Asianet Suvarna News Asianet Suvarna News

ಚಿನ್ನ ಹಾಗೂ ಬೆಳ್ಳಿಗೆ ತಾಗದ ‘ಶನಿ: ವಾರ’ದಲ್ಲಿ ಮೊದಲ ಬಾರಿಗೆ ಇಳಿಕೆ!

ವಾರದ ಬಳಿಕ ಇಳಿಕೆಯತ್ತ ಮುಖ ಮಾಡಿದ ಚಿನ್ನದ ಬೆಲೆ| 10 ಗ್ರಾಂ ಚಿನ್ನದ ಬೆಲೆಯಲ್ಲಿ ಶೇ.0.52ರಷ್ಟು ಇಳಿಕೆ| ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 40,075 ರೂ.| ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಯಲ್ಲಿ ಶೇ.0.4ರಷ್ಟು ಇಳಿಕೆ| ಒಂದು ಕೆಜಿ ಬೆಳ್ಳಿ ಬೆಲೆ ಇದೀಗ 46,177 ರೂ.|  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಬಂಗಾರದ ಬೆಲೆ 1,560.50 ಡಾಲರ್| 

Gold and Silver Prices Decline In Local Market
Author
Bengaluru, First Published Jan 25, 2020, 4:51 PM IST

ನವದೆಹಲಿ(ಜ.25): ನಿರಂತರವಾಗಿ ಏರಿಕೆಯತ್ತಲೇ ಮುಖ ಮಾಡಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಶೇ.0.52ರಷ್ಟು ಇಳಿಕೆ ಕಂಡು ಬಂದಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 40,075 ರೂ. ಆಗಿದೆ.

ಒಟ್ಟು 2 ಸಾವಿರ ರೂ. ಇಳಿದ ಚಿನ್ನ: ಮತ್ತಷ್ಟು ಇಳಿಕೆಯ ಮುನ್ಸೂಚನೆ!

ಚೀನಾದಲ್ಲಿ ಕಂಡುಬಂದಿರುವ ಕರೋನಾ ವೈರಸ್ ಪರಿಣಾಮವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ವಹಿವಾಟು ತುಸು ಕಡಿಮೆಯಾಗಿದೆ. ಆದರೂ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿದಿರುವುದು ವಿಶೇಷ.

ಅದರಂತೆ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಶೇ.0.4ರಷ್ಟು ಇಳಿಕೆ ಕಾಣುವ ಮೂಲಕ ಒಂದು ಕೆಜಿ ಬೆಳ್ಳಿ ಬೆಲೆ ದೇಶೀಯ ಮಾರುಕಟ್ಟೆಯಲ್ಲಿ 46,177 ರೂ. ಆಗಿದೆ.

ಚಿನ್ನದ ಬೆಲೆ ಲೆಕ್ಕ ಹಾಕೋದ್ಹೇಗೆ?

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ.0.2ರಷ್ಟು ಇಳಿದ ಪರಿಣಾಮವಾಗಿ ಒಂದು ಔನ್ಸ್ ಬಂಗಾರದ ಬೆಲೆ 1,560.50 ಡಾಲರ್ ಆಗಿದೆ.

ಆದರೂ ಹೆಚ್ಚು ಕಡಿಮೆ 36 ಸಾವಿರ ರೂ. ಗಡಿ ತಲುಪಿದ್ದ ಚಿನ್ನದ ಬೆಲೆ ಇದೀಗ ಮತ್ತೆ 40 ಸಾವಿರ ರೂ. ಗಡಿ ತಲುಪಿರುವುದು ಆಭರಣ ಪ್ರಿಯರಲ್ಲಿ ಆತಂಕ ಮೂಡಿಸಿರುವುದು ಸುಳ್ಳಲ್ಲ.

ಮದುವೆ, ಮುಂಜಿ ಪ್ಲ್ಯಾನ್ ಇದೆಯಾ?: 45 ಸಾವಿರ ರೂ. ಗಡಿ ದಾಟಲಿದೆ ಚಿನ್ನ!

ಅಲ್ಲದೇ ಚಿನ್ನ ಬೆಲೆ 45 ಸಾವಿರ ರೂ. ಗಡಿ ದಾಟಬಹುದು ಎಂಬ ತಜ್ಞರ ಊಹೆ ಕೂಡ ದೇಶೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಜನವರಿ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios