ಪ್ರಸ್ತುತ ಶ್ರೀಮಂತ ವ್ಯಕ್ತಿ, ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬದ ನಿವ್ವಳ ಮೌಲ್ಯ($221 ಬಿಲಿಯನ್ ಎಂದು ಅಂದಾಜಿಸಲಾಗಿದೆ)ಕ್ಕೆ ಸರಿಸಮಾನವಾಗಿದೆ.
ದೀಪಿಕಾ ಪಡುಕೋಣೆ ಬಳಿ ಇರುವ 5 ಅತಿ ದುಬಾರಿ ವಸ್ತುಗಳಿವು..
ವಜ್ರದ ಗಣಿಗಳ ಮಾಲೀಕ
ಉಸ್ಮಾನ್ ಆಳ್ವಿಕೆಯಲ್ಲಿ 18ನೇ ಶತಮಾನದಲ್ಲಿ ಪ್ರಾಥಮಿಕ ವಜ್ರದ ಮೂಲವಾಗಿದ್ದ ಗೋಲ್ಕೊಂಡಾ ಗಣಿಗಳು ಹೈದರಾಬಾದ್‌ನ ನಿಜಾಮರಿಗೆ ಪ್ರಮುಖ ಆದಾಯದ ಮೂಲವಾಗಿತ್ತು. ಉಸ್ಮಾನಿಯಾ ಜನರಲ್ ಹಾಸ್ಪಿಟಲ್, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಂತಹ ಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿಯೂ ಮೀರ್ ಉಸ್ಮಾನ್ ಅಲಿ ಖಾನ್ ಅವರಿಗೆ ಸಲ್ಲುತ್ತದೆ.
ಅಸಾಮಾನ್ಯ ಅಭಿರುಚಿ
ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ ಅವರು ಜೀವನದಲ್ಲಿ ಉತ್ತಮವಾದ ವಿಷಯಗಳಿಗೆ ಅಸಾಮಾನ್ಯವಾದ ಅಭಿರುಚಿಯನ್ನು ಹೊಂದಿದ್ದರು. ಇದು ಅವರ ಶ್ರೀಮಂತ ಜೀವನಶೈಲಿಯಲ್ಲಿ ಪ್ರತಿಫಲಿಸುತ್ತದೆ. ಅವರ ಖಾಸಗಿ ಖಜಾನೆಯಲ್ಲಿ ಅಂದಾಜು ರೂ 4226 ಕೋಟಿ ಮೌಲ್ಯದ ಆಭರಣಗಳು ಮತ್ತು ಅಂದಾಜು ರೂ 1056 ಕೋಟಿ ಮೌಲ್ಯದ ಚಿನ್ನ ತುಂಬಿತ್ತು. ಅವರ ವಜ್ರಗಳ ಸಂಗ್ರಹವು ಅಸಾಧಾರಣವಾಗಿತ್ತು ಮತ್ತು ದರಿಯಾ-ಇ ನೂರ್, ನೂರ್-ಉಲ್-ಐನ್ ಡೈಮಂಡ್, ಕೊಹಿ-ನೂರ್, ಹೋಪ್ ಡೈಮಂಡ್, ಪ್ರಿನ್ಸ್ ಡೈಮಂಡ್, ರೀಜೆಂಟ್ ಡೈಮಂಡ್ ಮತ್ತು ವಿಟ್ಟೆಲ್ಸ್‌ಬಾಚ್ ಡೈಮಂಡ್‌ನಂತಹ ಪ್ರಪಂಚದ ಕೆಲವು ಪ್ರಸಿದ್ಧ ವಜ್ರಗಳು ಅವರಲ್ಲಿದ್ದವು.
ಇದ್ದ ಕೆಲಸ ಬಿಟ್ಟು 100 ಕೋಟಿ ರೂ. ಕಂಪನಿ ಕಟ್ಟಿದ 30ರ ಯುವತಿ; ತಾಯಿಯ ಮಾತೇ ಶಕ್ತಿ
ವಜ್ರವೇ ಪೇಪರ್ ವ್ಹೈಟ್
ಅವರು ಅತ್ಯಂತ ಪ್ರಸಿದ್ಧ ಆಭರಣಗಳಲ್ಲಿ ಒಂದಾದ ಜಾಕೋಬ್ ಡೈಮಂಡ್ ಅನ್ನು ಪೇಪರ್ ವೇಟ್ ಆಗಿ ಬಳಸುತ್ತಿದ್ದರು. ಮೀರ್ ಉಸ್ಮಾನ್ ಅಲಿ ಖಾನ್ ಅವರ ಔದಾರ್ಯಕ್ಕೆ ಹೆಸರುವಾಸಿಯಾಗಿದ್ದರು ಮತ್ತು ರಾಣಿ ಎಲಿಜಬೆತ್ II ರ ವಿವಾಹದ ಸಂದರ್ಭದಲ್ಲಿ ರಾಜಕುಮಾರ ಫಿಲಿಪ್ ಗೆ ಕಾರ್ಟಿಯರ್ ಡೈಮಂಡ್ ನೆಕ್ಲೇಸ್ ಮತ್ತು ಕಿರೀಟವನ್ನು ಹೂವಿನ ಬ್ರೂಚ್‌ಗಳ ಜೊತೆಗೆ ಉಡುಗೊರೆಯಾಗಿ ನೀಡಿದ್ದರು.
ಕಾರುಗಳ ಸಂಗ್ರಹ
ಮೀರ್ ಉಸ್ಮಾನ್ ಅಲಿ ಖಾನ್ ಅವರು 1912ರಲ್ಲಿ ಸ್ವಾಧೀನಪಡಿಸಿಕೊಂಡ ಅಸ್ಕರ್ ರೋಲ್ಸ್ ರಾಯ್ಸ್ ಸಿಲ್ವರ್ ಘೋಸ್ಟ್ ಸೇರಿದಂತೆ 50 ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿದ್ದರು. ಅವರು 13 ನೇ ವಯಸ್ಸಿನಿಂದ ಹೈದರಾಬಾದ್‌ನ ಕಿಂಗ್ ಕೋಥಿ ಪ್ಯಾಲೇಸ್‌ನಲ್ಲಿ ವಾಸಿಸುತ್ತಿದ್ದರು.
1967ರಲ್ಲಿ ಸಾವಿಗೀಡಾದ ಉಸ್ಮಾನ್ ಖಾನ್, ತನ್ನ ಆಳ್ವಿಕೆಯ ಉದ್ದಕ್ಕೂ, ತನ್ನ ರಾಜ್ಯದ ಅಭಿವೃದ್ಧಿಗೆ ವಿದ್ಯುತ್, ರೈಲ್ವೆ, ರಸ್ತೆಗಳು ಮತ್ತು ವಾಯುಮಾರ್ಗಗಳನ್ನು ತರಲು ಗಮನಹರಿಸಿದರು. ಜಾಮಿಯಾ ನಿಜಾಮಿಯಾ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ, ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ ಮತ್ತು ದಾರುಲ್ ಉಲೂಮ್ ದೇವಬಂದ್‌ನಂತಹ ಹಲವಾರು ಪ್ರಮುಖ ವಿಶ್ವವಿದ್ಯಾನಿಲಯಗಳಿಗೆ ಕೊಡುಗೆ ನೀಡಿದರು.