ಮನೆ ಲೀಸ್ ಮುಗಿದ ಮೇಲೆ ಏನ್ ಮಾಡ್ಬೇಕು? ಫ್ಲಾಟ್ ಖರೀದಿಗೂ ಮುನ್ನ ಇವೆಲ್ಲ ತಿಳಿದಿರಲಿ
ಮನೆ ಖರೀದಿ ಸುಲಭದ ಮಾತಲ್ಲ. ನಗರದಲ್ಲಿ ಫ್ಲಾಟ್ ಖರೀದಿಗೆ ಮುನ್ನ ಅದರ ನಿಯಮ ಗೊತ್ತಿರಬೇಕು. ಅದರಲ್ಲೂ ಗುತ್ತಿಗೆ ಮನೆ ಪಡೆಯುವ ಜನರು, ಗುತ್ತಿಗೆ ಮುಗಿದ ಮೇಲೆ ಏನು ಮಾಡ್ಬೇಕು ಎಂಬುದನ್ನು ತಿಳಿದಿರಬೇಕು.
ಸ್ವಂತಕ್ಕೊಂದು ಸೂರು ಬೇಕು, ಇದು ಪ್ರತಿಯೊಬ್ಬನ ಆಸೆ. ಪಟ್ಟಣಕ್ಕೆ ಕೆಲಸ ಅರಸಿ ಬರುವ ಜನರು, ಅಲ್ಲೇ ಒಂದು ಮನೆ ಖರೀದಿಗೆ ಮುಂದಾಗುತ್ತಾರೆ. ಸ್ವಂತ ಮನೆ ಖರೀದಿ ಮಾಡೋದು ಸುಲಭದ ಕೆಲಸವಲ್ಲ. ಮನೆಯನ್ನು ನೀವು ಎರಡು ರೀತಿಯಲ್ಲಿ ಖರೀದಿ ಮಾಡಬಹುದು. ಒಂದು ಫ್ರೀ ಹೋಲ್ಡ್ (Free hold) ಆದ್ರೆ ಇನ್ನೊಂದು ಗುತ್ತಿಗೆ (Lease). ಸಾಲ ಮಾಡಿ, ಫ್ರೀ ಹೋಲ್ಡ್ ಮನೆ ಸಾಧ್ಯವಿಲ್ಲ ಎನ್ನುವವರು 99 ವರ್ಷದ ಗುತ್ತಿಗೆಗೆ ಮನೆ ಪಡೆಯುತ್ತಾರೆ. 99 ವರ್ಷದ ಗುತ್ತಿಗೆ ಮುಗಿದ ನಂತ್ರ, ಆ ಮನೆಯನ್ನು ನಾವು ಬಿಡಬೇಕಾ? ಆ ಮನೆಯನ್ನು ಏನು ಮಾಡ್ಬೇಕು ಎನ್ನುವ ಪ್ರಶ್ನೆ ಉದ್ಭವಿಸೋದು ಸಹಜ. ನಾವಿಂದು 99 ವರ್ಷಗಳ ಗುತ್ತಿಗೆ ಮುಗಿದ ಮೇಲೆ ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.
ಮೊದಲು ಗುತ್ತಿಗೆ ಮನೆ ಹಾಗೂ ಫ್ರೀ ಹೋಲ್ಡ್ ಮನೆಗಳ ವ್ಯತ್ಯಾಸ ತಿಳಿದುಕೊಳ್ಳಿ. ಫ್ರೀ ಹೋಲ್ಡ್ ಮನೆ ಅಂದ್ರೆ ನೀವು ಖರೀದಿಸಿದ ಮನೆ ಅಥವಾ ಭೂಮಿ ಮೇಲೆ ನಿಮಗೆ ಸಂಪೂರ್ಣ ಅಧಿಕಾರವಿರುತ್ತದೆ. ಅದರ ಮಾಲೀಕತ್ವ (ownership) ನಿಮ್ಮ ಕೈನಲ್ಲಿರುತ್ತದೆ. ಆ ಆಸ್ತಿಯನ್ನು ಮಾರಾಟ (Property Sale) ಮಾಡುವ ಇಲ್ಲವೆ ಬೇರೆಯವರಿಗೆ ದಾನ ನೀಡುವ ಹಕ್ಕು ನಿಮಗಿರುತ್ತದೆ. ಬೇರೆ ಯಾವುದೇ ವ್ಯಕ್ತಿಗೆ ಇದ್ರ ಮೇಲೆ ಹಕ್ಕಿಲ್ಲ.
ಅದೇ ಗುತ್ತಿಗೆ ಮನೆ ನಿಯಮ ಭಿನ್ನವಾಗಿದೆ. ನಿಗದಿತ ಸಮಯದ ಚೌಕಟ್ಟಿನಲ್ಲಿ ನೀವು ಗುತ್ತಿಗೆ ಮನೆಯನ್ನು ಖರೀದಿ ಮಾಡಬೇಕು. ಸಾಮಾನ್ಯವಾಗಿ ದೊಡ್ಡ ನಗರಗಳಲ್ಲಿ 99 ವರ್ಷಗಳ ಅವಧಿಗೆ ಮನೆಗಳನ್ನು ಗುತ್ತಿಗೆ ನೀಡಲಾಗುತ್ತದೆ. ಅಂದ್ರೆ ನೀವು, 99 ವರ್ಷಗಳವರೆಗೆ ಈ ಮನೆಯ ಮಾಲೀಕರಾಗಿರ್ತೀರಿ. ಶಾಶ್ವತವಾಗಿ ಅಲ್ಲ ಎಂಬುದನ್ನು ನೆನಪಿಡಬೇಕು.
ನಿಮ್ಮ ಬಳಿ ಈ ಎಲ್ಲ ವಸ್ತು ಇದ್ಯಾ? ಈಗ್ಲೇ ರೇಷನ್ ಕಾರ್ಡ್ ಸರೆಂಡರ್ ಮಾಡಿ
ಗುತ್ತಿಗೆ ಅವಧಿ ಮುಗಿದ ಮೇಲೆ ಏನು ಮಾಡಬೇಕು? : 99 ವರ್ಷಗಳ ಗುತ್ತಿಗೆ ಮನೆಯಲ್ಲಿ ನೀವು ವಾಸವಾಗಿದ್ದು, ಅದರ ಅವಧಿ ಮುಗಿಯುತ್ತಿದೆ ಎಂದಾಗ, ನಿಮಗೆ ಎರಡು ಆಯ್ಕೆಗಳು ಸಿಗುತ್ತವೆ.
1. ಗುತ್ತಿಗೆ ನವೀಕರಣ : ಗುತ್ತಿಗೆ ಪಡೆದ ಮನೆಯಲ್ಲಿಯೇ ನೀವು ವಾಸ ಮುಂದುವರಿಸಬೇಕು ಎಂದಾದರೆ ನೀವು, ಗುತ್ತಿಗೆ ಅವಧಿಯನ್ನು ನವೀಕರಿಸಬೇಕು. ಇದಕ್ಕೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕು. ಗುತ್ತಿಗೆಯ ಹೊಸ ನಿಯಮದೊಂದಿಗೆ ನವೀಕರಿಸಬೇಕು.
2. ಮೂಲ ಮಾಲೀಕರಿಗೆ ಆಸ್ತಿ ಹಿಂತಿರುಗಿಸುವುದು : ಗುತ್ತಿಗೆ ನವೀಕರಣ ಮಾಡಲು ಬಯಸದ ಜನರು, ಮೂಲ ಮಾಲೀಕನಿಗೆ ಮನೆಯನ್ನು ಹಿಂತಿರುಗಿಸಬೇಕಾಗುತ್ತದೆ.
