Asianet Suvarna News Asianet Suvarna News

ಆರೋಗ್ಯ, ವಾಹನ ವಿಮೆ ಕಂತು ಪಾವತಿ ಅವಧಿ ವಿಸ್ತರಿಸಿದ ಸರ್ಕಾರ..!

ಕೊರೋನಾ ಎಫೆಕ್ಟ್‌ನಿಂದಾಗಿ ಹಲವಾರು ಜನೋಪಯೋಗಿ ಯೋಜನೆಗಳನ್ನು ಘೋಷಿಸಿರುವ ಸರ್ಕಾರ ಇದೀಗ ಆರೋಗ್ಯ ಹಾಗೂ ವಾಹನ ವಿಮೆ ಕಂತು ಕಟ್ಟುವ ದಿನಾಂಕವನ್ನು ವಿಸ್ತರಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.

Govt relaxes dates to pay health and Motor insurance premiums
Author
New Delhi, First Published Apr 4, 2020, 8:03 AM IST

ನವದೆಹಲಿ(ಏ.04): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾ.25ರಿಂದ ಏ.4ರ ವರೆಗಿನ ಅವಧಿಯಲ್ಲಿ ಕಟ್ಟಬೇಕಿರುವ ಆರೋಗ್ಯ ಮತ್ತು ವಾಹನ ವಿಮೆ ಕಂತುಗಳ ಪಾವತಿಯನ್ನು ಮಾ.21ರ ವರೆಗೆ ವಿಸ್ತರಣೆ ಮಾಡಿ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. 

ಇಎಂಐ ಪಾವತಿ 3 ತಿಂಗಳು ಮುಂದೂಡಿಕೆ; ಈ ಅವಧಿಗೂ ಬಡ್ಡಿ ಉಂಟು!

ಸಾಮಾನ್ಯವಾಗಿ ವಿಮೆ ನವೀಕರಿಸಬೇಕಾದ ದಿನಾಂಕದಂದು ಕಂತು ಪಾವತಿಸಲು ವಿಫಲವಾದರೆ, ಹೆಚ್ಚುವರಿ ಅವಧಿ ನೀಡಲಾಗುತ್ತದೆ. ಆದರೆ, ಈ ಅವಧಿಯಲ್ಲಿ ವೈದ್ಯಕೀಯ ಅಥವಾ ಆಕ್ಸಿಡೆಂಡ್‌ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ವಾಹನ ವಿಮೆ ಆಗಿದ್ದರೆ ನಿಗದಿತ ಸಮಯದಲ್ಲಿ ಕಂತು ಪಾವತಿಸದೇ ಇದ್ದರೆ ವಿಮೆ ನಿಷ್ಕ್ರಿಯಗೊಳ್ಳುತ್ತದೆ. ಒಂದು ವೇಳೆ ಅಪಘಾತವೇನಾದರೂ ಸಂಭವಿಸಿದರೆ ಅದಕ್ಕೆ ವಾಹನ ಮಾಲೀಕರೇ ಹೊಣೆ ಆಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆರೋಗ್ಯ ಮತ್ತು ವಾಹನ ವಿಮೆ ಕಂತುಗಳ ಪಾವತಿ ಅವಧಿಯನ್ನು ಏ.21ರ ವರೆಗೆ ವಿಸ್ತರಿಸಿದೆ.

ಲಾಕ್‌ಡೌನ್‌: ರೋಗಿಗಳ ಪರದಾಟ, ಜನತೆಗೆ ಕೇಂದ್ರ ಸಚಿವ ಜೋಶಿ ಉಚಿತ ಕ್ಯಾಬ್‌ ಸೌಲಭ್ಯ

ಈ ಹಿಂದೆ ಕೊರೋನಾ ವೈರಸ್ ತೊಂದರೆಯಿಂದಾಗಿ EMI ಕಂತು ಕಟ್ಟಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ರಿಸರ್ವ್ ಬ್ಯಾಂಕ್ ಇಎಂಐ ಪಾವತಿ ಸಮಯವನ್ನು ಮೂರು ತಿಂಗಳುಗಳ ಕಾಲ ಮುಂದೂಡಲು ಸರ್ಕಾರಕ್ಕೆ ಸಲಹೆ ನೀಡಿತ್ತು. ಆರ್‌ಬಿಐ ಸಲಹೆಯನ್ನು ಬಹುತೇಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಒಪ್ಪಿಕೊಂಡಿವೆ. ಇನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮುಂದಿನ ಮೂರು ತಿಂಗಳು ಕೊರೋನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 1.7 ಲಕ್ಷ ಕೋಟಿ ರುಪಾಯಿಯ ಪ್ಯಾಕೇಜ್ ಘೋ‍ಷಿಸಿದೆ.  
 

Follow Us:
Download App:
  • android
  • ios