ತೈಲ ಸಂಗ್ರಹಕ್ಕಾಗಿ ಭೂಗತ ಗುಹೆಗಳ ಗುತ್ತಿಗೆ ನೀಡಲು ಭಾರತದ ನಿರ್ಧಾರ, ಉಡುಪಿ ಪಾದೂರಿನ ಹಕ್ಕು ಪಡೆದ ಅಬುದಾಭಿ!
ಪೆಟ್ರೋಲಿಯಂ ಮೀಸಲು ಭಾಗವಾಗಿ ಹೈಡ್ರೋಕಾರ್ಬನ್‌ಗಳನ್ನು ಸಂಗ್ರಹಿಸಲು ಮೂಲತಃ ಉದ್ದೇಶಿಸಲಾದ ಭೂಗತ ಕಲ್ಲಿನ ಗುಹೆಗಳನ್ನು ಗುತ್ತಿಗೆಗೆ ನೀಡಲು ಭಾರತ ಸರ್ಕಾರ ನಿರ್ಧರಿಸಿದೆ. ಜಾಗತಿಕ ತೈಲ ಮಾರುಕಟ್ಟೆಯ ಪ್ರವೃತ್ತಿಯನ್ನು ಬದಲಾಯಿಸುವ ಈ ನಿರ್ಧಾರವು ಇಂಧನ ಭದ್ರತೆಗಾಗಿ ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿದೆ.
ನವದೆಹಲಿ (ಫೆ.6): ದೇಶದ ಪೆಟ್ರೋಲಿಯಂ ಮೀಸಲು ಭಾಗವಾಗಿ ಹೈಡ್ರೋಕಾರ್ಬನ್‌ಗಳನ್ನು ಸಂಗ್ರಹಿಸಲು ನಿಗದಿ ಮಾಡಲಾಗಿದ್ದ ಭೂಗತ ಕಲ್ಲಿನ ಗುಹೆಗಳ ಜಾಗವನ್ನು ಗುತ್ತಿಗೆ ನೀಡುವ ಯೋಜನೆಯನ್ನು ಭಾರತ ಸರ್ಕಾರವು ಅನಾವರಣಗೊಳಿಸಿದೆ. ಜಾಗತಿಕ ತೈಲ ಮಾರುಕಟ್ಟೆಗಳಲ್ಲಿನ ಭವಿಷ್ಯದ ಪ್ರವೃತ್ತಿಗಳಿಗೆ ಪ್ರತಿಕ್ರಿಯೆಯಾಗಿ ಕಾರ್ಯತಂತ್ರದ ಬದಲಾವಣೆಯ ನಂತರ ಈ ನಿರ್ಧಾರ ಬಂದಿದೆ. ಇಂಧನ ಭದ್ರತೆಗಾಗಿ ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಉತ್ತಮಗೊಳಿಸುವ ಅಗತ್ಯವನ್ನು ಭಾರತ ಹೊಂದಿದೆ. ಪಿಟಿಐ ವರದಿ ಮಾಡಿರುವ ಸುದ್ದಿಯಲ್ಲಿ, ಶೇಖರಣಾ ಸೌಲಭ್ಯಗಳನ್ನು ಬಾಡಿಗೆಗೆ ನೀಡುವ ಎಕ್ಸ್‌ಪ್ರೆಶನ್ ಆಫ್ ಇಂಟ್ರಸ್ಟ್ ಅರ್ಜಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಹೇಳಿದೆ. ಈ ಭೂಗತ ಶೇಖರಣಾ ಸೌಲಭ್ಯಗಳು ದಕ್ಷಿಣ ಭಾರತದ ಮೂರು ನಗರಗಳಲ್ಲಿದೆ. ವಿಶಾಖಪಟ್ಟಣಂ, ಮಂಗಳೂರು ಮತ್ತು ಉಡುಪಿಯ ಪಾದೂರುಗಳಲ್ಲಿ ನೆಲೆಗೊಂಡಿವೆ. ಆರಂಭದಲ್ಲಿ ಇಂಡಿಯಾ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್‌ನಿಂದ ಒಟ್ಟು 5.33 ಮಿಲಿಯನ್ ಟನ್ ತೈಲವನ್ನು ಸಂಗ್ರಹಿಸಲು ಇದನ್ನು ನಿರ್ಮಿಸಲಾಗಿತ್ತು. ಯುದ್ಧ ಅಥವಾ ಪೆಟ್ರೋಲಿಯಂ ಪೂರೈಕೆಯ ಅಡೆತಡೆಗಳು ಉಂಟಾದಂಥ ಪರಿಸ್ಥಿತಿಯಲ್ಲಿ ವಿನಿಯೋಗಿಸುವ ಸಲುವಾಗಿ ಇದನ್ನು ನಿರ್ಮಾಣ ಮಾಡಲಾಗಿತ್ತು.