ಗುತ್ತಿಗೆ ಮನೆಯನ್ನು ಫ್ರೀ ಹೋಲ್ಡ್ ಆಗಿ ಬದಲಿಸುವುದು ಹೇಗೆ? : ನೀವು ಮನೆಯನ್ನು ಗುತ್ತಿಗೆ ಪಡೆದಿದ್ದು, ಅದನ್ನು ಫ್ರೀ ಹೋಲ್ಡ್ ಮನೆಯಾಗಿ ಪರಿವರ್ತಿಸಲು ಬಯಸಿದ್ದರೆ, ಅದಕ್ಕೂ ಅವಕಾಶವಿದೆ. ನಿಮ್ಮ ಮುಂದೆ ಎರಡು ರೀತಿಯ ಆಯ್ಕೆಗಳಿವೆ.
1. ಬಿಲ್ಡರ್ ಆಯ್ಕೆ : ಒಂದು ವೇಳೆ ಬಿಲ್ಡರ್ ಈ ಆಸ್ತಿಯ ಸಂಪೂರ್ಣ ಮಾಲೀಕತ್ವ ಹೊಂದಿದ್ದು, ಆತ ಅದನ್ನು ಫ್ರೀ ಹೋಲ್ಡ್ ಆಗಿ ಪರಿವರ್ತಿಸಲು ಬಯಸಿದ್ರೆ ನೀವು ಗುತ್ತಿಗೆ ಮನೆಯನ್ನು ಫ್ರೀ ಹೋಲ್ಡ್ ಮನೆಯಾಗಿ ಬದಲಿಸಿಕೊಳ್ಳಬಹುದು. ಇದಕ್ಕೆ ನಿಗದಿತ ಶುಲ್ಕವನ್ನು ಪಾವತಿಸಬೇಕು.
2. ಸರ್ಕಾರದ ಆಯ್ಕೆ : ಕೆಲ ರಾಜ್ಯ ಸರ್ಕಾರ, ಗುತ್ತಿಗೆ ಆಸ್ತಿಯನ್ನು ಫ್ರೀಹೋಲ್ಡ್ ಆಗಿ ಪರಿವರ್ತಿಸಲು ಅವಕಾಶ ನೀಡುತ್ತವೆ. ಇಲ್ಲೂ ನೀವು ನಿಗದಿತ ಶುಲ್ಕವನ್ನು ಪಾವತಿಸಬೇಕು.
ಈ ₹1 ರೂಪಾಯಿ ಹಳೆಯ ನೋಟು ನಿಮ್ಮತ್ರ ಇದ್ರೆ ಲಕ್ಷಾಧಿಪತಿ ಆಗೋದು ಗ್ಯಾರಂಟಿ: ಹೇಗೆ ಗೊತ್ತಾ?
ಗುತ್ತಿಗೆ ಮನೆ ಮಾರಾಟ : ನೀವು ಗುತ್ತಿಗೆ ಪಡೆದ ಮನೆಯನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ನೀವು ಆ ಮನೆಯ ಗುತ್ತಿಗೆಯನ್ನು ಬೇರೆಯವರಿಗೆ ಹಸ್ತಾಂತರಿಸಬಹುದು. ಅದೂ ಗುತ್ತಿಗೆ ಮುಗಿಯುವ ಮೊದಲೇ ನಡೆಯಬೇಕು. ಒಂದ್ವೇಳೆ ಗುತ್ತಿಗೆ ಮುಗಿಯುವ ಮುನ್ನ ಕಟ್ಟಡ ಕುಸಿದರೆ, ಮಾಲೀಕ, ಮನೆ ಇರುವ ಜಾಗವನ್ನು ಗುತ್ತಿಗೆದಾರರಿಗೆ ಹಂಚುತ್ತಾನೆ. ನಿಮಗೆ ಭೂಮಿಯ ಕೆಲ ಭಾಗ ಸಿಗುತ್ತದೆಯೇ ವಿನಃ ಸಂಪೂರ್ಣ ಕಟ್ಟಡವಲ್ಲ.