Asianet Suvarna News Asianet Suvarna News

ಪೋಸ್ಟ್ ಆಫೀಸ್ ತಿಂಗಳ ಉಳಿತಾಯ ಸ್ಕೀಮ್ 10 ಪಾಯಿಂಟ್ಸ್ ಗೊತ್ತಿರ್ಬೇಕು

ಇಂಡಿಯನ್ ಪೋಸ್ಟ್ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯೊಂದನ್ನು ಕೊಡಮಾಡಿದೆ. ತಿಂಗಳ ಉಳಿತಾಯ ಸ್ಕೀಮ್ ಒಂದನ್ನು ಪರಿಚಯಿಸಿದೆ. 

Indian Post Office Monthly Income Scheme Account 10 Things To Know
Author
Bengaluru, First Published Mar 4, 2019, 6:54 PM IST

ನವದೆಹಲಿ[ ಮಾ. 04] ಭಾರತೀಯ ಅಂಚೆ ಸದಾ ಗ್ರಾಹಕರ ಹಿತವನ್ನೇ ಕಾಪಾಡಿಕೊಂಡು ಬಂದಿದೆ. ಇದೀಗ ತಿಂಗಳ ಉಳಿತಾಯ ಯೋಜನೆ ಪ್ರಕಟ ಮಾಡಿದ್ದು ಎಲ್ಲರೂ ಲಾಭ ಪಡೆದುಕೊಳ್ಳಬಹುದು.

ಹಾಗಾದರೆ ಹೊಸ ಯೋಜನೆಯ ವಿವರಗಳು ಏನು? ಎಷ್ಟು ಹಣ ಇಡಬೇಕು? ಎಂಬ ಎಲ್ಲ ಮಾಹಿತಿ ಇಲ್ಲಿದೆ.

1. ಖಾತೆ ತೆರೆಯುವುದು ಹೇಗೆ? ಚೆಕ್ ಅಥವಾ ನಗದು ಬಳಸಿ ಪೋಸ್ಟ್ ಆಫೀಸ್ ತಿಂಗಳ ಉಳಿತಾಯ ಯೋಜನೆ ಖಾತೆ ತೆರೆಯಬಹುದು.

2. ಬಡ್ಡಿ ದರ ಎಷ್ಟು?:  ವಾರ್ಷಿಕವಾಗಿ ಶೇ. 7.7 ಬಡ್ಡಿ ದರ ನಿಗದಿ ಮಾಡಲಾಗಿತ್ತು ಮಾಸಿಕವಾಗಿ ಪಾವತಿ ಮಾಡಲಾಗುತ್ತದೆ.

3. ಕನಿಷ್ಠ ಎಷ್ಟು ಹಣ ಹೂಡಿಕೆ ಮಾಡಬೇಕು?  ಖಾತೆ ತೆರೆಯಲು ಕನಿಷ್ಠ 1500 ರೂ. ಹೂಡಿಕೆ ಮಾಡಬೇಕು

4. ಗರಿಷ್ಠ ಎಷ್ಟು?  ಅತಿ ಹೆಚ್ಚು ಅಂದರೆ 4.5 ಲಕ್ಷ ರೂ. ಸಿಂಗಲ್ ಖಾತೆಯಲ್ಲಿ, 9 ಲಕ್ಚ ರೂ. ಜಾಯಿಂಟ್ ಖಾತೆಯಲ್ಲಿ ಹೂಡಿಕೆ ಮಾಡಬಹುದು.

5. ಮ್ಯಾಚುರಿಟಿ ಅವಧಿ?  ಪೋಸ್ಟ್ ಬ್ಯಾಂಕ್ ಉಳಿತಾಯ ಯೋಜನೆ ಮ್ಯಾಚುರಿಟಿ ಅವಧಿ 5  ವರ್ಷ

6. ಯಾರು ನಿರ್ವಹಿಸನಹುದು? ಮೈನರ್ ಹೆಸರಿನಲ್ಲಿಯೂ ಖಾತೆ ತೆರೆಯಬಹುದು. ಹತ್ತು ವರ್ಷ ಮೇಲ್ಪಟ್ಟವರು ಖಾತೆಯನ್ನು ಸ್ವತಂತ್ರವಾಗಿ ನಿರ್ವಹಿಸಬಹುದು.

7. ಜಾಯಿಂಟ್ ಖಾತೆ:  ಎರಡು ಅಥವಾ ಮೂರು ಜನ ಸೇರಿ ಜಾಯಿಂಟ್ ಖಾತೆ ತೆರೆಯಬಹುದು. ಸಿಂಗಲ್ ಅಕೌಂಟ್ ಗಳನ್ನು ಜಾಯಿಂಟ್ ಖಾತೆಯಾಗಿ ಬದಲಾಯಿಸಲು ಅವಕಾಶ ಇದೆ

8. ವರ್ಗಾವಣೆ ಬಹು ಸುಲಭ?  ಯಾವ ಅಂಚೆ ಕಚೇರಿಯಿಂದ ಯಾವ ಅಂಚೆ ಕಚೇರಿಗೆ ಬೇಕಾದರೂ ಖಾತೆ ವರ್ಗಾವಣೆ ಮಾಡಿಕೊಳ್ಳಬಹುದು. ಅಲ್ಲದೇ ಎಷ್ಟು  ಖಾತೆ ಬೇಕಾದರೂ ತೆರೆಯಬಹುದು. ಆದರೆ ಎಲ್ಲ ಖಾತೆಗಳ ಒಟ್ಟು ಮೌಲ್ಯ ಗರಿಷ್ಠ ಮಿತಿ ಮೀರುವಂತೆ ಇಲ್ಲ.

9. ವಿತ್ ಡ್ರಾ ಮಾಹಿತಿ?  ಖಾತೆ ತೆರೆದು ಒಂದು ವರ್ಷದ ನಂತರ ಹಣ ವಿತ್ ಡ್ರಾ ಮಾಡಿಕೊಳ್ಳಬಹುದು. ಆದರೆ ಮೂರು ವರ್ಷಕ್ಕೆ ಮುನ್ನ ವಿತ್ ಡ್ರಾ ಮಾಡಿದರೆ ಶೇ. 2, ಮೂರು ವರ್ಷದ ನಂತರ ಮಾಡಿದರೆ ಡಿಪಾಸಿಟ್ ಒಟ್ಟು ಮೌಲ್ಯದಲ್ಲಿ ಶೇ. 1 ರಷ್ಟನ್ನು ಡಿಸ್ಕೌಂಟದ ರೂಪದಲ್ಲಿ ಬಿಟ್ಟುಕೊಡಬೇಕಾಗುತ್ತದೆ.

10. ಇತರೆ ಮಾಹಿತಿ:  ಖಾತೆ ತೆರೆಯುವ ಸಂದರ್ಭ ನಾಮಿನಿ ಹೆಸರು ದಾಖಲಿಸಲು ಅವಕಾಶ ಇದೆ

Follow Us:
Download App:
  • android
  • ios