ಬೆಂಗಳೂರು [ಮಾ.05]: ಕರ್ನಾಟಕ ಬಜೆಟ್ 2020ಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೀನುಗಾರ ಸಮುದಾಯಕ್ಕೆ ಈ ಬಾರಿ ಬಂಪರ್ ಕೊಡುಗೆ ನೀಡಿದ್ದಾರೆ. 

ರಾಜ್ಯದ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನ ವಿತರಣೆ ಮಾಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.  ಮಹಿಳಾ ಮೀನುಗಾರರ ಸಬಲೀಕರಣಕ್ಕಾಗಿ ಹೊಸ ಯೋಜನೆ ರೂಪಿಸಲಾಗಿದೆ. 

ಮೀನು ಇಳಿದಾಣದಿಂದ ಮಾರುಕಟ್ಟೆಗೆ ಮೀನು ತೆಗೆದುಕೊಂಡು ಹೋಗಲು ಅನುಕೂಲತೆ ಒದಗಿಸುವ ನಿಟ್ಟಿನಲ್ಲಿ ದ್ವಿ೮ಚಕ್ರ ವಾಹನ ನೀಡಲಾಗುತ್ತಿದೆ.  ಇನ್ನು  ಮಹಿಳೆಯರಿಗೆ ಬೈಕ್ ವಿತರಣೆ ಮಾಡಲು 5 ಕೋಟಿ ರು. ಮೀಸಲಿಡಲಾಗಿದೆ. 

ಕರ್ನಾಟಕ ಬಜೆಟ್ ಬಗೆಗಿನ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ

ಇನ್ನು ಮತ್ಸ್ಯ ವಿಕಾಸ ಯೋಜನೆ ಹಾರಿ ಮಾಡಲಾಗುತ್ತಿದ್ದು, ಈ ಯೋಜನೆಗಾಗಿ 1.5 ಕೋಟಿ ರು. ಮೀಸಲಿಡಲಾಗುತ್ತಿದೆ. ಮೀನುಗಾರಿಕೆಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಲು ಮತ್ಸ್ಯ ವಿಕಾಸ ಯೋಜನೆ ಅನುಕೂಲವಾಗಲಿದೆ. 

ಭಾವನೆಗಳಿಗೆ BSY ಸ್ಪಂದನೆ: 'ಯಡಿಯೂರಪ್ಪಗೆ ಮಹದಾಯಿ ಹೋರಾಟಗಾರರಿಂದ ಅಭಿನಂದನೆ'...

ಬಂದರು ಅಭಿವೃದ್ಧಿಗೆ ಕ್ರಮ :  ಇನ್ನು ಮರವಂತೆ ಬಂದರು ಅಭಿವೃದ್ಧಿಗೂ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ಇಲ್ಲಿ ಹೊಸ ಬಂದರು ನಿರ್ಮಾಣ ಮಾಡಲು 2ನೇ ಹಂತದ ಕಾಮಗಾರಿಗಾಗಿ 5 ಕೋಟಿ ರು. ನೆರವು ನೀಡಲಾಗುತ್ತಿದೆ. ಇನ್ನು ಕೊಡೇರಿ ಮೀನುಗಾರಿಕಾ ಬಂದರು ಅಭಿವೃದ್ಧಿಗೆ 2 ಕೋಟಿ ರು. ನೀಡಲಾಗುತ್ತಿದೆ.