ಭೂಗತ ಗುಹೆಗಳನ್ನು ಗುತ್ತಿಗೆಗೆ ನೀಡುವ ಕ್ರಮವು ಬದಲಾಗುತ್ತಿರುವ ಮಾರುಕಟ್ಟೆಯ ಡೈನಾಮಿಕ್ಸ್‌ಗೆ ಭಾರತದ ಹೊಂದಾಣಿಕೆಯನ್ನು ತಿಳಿಸಿದ್ದು ಮಾತ್ರವಲ್ಲದೆ ಇಂಧನ ಭದ್ರತೆಯ ವಿಚಾರದಲ್ಲಿ ಅದರ ಪ್ರಯತ್ನಗಳನ್ನು ತಿಳಿಸಿದೆ. ಕೇಂದ್ರ ಬಜೆಟ್‌ನಲ್ಲಿ ಕಚ್ಚಾ ತೈಲದಿಂದ ಗುಹೆಗಳನ್ನು ತುಂಬುವ ಯೋಜನೆಗಳನ್ನು ಮುಂದೂಡಿಕೆ ಮಾಡಲಾಗಿತ್ತು, ವಿಕಾಸಗೊಳ್ಳುತ್ತಿರುವ ಶಕ್ತಿಯ ಅಗತ್ಯಗಳನ್ನು ಪೂರೈಸಲು ಮತ್ತು ವಾಣಿಜ್ಯ ಬಳಕೆಯನ್ನು ಉತ್ತೇಜಿಸಲು ಈ ಸ್ವತ್ತುಗಳನ್ನು ಗುತ್ತಿಗೆ ನೀಡಿ ಆದಾಯ ತರುವ ಗುರಿಯನ್ನು ಸರ್ಕಾರ ಹೊಂದಿದೆ.
ಪ್ರಸ್ತುತ, ಅಬುಧಾಬಿಯ ನ್ಯಾಷನಲ್ ಆಯಿಲ್ ಕಂಪನಿ (ಅಡ್ನೋಕ್) ಈಗಾಗಲೇ ಉಡುಪಿಯ ಪಾದೂರಿನಲ್ಲಿ ಶೇಖರಣಾ ಸಾಮರ್ಥ್ಯದ ಅರ್ಧದಷ್ಟು ಮತ್ತು ಮಂಗಳೂರಿನಲ್ಲಿ 1.5 ಮಿಲಿಯನ್ ಟನ್‌ಗಳಿಗೆ ಗುತ್ತಿಗೆ ಹಕ್ಕುಗಳನ್ನು ಪಡೆದುಕೊಂಡಿದೆ. ಆದಾಗ್ಯೂ, ಮಂಗಳೂರಿನಲ್ಲಿ 0.75 ಮಿಲಿಯನ್ ಟನ್‌ಗಳು ಮತ್ತು ವಿಶಾಖಪಟ್ಟಣಂನಲ್ಲಿ ಖಾಲಿ ಇರುವ ಭಾಗವನ್ನು ಒಳಗೊಂಡಂತೆ ಗಮನಾರ್ಹವಾದ ಶೇಖರಣಾ ಸ್ಥಳವು ಲಭ್ಯವಿರುತ್ತದೆ, ಇದೂ ಕೂಡ ಗುತ್ತಿಗೆಗೆ ಲಭ್ಯವಿರುತ್ತದೆ ಎಂದು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ನ CEO ಮತ್ತು ವ್ಯವಸ್ಥಾಪಕ ನಿರ್ದೇಶಕ ಎಲ್.ಆರ್. ಜೈನ್ ಅವರು ಖಚಿತಪಡಿಸಿದ್ದಾರೆ.
ಅಡ್ನಾಕ್‌ನಂತಹ ಅಂತರರಾಷ್ಟ್ರೀಯ ಕಂಪನಿಗಳು ಈ ನಿಕ್ಷೇಪಗಳಲ್ಲಿ ತೈಲವನ್ನು ಸಂಗ್ರಹಿಸಬಹುದಾದರೂ, ಈ ತೈಲವನ್ನು ಬಳಕೆ ಮಾಡುವ ಮೊದಲ ಅವಕಾಶ ಭಾರತಕ್ಕೆ ಇರಲಿದೆ. ತುರ್ತು ಸಂದರ್ಭಗಳಲ್ಲಿ ಇದನ್ನು ನಾವು ಬಳಸಿಕೊಳ್ಳಬಹುದು ಎಂದು ಜೈನ್ ತಿಳಿಸಿದ್ದಾರೆ.
30 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ದಾಟಿದ ದೇಶದ ಮೊದಲ ಕಂಪನಿ ಎನಿಸಿಕೊಂಡ ಟಾಟಾ ಗ್ರೂಪ್!
ಗುತ್ತಿಗೆಗೆ ನೀಡುವ ನಿರ್ಧಾರವು ಭಾರತದ ಶಕ್ತಿ ನಿರ್ವಹಣಾ ವಿಧಾನದಲ್ಲಿ ಕಾರ್ಯತಂತ್ರದ ಭಾಗವನ್ನು ಗುರುತಿಸುತ್ತದೆ, ಇದು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕರ ಸ್ಥಾನಮಾನದೊಂದಿಗೆ ಹೊಂದಾಣಿಕೆಯಾಗುತ್ತದೆ.
84 ಲಕ್ಷ ರೂ. ಸಂಬಳದ ಕೆಲಸ ಬಿಟ್ಟು 100 ಕೋಟಿ ರೂ. ಉದ್ಯಮ ಕಟ್ಟಿದ ಐಐಟಿ ಪದವೀಧರ