ಉಳಿತಾಯ ಹೆಚ್ಚಿಸಿಕೊಳ್ಳಲು, ತೆರಿಗೆ ತಗ್ಗಿಸಿಕೊಳ್ಳಲು ಈ 5 ಉಳಿತಾಯ ಯೋಜನೆಗಳು ಬೆಸ್ಟ್
ಕೆಲವು ಹೂಡಿಕೆ ಯೋಜನೆಗಳು ಹೂಡಿಕೆದಾರರಿಗೆ ಉಳಿತಾಯ ಹೆಚ್ಚಿಸಿಕೊಳ್ಳಲು ಹಾಗೂ ತೆರಿಗೆ ಉಳಿತಾಯ ಮಾಡಲು ನೆರವು ನೀಡುತ್ತವೆ. ಅಂಥ 5 ಯೋಜನೆಗಳ ಮಾಹಿತಿ ಇಲ್ಲಿದೆ.
Business Desk:ಭಾರತದಲ್ಲಿ ಅನೇಕ ಉಳಿತಾಯ ಹಾಗೂ ಹೂಡಿಕೆ ಯೋಜನೆಗಳಿದ್ದು, ಜನರಿಗೆ ತಮ್ಮ ಹಣಕಾಸಿನ ಗುರಿಗಳನ್ನು ತಲುಪಲು ನೆರವು ನೀಡುತ್ತಿವೆ. ಅಲ್ಲದೆ, ಕೆಲವು ಯೋಜನೆಗಳಿಂದ ತೆರಿಗೆ ಪ್ರಯೋಜನ ಕೂಡ ಸಿಗುತ್ತದೆ. ಈ ತೆರಿಗೆ ಪ್ರಯೋಜನಗಳು ಹೂಡಿಕೆದಾರರಿಗೆ ತೆರಿಗೆ ಮೇಲಿನ ಹಣ ಉಳಿತಾಯಕ್ಕೆ ನೆರವು ನೀಡುವ ಮೂಲಕ ಅವರ ಒಟ್ಟು ತೆರಿಗೆ ರಿಟರ್ನ್ಸ್ ಹೆಚ್ಚಿಸುತ್ತವೆ ಕೂಡ. ಆದಾಯದಲ್ಲಿ ಒಂದಿಷ್ಟು ಭಾಗವನ್ನು ಉಳಿತಾಯ ಅಥವಾ ಹೂಡಿಕೆ ಮಾಡೋದು ಅಗತ್ಯ. ಇದ್ರಿಂದ ಭವಿಷ್ಯದಲ್ಲಿನ ಸಮಸ್ಯೆಗಳನ್ನು ಎದುರಿಸಲು ನೆರವು ಸಿಗುತ್ತದೆ. ಇನ್ನು ನಿವೃತ್ತಿ ಬಳಿಕದ ಬದುಕಿಗೆ ಕೂಡ ಒಂದಿಷ್ಟು ಉಳಿತಾಯ ಮಾಡಲು ಇಂಥ ಯೋಜನೆಗಳಲ್ಲಿ ಹೂಡಿಕೆ ಮಾಡೋದು ಅಗತ್ಯ. ಹೀಗಾಗಿ ಹೂಡಿಕೆ ಅಥವಾ ಉಳಿತಾಯ ಮಾಡುವ ಮುನ್ನ ಅವುಗಳಿಂದ ಸಿಗುವ ತೆರಿಗೆ ಪ್ರಯೋಜನಗಳ ಬಗ್ಗೆ ಮಾಹಿತಿ ಹೊಂದಿರೋದು ಕೂಡ ಅಗತ್ಯ. ಹಾಗಾದ್ರೆ ತೆರಿಗೆ ತಗ್ಗಿಸಿ, ಉಳಿತಾಯ ಹೆಚ್ಚಿಸಿಕೊಳ್ಳಲು ನೆರವು ನೀಡುವ ಯೋಜನೆಗಳು ಯಾವುವು? ಇಲ್ಲಿದೆ ಮಾಹಿತಿ.
1.ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್): ಪಿಪಿಎಫ್ ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಕೇಂದ್ರ ಸರ್ಕಾರ ಬೆಂಬಲಿತ ಪಿಪಿಎಫ್ ಖಾತೆಯಲ್ಲಿ ವಾರ್ಷಿಕ ಗರಿಷ್ಠ 1,50,000 ರೂ. ಠೇವಣಿ ಇಡಬಹುದು . ಪ್ರಸ್ತುತ ಪಿಪಿಎಫ್ ಖಾತೆಯಲ್ಲಿರೋ ಮೊತ್ತಕ್ಕೆ ವಾರ್ಷಿಕ ಶೇ.7.1 ಬಡ್ಡಿ ನೀಡಲಾಗುತ್ತಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿರುವ ಹಣಕ್ಕೆ ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿದೆ.ಹಾಗೆಯೇ ಈ ಖಾತೆಯಲ್ಲಿರುವ ಹಣಕ್ಕೆ ಗಳಿಸಿದ ಬಡ್ಡಿ ಮೇಲೆಯೂ ಯಾವುದೇ ತೆರಿಗೆ ಇಲ್ಲ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರನಾ; ಸುಕನ್ಯಾ ಸಮೃದ್ಧಿ ಯೋಜನೆನಾ: ಮಹಿಳೆಯರಿಗೆ ಉತ್ತಮ ಆಯ್ಕೆ ಯಾವ್ದು ನೋಡಿ..
2.ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್ ): ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್ )ಕೇಂದ್ರ ಸರ್ಕಾರ ಬೆಂಬಲಿತ ಪಿಂಚಣಿ ಯೋಜನೆಯಾಗಿದೆ. ಎನ್ ಪಿಎಸ್ ಸೆಕ್ಷನ್ 80CCD (1) ಹಾಗೂ 80CCD (2) ಅಡಿಯಲ್ಲಿ 2ಲಕ್ಷ ರೂ. ತನಕ ಒಟ್ಟು ತೆರಿಗೆ ವಿನಾಯ್ತಿ ಸಿಗುತ್ತದೆ.ಎನ್ ಪಿಎಸ್ ನಲ್ಲಿ ಯಾವುದೇ ಭಾರತೀಯ ನಾಗರಿಕ ಹೂಡಿಕೆ ಮಾಡಬಹುದು. 18-60 ವಯಸ್ಸಿನ ನಡುವಿನ ಯಾವುದೇ ವ್ಯಕ್ತಿ ಸ್ವಉದ್ಯೋಗಿ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಈ ಮೂಲಕ ಹೂಡಿಕೆದಾರನ ತೆರಿಗೆ ಭಾರ ತಗ್ಗಿಸಿಕೊಳ್ಳಲು ನೆರವು ನೀಡುತ್ತವೆ.
3.ಈಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆ (ಇಎಲ್ ಎಸ್ ಎಸ್ ): ಇಎಲ್ ಎಸ್ ಎಸ್ ಒಂದು ಮಾದರಿಯ ಮ್ಯೂಚುವಲ್ ಫಂಡ್ ಆಗಿದ್ದು, ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲು ನೆರವು ನೀಡುತ್ತದೆ. ಇಎಲ್ ಎಸ್ ಎಸ್ ನಲ್ಲಿ ಹೂಡಿಕೆ ಮಾಡಿದ ಹಣ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತದ ಪ್ರಯೋಜನ ಪಡೆಯಲು ಅರ್ಹವಾಗಿದೆ. ಇನ್ನು ಇಎಲ್ ಎಸ್ ಎಸ್ ಹೂಡಿಕೆಗಳಿಂದ ಗಳಿಸಿದ ಬಂಡವಾಳದ ಗಳಿಕೆ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದು ಇತರ ದೀರ್ಘಾವಧಿ ಹೂಡಿಕೆಗಳ ಗಳಿಕೆ ಮೇಲಿನ ತೆರಿಗೆಗೆ ಹೋಲಿಸಿದರೆ ಕಡಿಮೆ.
14 ವರ್ಷಗಳ ಹಿಂದೆ ಈ ಸ್ಟಾಕ್‌ನಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ ನಿಮ್ಮ ಬಳಿ ಈಗ 1.36 ಕೋಟಿ ರೂ. ಇರ್ತಿತ್ತು!
4.ಜೀವ ವಿಮೆ: ಜೀವ ವಿಮೆ ಪ್ರೀಮಿಯಂಗಳು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತದ ಪ್ರಯೋಜನಗಳನ್ನು ಪಡೆಯಲು ಅರ್ಹವಾಗಿವೆ. ಇನ್ನು ಜೀವ ವಿಮೆ ಪಾಲಿಸಿಗಳಿಂದ ಪಡೆದ ಮೃತ್ಯು ಬಳಿಕದ ಪ್ರಯೋಜನಗಳು ಕೂಡ ತೆರಿಗೆ ಮುಕ್ತವಾಗಿವೆ.
5.ಗೃಹಸಾಲ ಬಡ್ಡಿ: ಗೃಹಸಾಲಗಳ ಮೇಲೆ ಪಾವತಿಸಿದ ಬಡ್ಡಿ ಕೂಡ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 24 ಅಡಿಯಲ್ಲಿ ತೆರಿಗೆ ಕಡಿತದ ಪ್ರಯೋಜನಗಳನ್ನು ಪಡೆಯಲು ಅರ್ಹವಾಗಿವೆ. ಗೃಹಸಾಲ ಪಡೆದ ವ್ಯಕ್ತಿಯೇ ನೆಲೆಸಿರುವ ಆಸ್ತಿಗೆ 2ಲಕ್ಷ ರೂ. ತನಕ ವಾರ್ಷಿಕ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಇನ್ನು ಬಾಡಿಗೆ ನೀಡಿರುವ ಆಸ್ತಿಯಾದ್ರೆ 30,000ರೂ. ತನಕ ತೆರಿಗೆ ಪ್ರಯೋಜನ ಪಡೆಯಬಹುದು.